ಕ್ರೈಂ ನ್ಯೂಸ್
ಬೈಕ್ ಮತ್ತು ಟ್ರ್ಯಾಕ್ಟರ್ ನಡುವೆ ಡಿಕ್ಕಿ, ಬೈಕ್ ಸವಾರ ಸಾವು

ಸುದ್ದಿಲೈವ್/ಶಿವಮೊಗ್ಗ

ಕುಂಸಿ ಪೊಲೀಸ್ ಠಾಣೆ ವ್ಯಪ್ತಿಯ ದೊಡ್ಡದಾನವಂದಿ ಗ್ರಾಮದಲ್ಲಿ ಟ್ರ್ಯಾಕ್ಟರ್ ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಉಂಟಾಗಿದ್ದು ಬೈಕ್ ಸವಾರ ಸಾವನ್ನಪ್ಪಿರುವ ಘಟನೆ ಇಂದು ಸಂಜೆ ನಡೆದಿದೆ.
ಮುತ್ತುರಾಜ್ ಎಂಬ ಶಿಕಾರಿಪುರದ ನಿವಾಸಿ ಸಾವನ್ನಪ್ಪಿದ ದುರ್ದೈವಿ, ಶಿವಮೊಗ್ಗದಿಂದ ಶಿಕಾರಿಪುರಕ್ಕೆ ಕುಂಸಿ ಮೂಲಕ ಹೊರಟಿದ್ದ ಮುತ್ತುರಾಜ್ ಗೆ ದೊಡ್ಡದ್ಯಾನವಂದಿ ಗ್ರಾಮದ ಬಳಿ ಎದುರಿನಿಂದ ಬಂದ ಟ್ರ್ಯಾಕ್ಟರ್ ಡಿಕ್ಕಿ ಹೊಡೆದಿದೆ.
ಮುತ್ತುರಾಜ್ ಸಾವನ್ನಪ್ಪಿದ್ದು ಕುಂಸಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಮುತ್ತುರಾಜ್ ಅವರ ಮೃತ ದೇಹವನ್ನ ಮೆಗ್ಗಾನ್ ಮರುಣೋತ್ತರ ಪರೀಕ್ಷೆಗೆ ಸಾಗಿಸಲಾಗಿದೆ.
ಇದನ್ನೂ ಓದಿ-https://suddilive.in/archives/692
