ನಟರಾಜನ ಹೈಡ್ರಾಮ!

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗದ ವಿನೋಬ ನಗರ ಠಾಣೆಯ ಶಿವಪ್ಪ ನಾಯಕ ಬಡಾವಣೆಯಲ್ಲಿ ಯುವಕನೋರ್ವ ವಾಟರ್ ಟ್ಯಾಂಕ್ ಹತ್ತಿ ಆತ್ಮಹತ್ಯೆಯ ಹೈಡ್ರಾಮ ನಡೆಸಿದ್ದು ನಂತರ ಆತನ ಮನವೊಲಿಸಿ ಕೆಳಗೆ ಇಳಿಸಿದ ಘಟನೆ ನಡೆದಿದೆ.
ಸಂಜೆ 7-15 ಕ್ಕೆ ಈ ಡ್ರಾಮ ನಡೆದಿದೆ. ಕಾಶೀಪುರದ ನಿವಾಸಿ ಹಾಗೂ ಆಟೋ ಚಲಾಯಿಸಿಕೊಂಡು ಜೀವನ ಸಾಗಿಸುತ್ತಿದ್ದ ನಟರಾಜ್ ಯಾನೆ ನಟ ವಾಟರ್ ಟ್ಯಾಂಕ್ ಹತ್ತಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ್ದಾನೆ.
ಇದನ್ನ ಕಂಡ ಕರ್ನಾಟಕ ರಾಜ್ಯ ಕುಡಿಯುವ ನೀರು ಮತ್ತು ಒಳಚರಂಡಿ ನಿಗಮದ ಆ ಭಾಗದ ಸೂಪರ್ ವೈಜರ್ ಆಗಿರುವ ಮೋಹನ್ ಗೆ ವಾಟರ್ ಟ್ಯಾಂಕ್ ಮೇಲೆ ವ್ಯಕ್ತಿ ಹತ್ತಿರುವ ಬಗ್ಗೆ ಕರೆ ಬಂದಿದೆ. ಅದಕ್ಕೆ ನೈಟ್ ರೌಂಡ್ಸ್ ಸಿಬ್ಬಂದಿಯನ್ನ ಕಳುಹಿಸಿದ್ದಾರೆ. ಅವರ ಕೈಯಲ್ಲೂ ಆಗದ ಕಾರಣ ಸ್ವತಃ ಮೋಹನ್ ಬಂದಿದ್ದಾರೆ.
ಮೋಹನ್ ಸಹ ನಟನ ಮನವೊಲಿಸಲು ಯತ್ನಿಸಿದ್ದಾರೆ. ಅಷ್ಟು ಹೊತ್ತಿಗೆ ಪೊಲೀಸ್ ಮತ್ತು ಅಗ್ನಿಶಾಮಕ ದಳಕ್ಕೆ ಸ್ಥಳೀಯರು ಕರೆ ಮಾಡಿದ್ದಾರೆ. ಸ್ಥಳೀಯರು ಸಹ ಮಬೆಯಿಂದ ಹೊರ ಬಂದು ವೀಕ್ಷಿಸಲು ಆರಂಭಿಸಿದ್ದಾರೆ. ಮೋಹನ್ ಯುವಕನೊಂದಿಗೆ ಸ್ವಲ್ಪ ಹೊತ್ತು ಅಲ್ಲೆ ಕುಳಿತು ಸೆಲ್ಫಿ ತೆಗೆದು ಮನವೊಲಿಸಲು ಯತ್ನಿಸಿದ್ದಾರೆ.
ಅಷ್ಟರೊಳಗೆ ಅಗ್ನಿಶಾಮಕ ದಳದ ಸಿಬ್ಬಂದಿ ಬಂದು ಟ್ಯಾಂಕ್ ನಿಂದ ಯುವಕನನ್ನ ಕೆಳೆಗೆ ಕರೆತಂದಿದ್ದಾರೆ. ನಂತರ ಆತನನ್ನ ವಿನೋಬ ನಗರ ಠಾಣೆಗೆ ಕರೆತರಲಾಗಿದೆ. ಕುಡಿದು ಈ ರೀತಿ ಯುವಕ ಈ ರೀತಿ ಯತ್ನಿಸಿರುವುದಾಗಿ ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ-https://suddilive.in/archives/602
