ಪಿಐ ಮುಂದೆ ಅವಾಜ್ ಹಾಕಿದ ವ್ಯಕ್ತಿ ಅರೆಸ್ಟ್-ಆರೋಪಿಗಳ ಸ್ಥಳ ಮಹಜರ್

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗ ರಾಗಿಗುಡ್ಡದಲ್ಲಿ ನಡೆದ ಗಲಭೆ ದಿನದಂದು ಕುಂಸಿ ಪಿಐ ಹರೀಶ್ ಪಾಟೀಲ್ ಎದುರು ಹಿಂದೂ ಸಮಾಜದ ವಿರುದ್ಧ ಆವಾಜ್ ಹಾಕಿದ್ದ ವಿಡಿಯೋವೊಂದು ವೈರಲ್ ಆಗಿತ್ತು. ವೈರಲ್ ಆದ ವಿಡಿಯೋದಲ್ಲಿರುವ ಆರೋಪಿಯನ್ನ ಶಿವಮೊಗ್ಗ ಪೊಲೀಸರು ಬಂಧಿಸಿದ್ದಾರೆ.
ಪಿಐ ಹರೀಶ್ ಪಾಟೀಲ್ ಈದ್ ಮೆರವಣಿಗೆಯ ವೇಳೆ ಕರ್ತವ್ಯದಲ್ಲಿದ್ದಾಗ ಹತ್ತಿರ ಬಂದ ವ್ಯಕ್ತಿ “ಯಾವುದಕ್ಕೂ ಗಲಾಟೆ ಯಾಗಿಲ್ಲ ಗಲಭೆ ನಡೆದರೆ ಗಣಫತಿ ಹಬ್ಬಕ್ಕೂ ಗಲಾಟೆ ನಡೆದಿಲ್ಲ. ಗೊತ್ತಲ್ಲ ನಾವು ಯಾವುದಕ್ಕೂ ಹೆದರೊಲ್ಲ ಒಂದೋ ಅವರಿರಬೇಕು ಒಂದೂ ನಾವಿರಬೇಕು ಎಂದು ಅವಾಜ್ ಹಾಕಿದ ವಿಡಿಯೋ ಟಿವಿ ಮಾಧ್ಯಮದಲ್ಲಿ ಸುದ್ದಿಯೂ ಆಗಿತ್ತು.
ಸುದ್ದಿಗೋಷ್ಠಿಯಲ್ಲಿಯೂ ಈ ವಿಡಿಯೋ ಬಗ್ಗೆ ಮಾಧ್ಯಮದವರು ಪ್ರಶ್ನಿಸಿದ್ದರು. ಯಾವ ವಿಡಿಯೋ ಇದೆ ಕೊಡಿ ಪರಿಶೀಲಿಸಲಾಗುವುದು ಎಂದು ಎಸ್ಪಿ ಹೇಳಿದ್ದರು.ಆದರೆ ಗಲಭೆ ನಡೆದ ದಿನವೇ ಆತ ಬಂಧಿತನಾಗಿದ್ದ. ಖಲೀಮ್ ಎಂದು ಆತನನ್ನ ಗುರುತಿಸಲಾಗಿದೆ.
ಸ್ಥಳ ಮಹಜರ್
ರಾಗಿಗುಡ್ಡ ಗಲಭೆ ಪ್ರಕರಣದಲ್ಲಿ 24 ಎಫ್ಐಆರ್ ಆಗಿದ್ದು 60 ಜನರನ್ನ ಬಂಧಿಸಲಾಗಿತ್ತು. ಈ ಪ್ರಕರಣಕ್ಕೆ ಸಂಧಿಸಿದಂತೆ 60 ಜನರ ಸ್ಥಳ ಮಹಜರ್ ಆಗಿದೆ.
ಸಾಗರದಲ್ಲಿ ಬಂಧನ
ಸಾಗರದಲ್ಲಿ ಈದ್ ಮೆರವಣಿಗೆ ಸಮಯದಲ್ಲಿ ತಲ್ವಾರ್ ಪ್ರದರ್ಶಿಸಿದವರ ವಿರುದ್ಧವೂ ದೂರು ಸಲ್ಲಿಕೆಯಾಗಿದ್ದು ಈ ಹಿನ್ನಲೆಯಲ್ಲಿ ಮೂವರ ವಿರುದ್ಧ ಕ್ರಮ ಜರುಗಿಸಲಾಗುತ್ತಿದೆ.
ಇದನ್ಬೂ ಓದಿ-https://suddilive.in/2023/10/03/451/https://suddilive.in/2023/10/03/451/
