ಕ್ಷುಲ್ಲಕ ಕಾರಣಕ್ಕೆ ಯುವಕನನ್ನ ಬೆತ್ತಲೆಗೊಳಿಸಿ ಬಿಯರ್ ಸುರಿದು ಹಲ್ಲೆ-ದೂರು ದಾಖಲು

ಸುದ್ದಿಲೈವ್/ಶಿವಮೊಗ್ಗ

ಮೊಬೈಲ್ ಅಡವಿಟ್ಟು ಸಾಲಪಡೆದು ನಂತರ ಹಣಕೊಟ್ಟು ಬಿಡಿಸಿಕೊಳ್ಳಲು ಹೋದವನಿಗೆ ಬೇರೆ ಮೊಬೈಲ್ ಕೊಟ್ಟು ಕಳುಹಿಸಲಾಗಿತ್ತು. ಈ ಘಟನೆ ಜಾತಿನಿಂದನೆ, ಬೆತ್ತಲೆಗೊಳಿಸಿ ಥಳಿತಕ್ಕೆ ಕಾರಣವಾಗಿದ್ದು ವಿನೋಬನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕಳೆದ 5 ತಿಂಗಳ ಹಿಂದೆ ಬಸವಗಂಗೂರಿನಲ್ಲಿ ಆರುಣ ಬಿನ್ ದ್ರಾಕ್ಷಾಯಣಮ್ಮ ಇವನ ಹತ್ತಿರ ಕೆಲಸಕ್ಕೆ ಹೋಗುತ್ತಿದ್ದ ಕೋಟಿ ಎಂಬ ಯುವಕ 6 ಸಾವಿರ ರೂ ಹಣ ಸಾಲ ತೆಗೆದುಕೊಂಡಿದ್ದನು. ಆ ಹಣಕ್ಕೆ ಅರುಣ ಕೋಟಿ ಬಳಿ ಇದ್ದ 18 ಸಾವಿರ ರೂ ಬೆಲೆ ಬಾಳುವ ಒಪೋ ಮೊಬೈಲ್ ಕಿತ್ತಕೊಂಡಿದ್ದನು.
ನಂತರ ಕೋಟಿ 6 ಸಾವಿರ ಹಣಜೋಡಿಸಿ ಅವನಿಗೆ ವಾಪಾಸ್ ಕೊಟ್ಟು, ಮೊಬೈಲ್ ಕೊಡು ಎಂದು ಕೇಳಿದ್ದಾನೆ. ಆದರೆ ಅರುಣ್ ಕೋಟಿಗೆ ಹೆದರಿಸಿ ನಿನ್ನ ಮೊಬೈಲ್ ಕಳೆದು ಹೋಗಿದೆ ಎಂದು ಹೇಳಿ ಯಾವುದೋ ಹಳೆ ಮೊಬೈಲ್ ಕೊಟ್ಟು ಕಳುಹಿಸಿದ್ದನು. ಇದನ್ನು ಮನಸ್ಸಿನಲ್ಲಿಟ್ಟುಕೊಂಡ ಅರುಣ್ ಮೊನ್ನೆ ಅ.02 ರಂದು ಹುಷಾರಿಲ್ಲದೆ ಮನೆಯಲ್ಲಿ ಮಲಗಿದ್ದ ಕೋಟಿಯನ್ನ ಅಭಿಷೇಕ್ ಬಿನ್ ಆನಂದರಾವ್ ಮೊಬೆಲ್ ಕರೆ ಮಾಡಿ, ನಿನ್ನ ಹತ್ತಿರ ಮಾತನಾಡಬೇಕು ಬಾ ಎಂದು ನಮ್ಮ ಮನೆಯ ಹಿಂಬದಿಯಿಂದ ಕರೆದುಕೊಂಡು ಹೋಗಿದ್ದರು.
ಅಭಿಷೇಕ್ ಮತ್ತು ಅರುಣ ಇಬ್ಬರು ಸೈಂಡರ್ ಬೈಕಿನಲಿ ಕೋಟಿಯನ್ನ ಕೂರಿಸಿಕೊಂಡು, ಅಬ್ಬಲಗೆರೆ ಹತ್ತಿರ ಚಾನಲ್ ಏರಿಯ ಮೇಲೆ ಕರೆದುಕೊಂಡು ಹೋಗಿ ಯೋಗೇಶ್ ಬಿನ್ ಜಯಪ್ಪ ಮತ್ತು ಅಯ್ಯ ಇಬ್ಬರು ಇದ್ದರು, ಇವರುಗಳೆಲ್ಲಾ ಸೇರಿಕೊಂಡು ಕೋಟಿಗೆ ಅವ್ಯಾಚ್ಯ ಪದಗಳಿಂದ ಬೈದು, ಬಹಳ ಮೆರಿತಿದ್ದೀಯ ನಮ್ಮನೆ ಎದುರು ಹಾಕೋತೀಯ ಎಂದು ಬೈದು ದೊಣೆ ಗಳನ್ನು ತೆಗೆದುಕೊಂಡು ಯೋಗೇಶ ಬಟ್ಟೆಯನ್ನೆಲಾ ಬಿಚ್ಚಿ ಬೆತ್ತಲೆ ಗೊಳಿಸಿ ನನ್ನ ಮೇಲೆ ಬಿಯರ್ ಸುರಿದು ಇವತ್ತು ನಿನ್ನ ಕತೆ ಮುಗಿಯಿತು ಎಂದು ದೊಣೆಯಿಂದ ಮನಬಂದಂತೆ ಬೆನ್ನಿಗೆ ಹೊಡೆದಿರುವುದಾಗಿ ದೂರು ದಾಖಲಾಗಿದೆ.
ಯೋಗೇಶ್ ಇವನು ಅವನ ಮೊಬೈಲ್ ನಲಿ, ವಿಡೀಯೋ ಮಾಡಿಕೊಂಡಿದ್ದಾನೆ ಎಂದು ದೂರಲಾಗಿದೆ. ಅಭಿಷೇಕ್ ಕೋಟಿಗೆ ಜಾತಿ ನಿಂದನೆ ಮಾಡಿ ಆತನ ಸೊಂಟದಲ್ಲಿಟ್ಟಿದ್ದ ಚಾಕು ತೆಗೆದು ಕೋಟಿಯ ಬೆನ್ನಿಗೆ ಹಾಕಲು ಮುಂದಾದಾಗ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾನೆ. ನಂತರ ಕರೆದುಕೊಂಡು ಹೋಗಿ ವಿನೋಬನಗರ ಪೊಲೀಸ್ ಠಾಣೆ ವ್ಯಾಪ್ತಿಯ ಶಿವಾಲಯದ ಬಳಿ ಕೋಟಿಯನ್ನಬಿಡಲಾಗಿದೆ. ಈ ವಿಷಯ ಯಾರಿಗಾದರು ಹೇಳಿದ ಕೊಲೆ ಮಾಡುತ್ತೇವೆಂದು ಹೆದರಿಸಲಾಗಿದೆ.
ಇದೇ ಗ್ಯಾಂಗ್ ಪುನಃ 20 ಜನ ಅಪರಿಚಿತ ರೌಡಿಗಳನ್ನು ಕರೆದುಕೊಂಡು ಬಂದು 11.00 ಗಂಟೆ ಸುಮಾರಿಗೆ ನಾವು ಯಾರಿಗೂ ಹೇಳಬೇಡ ಎಂದು ಬಾಯಿ ಬಿಟ್ಟಿದೀಯ ಎಂದು ಹಲ್ಲೆ ಮಾಡಿದೆ. ವಿಷಯ ತಿಳಿದ ಕೋಟಿ ತಾಯಿ ನೀಲಮ್ಮ ದೊಡ್ಡಪ್ಪ, ರುದ್ರೇಶಪ್ಪ, ದೊಡ್ಡಮ್ಮ ದ್ರಾಕ್ಷಾಯಣಮ್ಮ ಇನ್ನು ಮುಂತಾದವರು ಬರುವುದನ್ನು ನೋಡಿ ಇಷ್ಟಕ್ಕೆ ಬಿಡಲ್ಲ ಎಂದು ಹೇಳಿ ಹೊರಟು ಹೋಗಿದ್ದಾರೆ. ಈ ಬಗ್ಗೆ ವಿನಫಬ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.
