ಕ್ರೈಂ ನ್ಯೂಸ್

ಹಾರನ್ ಹೊಡೆದಿದ್ದಕ್ಕೆ ಥಳಿತ

ಸುದ್ದಿಲೈವ್/ಶಿವಮೊಗ್ಗ

ರಸ್ತೆಗೆ ಅಡ್ಡಲಾಗಿ ನಿಂತಿದ್ದ ವಾಹನಕ್ಕೆ ಹಾರನ್ ಹೊಡೆದ ಕಾರಣ ಯುವಕನನ್ನ ನಡು ರಸ್ತೆಯಲ್ಲಿ ಥಳಿಸಿರುವ ಘಟನೆ ನಡೆದಿದೆ.

ಎಸ್ ಹೆಚ್ ಕ್ಯಾಟರಿಂಗ್ ನಲ್ಲಿ ಕೆಲಸ ಮಾಡುವ ಗಗನ್ ಜ.8 ರಂದು ಕಂಟ್ರಿಕ್ಲಬ್ ನಲ್ಲಿ ಊಟದ ಆರ್ಡರ್ ಇದ್ದ ಕಾರಣ ಹರಕೆರದ ಬಳಿ ಸಂಸ್ಥೆಯ ಗೋದಾಮಿನಲ್ಲಿ ಬೊಲೆರೋ ಪಿಕಪ್ ಇದ್ದು, ಅದನ್ನ ವಿನೋಭನಗರದ ಶುಭಮಂಗಳದ ಬಳಿ ತೆಗೆದುಕೊಂಡು ಹೋಗುವಾಗ ನ್ಯೂ ಮಂಡ್ಲಿ ವೃತ್ತದ ಬಳಿ ಟ್ರಾಫಿಕ್ ಜ್ಯಾಮ್ ಆಗಿತ್ತು.

ಟ್ರಾಫಿಕ್ ಜ್ಯಾಮ್ ಆದ ಕಾರಣ ಮುಂದೆ ಕಾರೊಂದು ಚಲಿಸದೆ ಅಡ್ಡ ನಿಂತಿದ್ದರಿಂದ ಪಿಕಪ್ ನ್ನ‌ ಚಲಾಯಿಸುತ್ತಿದ್ದ ಗಗನ್ ಹಾರನ್ ಹೊಡೆದಿದ್ದಾನೆ. ಬೀಡಾ ಅಂಗಡಿಯಬಳಿ ಮೂವರ ಜೊತೆಯಲ್ಲಿದ್ದ ಇರ್ಫಾನ್ ಬೈಯ್ಯುತ್ತಲೇ ಬಂದಿದ್ದಾನೆ. ಯಾಕೆ ಬೈಯುತ್ತೀರಾ? ವಾಹನ ತೆಗೆಯಿರಿ ಅಡ್ಡ ನಿಲ್ಸುದ್ರೆ ಹೇಗೆ ಎಂದು ಕೇಳಿದ್ದಾನೆ.

ನಮ್ಮ ಏರಿಯಾಕ್ಕೆ ಬಂದು‌ ನಮಗೆ ಅವಾಜ್ ಹಾಕ್ತ್ಯಾ ಎಂದು ಇರ್ಫಾನ್ ಗದಿರಿಸಿದ್ದಾನೆ. ಗಗನ್ ನ‌ ಕೆನ್ನೆಗೆ ಬಾರಿಸಿ ಡಿಚ್ಚಿ ಹೊಡೆದಿದ್ದಾನೆ. ಜೊತೆಯಲ್ಲಿದ್ದವರಿಗೆ ಥಳಿಸಿದ್ದಾನೆ. ನಂತರ ಶಿವು ಗಲಾಟೆ ಬಿಡಿಸಲು ಯತ್ನಿದಿದ್ದಾನೆ. ನಾನು ಇದೇ ಏರಿಯಾ ಬಿಟ್ಟು ಬಿಡಿ ಎಂದು ಶಿವುಕುಮಾರ್ ಕೇಳಿಕೊಂಡಾಗ ಬಿಟ್ಟಿದ್ದಾನೆ. ಈ ಕುರಿತು ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಇದನ್ನೂ ಓದಿ-https://suddilive.in/archives/6492

Related Articles

Leave a Reply

Your email address will not be published. Required fields are marked *

Back to top button