ಸ್ಥಳೀಯ ಸುದ್ದಿಗಳು

ಎನ್ ಪಿ ಎಸ್ ನೌಕರರ ಬೇಡಿಕೆ ಈಡೇರಿಸುವಂತೆ ಆಯನೂರು ಒತ್ತಾಯ

ಸುದ್ದಿಲೈವ್/ಶಿವಮೊಗ್ಗ ಜ.16

NPS ಪದ್ಧತಿ OPS ಆಗಿ ಬದಲಾಯಿಸುವ ಹೋರಾಟಕ್ಕೆ ಸಿಎಂ ಸಿದ್ದರಾಮಯ್ಯ ಎನ್‌ಪಿಎಸ್ ಸಂಘಟನೆಗಳ ಜೊತೆ ಮಾತುಕತೆ ನಡೆಸುವ ಮೂಲಕ ಒಪಿಎಸ್ ಗೆ ಗ್ರೀನ್ ಸಿಗ್ನಲ್ ದೊರೆಯುವ ಮುನ್ಸೂಚನೆ ನೀಡಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ತಿಳಿಸಿದರು.

ಸುದ್ದಿಗೋಷ್ಠಿ ನಡೆಸಿದ ಅವರು, 2005ರಲ್ಲಿ ನೋಟಿಫಿಕೇಷನ್ ಆಗಿ 2006ರಲ್ಲಿ ನೇಮಕಾತಿ ಪ್ರಕ್ರಿಯೆ ನೀಡಿದ ಎನ್‌ಪಿಎಸ್ ನೌಕರರಿಗೆ ನೀಡಲು ಸರ್ಕಾರ ನಿರ್ಧರಿಸಿದೆ. ಇದರಿಂದ ಸುಮಾರು 11೦೦0 ನೌಕರರಿಗೆ ಈ ಸೌಲಭ್ಯ ಸಿಗುತ್ತದೆ ಎಂದು ಹೇಳಿದರು.

ಅರೆ ಸರ್ಕಾರಿ ಹಾಗೂ ಸ್ವಾಯತ್ತ ಸಂಸ್ಥೆಗಳ ನೌಕರರು 2006ರ ಒಳಗಿನ ವ್ಯಾಪ್ತಿಗೆ ಒಳಪಡಿಸಬೇಕು. ಅಕಾಲ ಮರಣಕ್ಕೆ ಒಳಗಾದವರು, ವಯೋಮಿತಿ ಕಾರಣ ನಿವೃತ್ತಿ ಆದವರನ್ನು ಈ ವ್ಯಾಪ್ತಿಗೆ ಅಳವಡಿಸಬೇಕು. OPS ಕೊಡಿ ಆದರೆ ಹಿಂಬಾಕಿ ಬೇಡ ಎಂದು ಲಿಖಿತವಾಗಿ ಬರೆದು ಕೊಟ್ಟಿದ್ದಾರೆ. ಅನುದಾನಿತ ನೌಕರರಿಗೆ ಕೂಡ OPS ಕೊಡಬೇಕು ಎಂದು ತಿಳಿಸಿದರು.

ಮುಂದಿನ ಬಜೆಟ್ ನಲ್ಲಿ NPS ಬಗ್ಗೆ ಸಿಎಂ ಸಿದ್ದರಾಮಯ್ಯ  ಘೋಷಣೆ ಮಾಡಲಿದ್ದಾರೆ.ರಾಜ್ಯದ ಸಂಸದರು ಸಂಸತ್ ಅಧಿವೇಶನದಲ್ಲಿ NPS ಕಾಯ್ದೆ ತಿದ್ದುಪಡಿಗೆ ಆಗ್ರಹ ಮಾಡಬೇಕು ಎಂದು ಪುನರುಚ್ಚರಿಸಿದರು. ಸಂಸದರು ನಿರ್ಲಕ್ಷ್ಮ ವಹಿಸಿದರೆ ಮುಂಬರುವ ಚುನಾವಣೆಯಲ್ಲಿ ಈ ನೌಕರರು ಅವರ ವಿರುದ್ಧ ಕೆಲಸ ಮಾಡಬೇಕಾಗುತ್ತದೆ ಎಂದರು.

ಇದನ್ನೂ ಓದಿ-https://suddilive.in/archives/6965

Related Articles

Leave a Reply

Your email address will not be published. Required fields are marked *

Back to top button