ರಾಷ್ಟ್ರೀಯ ಸುದ್ದಿಗಳು

ಬೆಂಗಳೂರಿಗೆ ಶರಾವತಿ ನೀರು ಹರಿಸುವ ಪ್ರಸ್ತಾವನೆ ಇಲ್ಲ‌-ಜಾರ್ಜ್ ಸ್ಪಷ್ಟನೆ

ಸುದ್ದಿಲೈವ್/ಶಿವಮೊಗ್ಗ

ಶರಾವತಿಗೆ ಪಂಪ್ ಸ್ಟೋರೇಜ್ ಮಾಡಲು ಅನುದಾನ ಬಿಡುಗಡೆ ಆಗಿದೆ. ಬಳಕೆಯಾದ ನೀರನ್ನು ಬಳಸಿಕೊಂಡು ವಿದ್ಯುತ್ ಉತ್ಪಾದನೆ ಮಾಡಬಹುದಾಗಿದೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಚ್ ತಿಳಿಸಿದರು.

ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ಸ್ಟೋರೇಜ್ ನಿಂದ  24 ಗಂಟೆಯೂ ವಿದ್ಯುತ್ ಉತ್ಪಾದನೆ ಮಾಡಬಹುದಾಗಿದೆ.ಶಿವಮೊಗ್ಗ ಜಿಲ್ಲೆಯಲ್ಲಿ ನಿರಂತರ ಜ್ಯೋತಿ ಯೋಜನೆಯಲ್ಲಿ ಅವ್ಯವಾರ ನಡೆದು ವರ್ಷವಾದರೂ ಕ್ರಮ ಕೈಗೊಂಡಿಲ್ಲ  ಎಂದು ಮಾಧ್ಯಮ ಪ್ರಶ್ನೆಗೆ ಉತ್ತರಿಸಿದ ಸಚಿವರುಯಾರೇ ತಪ್ಪು ಮಾಡಿದರೂ ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದರು.

ಇಂದು ಪ್ರಗತಿ ಪರಿಶೀಲನೆ ಸಭೆ ನಡೆಸುತ್ತಿದ್ದು ಈ ಪ್ರಕರಣದ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತೇನೆ. ಗ್ಯಾರೆಂಟಿ ಯೋಜನೆಗಳನ್ನು ರದ್ದು ಮಾಡುವ ಹೇಳಿಕೆಗಳನ್ನು ಬಿಜೆಪಿಯವರು ನೀಡುತ್ತಿದ್ದಾರೆ.ಶಾಸಕ ಬಾಲಕೃಷ್ಣ ಗ್ಯಾರಂಟಿ ರದ್ದಾಗುವ ಬಗ್ಗೆ ನೀಡುವ ಹೇಳಿಕೆ ಮುಖ್ಯವೋ ಸಿಎಂ ನೀಡುವ ಹೇಳಿಕೆ ಮುಖ್ಯವೋ ಎಂದು ಮರು ಪ್ರಶ್ನಿಸಿದರು.

ಸಿಎಂ ಸಿದ್ದರಾಮಯ್ಯ ಯಾವುದೇ ಗ್ಯಾರೆಂಟಿ ಯೋಜನೆಗಳನ್ನು ರದ್ದು ಮಾಡುವುದಿಲ್ಲ ಎಂದು ಹೇಳಿದ್ದಾರೆ.ಬಂಗಾರಪ್ಪನವರು ಸಿಎಂ ಆಗಿದ್ದಾಗ ನಾನು ಸಚಿವನಾಗಿದ್ದೆ ಅಂದು ಕೃಷಿ ಪಂಪ್ ಸೆಟ್ ಗಳಿಗೆ ಉಚಿತ ವಿದ್ಯುತ್ ನೀಡಿದ್ದನು ರದ್ದು ಮಾಡಿದ್ದೇವಾ? ಎಂದು ಪ್ರಶ್ನಿಸಿದರು.

ಜನಹಿತ ಕಾರ್ಯಗಳನ್ನು ಕಾಂಗ್ರೆಸ್ ಪಕ್ಷ ಯಾವಾಗಲೂ ಮುಂದುವರಿಸಿಕೊಂಡು ಬರುತ್ತದೆ. ಸಂಸದ ಡಿಕೆ ಸುರೇಶ್ ಪ್ರತ್ಯೇಕ ರಾಷ್ಟ್ರದ ಹೇಳಿಕೆ ನೀಡಿದ್ದು ಅದಕ್ಕೆ ಸಿಎಂ ಸಿದ್ದರಾಮಯ್ಯ ಹಾಗೂ ಮಲ್ಲಿಕಾರ್ಜುನ ಖರ್ಗೆಯವರು  ಪ್ರತಿಕ್ರಿಯೆ ನೀಡಿದ್ದಾರೆ.  ನಾನು ಅವರ ಹೇಳಿಕೆಗೆ ಬದ್ದನಾಗಿದ್ದೇನೆ ಎಂದರು.

ಈಶ್ವರಪ್ಪನವರು ಹೇಳಿದ ತಕ್ಷಣ ಉತ್ತರ ಕೊಡಲು ಆಗುತ್ತದೋ ಎಂದು ಪ್ರಶ್ನಿಸಿದ ಸಚಿವರು. ಶರಾವತಿ ನದಿ ನೀರನ್ನು ಬೆಂಗಳೂರಿಗೆ ತೆಗೆದುಕೊಂಡು ಹೋಗುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ ಈ ಬಗ್ಗೆ ಪ್ರಸ್ತಾಪ ನಡೆದಿಲ್ಲ ಬೆಂಗಳೂರಿಗಾಗಿ ಮೇಕೆದಾಟು ಯೋಜನೆ, ಆರಂಭಗೊಳ್ಳುತ್ತಿದೆ ಎಂದರು.

ಇದನ್ನೂ ಓದಿ-https://suddilive.in/archives/8334

Related Articles

Leave a Reply

Your email address will not be published. Required fields are marked *

Back to top button