ಸ್ಥಳೀಯ ಸುದ್ದಿಗಳು

ನನ್ನದೆ ಒರಿಜಿನಲ್ ದಲಿತ ಸಂಘರ್ಷ ಸಮಿತಿ-ಹರಮಘಟ್ಟ ರಂಗಪ್ಪ

ಸುದ್ದಿಲೈವ್/ಶಿವಮೊಗ್ಗ

ರಾಜ್ಯದಲ್ಲಿ ಐದು ಗ್ಯಾರೆಂಟಿಯನ್ನ ಜಾರಿ ಮಾಡಿರುವುದು ಸ್ವಾಗತಾರ್ಹ, ಆದರೆ ಪರಿಶಿಷ್ಟ ಜಾತಿ ಮತ್ತು ಪಂಗಡದ ಅಭಿವೃದ್ಧಿಗೆ ಎತ್ತಿಟ್ಟಿರುವ ಹಣವನ್ನ ರಾಜ್ಯ ಸರ್ಕಾರ ಗ್ಯಾರೆಂಟಿಗೆ ಬಳಸಿಕೊಂಡಿರುವುದು ಎಷ್ಟು ಸರಿ ಎಂದು ದಲಿತ ಸಂಘರ್ಷ ಸಮಿತಿಯ ಪ್ರೊ. ಕೃಷ್ಣಪ್ಪನವರ ಸ್ಥಾಪಿತ ಹರಮಘಟ್ಟದ ರಂಗಪ್ಪ ಆರೋಪಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭಿವೃದ್ಧಿಗೆ‌ಮೀಸಲಿಟ್ಟ 11 ಸಾವಿರ ಕೋಟಿ ಹಣವನ್ನ ಗ್ಯಾರೆಂಟಿಗೆ ಬಳಸಿಕೊಳ್ಳಲಾಗಿದೆ. ಬ್ಲಾಕ್ ಲಾಗ್ ಹುದ್ದೆ ತಡೆಹಿಡಿಯಲಾಗಿದೆ. ಅನೇಕ‌ ಮನವಿ ಸಲ್ಲಿಸಿದರೂ‌ ಉದ್ಯೋಗ ಸಿಗ್ತಾ ಇಲ್ಲ ಎಂದು ರಂಗಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಗುರ್ ಹುಕುಂ ಸಾಗುಳಿ ಸಮಿತಿಯಲ್ಲಿ ದಲಿತರಿಗೆ ಶೇ. 20.10 ರಷ್ಟು ಭೂಮಿ ಮಂಜೂರಾತಿ ಆಗಬೇಕು‌. ಆದರೆ ಕೇವಲ 3% ಭೂಮಿ ಹಂಚಲಾಗಿದೆ. ಕಾಂತರಾಜು ವರದಿ ಮತ್ತು ಸದಾಶಿವ ಆಯೋಗವನ್ನೂ ಸರ್ಕಾರ ಸಮರ್ಪಕವಾಗಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.

ಪ.ಜಾ ಮತ್ತು ಸಹೋದರ ಸಂಬಂಧಿ ಜಾತಿಗಳು ಸರ್ಕಾರದ ಯೋಜನೆಯಿಂದ ರಚನೆ ಆಗಿದೆ. ಆದರೆ ಅವರಿಗೆ ನೀಡಿದ ಅನುದಾನಗಳಿಗೆ ತಡೆಹಿಡಿದಿರುವುದನ್ನ ಸರ್ಕಾರ ತಕ್ಷಣವೇ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದರು.

ನಮ್ಮದೇ ಒರಿಜನಲ್ ಸಂಘಟನೆ

ನಾನು ಪ್ರತಿನಿಧಿಸುತ್ತಿರುವ ದಲಿತ ಸಂಘರ್ಷ ಸಮಿತಿ ಪ್ರೊ.ಬಿ ಕೃಷ್ಣಪ್ಪ ಸ್ಥಾಪಿತ ಸಂಘಟನೆಯನ್ನ ಚಿತ್ರದುರ್ಗದಲ್ಲಿ ನೋಂದಣಿ ಆಗಿದೆ. ಕೆಲವರು ಇದನ್ನ ಬಳಸಿಕೊಳ್ಳುತ್ತಿದ್ದಾರೆ. ಅದಕ್ಕೆ ನಮ್ಮ ಆಕ್ಷೇಪವಿಲ್ಲ. ಕೆಲವರದ್ದು ಪ್ರೊ.ಕೃಷ್ಣಪ್ಪನವರ ಬಣವಾಗಿದೆ. ಇನ್ನೂ ಕೆಲವರದ್ದು ಅಂಬೇಡ್ಕರ್ ವಾದ ಎಂದು ಹೇಳುತ್ತಿದ್ದಾರೆ. ಅವರದ್ದು ನ್ಯಾಯಾಲಯದಲ್ಲಿ ಪ್ರಕರಣವಿದೆ. ಆದರೆ ನೋಂದಿತ ದಲಿತ ಸಂಘಟನೆ ನಮ್ಮದೆ ಎಂದು ತಿಳಿಸಿದರು‌.

ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಭರ್ಮಪ್ಪ ಅಂಧಾಸುರ, ಸುನೀತಾ ರಾಜ್, ಲಕ್ಷ್ಂಈ ಶಿವಕುಮಾರ್, ವಿಜಯಲಕ್ಷ್ಮೀ, ಎಸ್ ಲೂಯಿಸ್ ಮತ್ತು ಇತರರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಇದನ್ನೂ ಓದಿ-https://suddilive.in/archives/7034

Related Articles

Leave a Reply

Your email address will not be published. Required fields are marked *

Back to top button