ಕಾಲ ಅನ್ವರ್ ಅಂದರ್-ಯಾರು ಗೊತ್ತ ಈ ಕಾಲ ಅನ್ವರ್?


ಸುದ್ದಿಲೈವ್/ಶಿವಮೊಗ್ಗ
ನ್ಯಾಯಾಲಯಕ್ಕೆ ಹಾಜರಾಗದೆ ಸಾರ್ವಜನಿಕರ ಜೊತೆ ಬೀದಿ ಜಗಳವಾಡುತ್ತಿದ್ದ ರೌಡಿ ಶೀಟರ್ ಓರ್ವನನ್ನ ದೊಡ್ಡಪೇಟೆ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ. ಆತನನ್ನಬಂಧಿಸಿದ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.
ನಗರದ ವಿವಿಧ ಠಾಣೆಯಲ್ಲಿ 11 ಪ್ರಕರಣಗಳಿಗೆ ಬೇಕಾಗಿದ್ದ ಕಾಲ ಅನ್ವರ್ ಬುದ್ಧನಗರದಲ್ಲಿ ಇರ್ಫಾನ್ ಎಂಬಾತನನೊಂದಿಗೆ ಗಲಾಟೆಗೆ ನಿಂತಿದ್ದನು. ಗಲಾಟೆ ಮಾಡಿಕೊಳ್ಳುತ್ತಿದ್ದ ಕಾಲಾ ಅನ್ವರ್ ನನ್ನ ಹಿಡಿಯಲು ದೊಡ್ಡಪೇಟೆ ಪೊಲೀಸರು ಹುಡುಕಾಟದಲ್ಲಿದ್ದರು.
ನ್ಯಾಯಾಲಯಕ್ಕೆ ಬೇಕಾಗಿದ್ದ ಕಾಲಾ ಅನ್ವರ್ ನ್ಯಾಯಾಲಯದ ಕಲಾಪಗಳಿಗೆ ಹಾಜರಾಗದೆ ತಲೆ ಮರೆಸಿಕೊಂಡಿದ್ದನು. ಯಾವಾಗ ಇರ್ಫಾನ್ ಜೊತೆ ಗಲಾಟೆಗೆ ಕಾಲಾ ಅನ್ವರ್ ಇಳಿದಿದ್ದಾನೆ ಎಂಬ ಮಾಹಿತಿ ಸಿಗುತ್ತದೆಯೋ ತಡಮಾಡದೆ ದೊಡ್ಡಪೇಟೆ ಪೊಲೀಸ್ ಕಾನ್ ಸ್ಟೇಬಲ್ ರಮೇಶ್ ಮತ್ತು ನಿತಿನ್ ಸ್ಥಳಕ್ಕೆ ಧಾವಿಸಿದ್ದಾರೆ.
ತಕ್ಷಣವೇ ಆತನನ್ನ ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ. ಅ.02 ರಂದು ಈ ಘಟನೆ ನಡೆದಿದೆ. ಈತನ ಮೇಲೆ ಕೊಲೆ ಯತ್ನ, ರಾಬರಿ, ಗಾಂಜಾ ಪ್ರಕರಣ, ಕಳ್ಳವು ಪ್ರಕರಣಗಳು ಇವೆ. ಇಷ್ಟೆ ಅಲ್ಲದೆ ಬಜರಂಗ ದಳದ ಕಾರ್ಯಕರ್ತ ಹರ್ಷನನ್ನ ಹತ್ಯೆ ಮಾಡಿದ ಖಾಸಿಫ್ ನ ಅಳಿಯ ಈ ಕಾಲ ಅನ್ವರ್ ಎಂಬ ಮಾಹಿತಿಯೂ ಲಭ್ಯವಾಗಿದೆ. ಕಾಲಾ ಅನ್ವರ್ ನನ್ನ ಹೇಗೆ ಬಂಧಿಸಲಾಯಿತು ಎಂಬ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಪೊಲೀಸರ ಈ ಕೆಲಸವನ್ನ ಎಂತಹವನಾದರೂ ಮೆಚ್ಚುವಂತಹದ್ದಾಗಿದೆ.
ಇದನ್ನೂ ಓದಿ-https://suddilive.in/archives/696
