ವಿಪಕ್ಷ ನಾಯಕನ ಮತ್ತು ರಾಜ್ಯಾಧ್ಯಕ್ಷರ ಆಯ್ಕೆಯನ್ನ ಹೈಕಮಾಂಡ್ ಬೇಗ ಮುಗಿಸುವಂತೆ ಈಶ್ವರಪ್ಪ ಮನವಿ

ಸುದ್ದಿಲೈವ್/ಶಿವಮೊಗ್ಗ

ವಿಪಕ್ಷ ನಾಯಕನ ಸ್ಥಾನ ಹಾಗೂ ರಾಜ್ಯಾಧ್ಯಕ್ಷ ಸ್ಥಾನ ನೇಮಕ ವಿಚಾರದಲ್ಲಿ ಮಾಜಿ ಸಚಿವ ಈಶ್ವರಪ್ಪ ಪ್ರತಿಕ್ರಿಯಿಸಿದ್ದು, ಯಾವ ಸಂದರ್ಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರ ಹಾಗೂ ವಿಪಕ್ಷ ನಾಯಕನ ಸ್ಥಾನವನ್ನು ಯಾರಿಗೆ ಮಾಡಬೇಕೆಂಬುದನ್ನ ಕೇಂದ್ರದ ವರಿಷ್ಠರು ಮಾಡುತ್ತಾರೆ ಎಂದು ಕೈತೊಳೆದುಕೊಂಡಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ವಿಪಕ್ಷ ನಾಯಕನನ್ನು ಮಾಡಲಾಗುತ್ತಿಲ್ಲ ಎಂದು ವಿರೋಧ ಪಕ್ಷದವರ ನಾಯಕರಿಗೆ ಒಂದು ಅಸ್ತ್ರವಾಗಿದೆ. ರಾಜ್ಯದ ಬಿಜೆಪಿಯ ನಾಯಕರಿಂದ ಏನಾದರೂ ತಪ್ಪು ಆಗಿದ್ದಾರೆ ದಯವಿಟ್ಟು ಕ್ಷಮಿಸಿ ನಾವು ತಿದ್ದಿಕೊಳ್ಳಲು ತಯಾರಿದ್ದೇವೆ. ನಮ್ಮನ್ನ ತಿದ್ದಿ ಸರಿಪಡಿಸಲು ಕೇಂದ್ರದ ನಾಯಕರಲ್ಲಿ ಮನವಿ ಮಾಡುತ್ತೇನೆ ಎಂದರು.
ಈ ಹಿನ್ನೆಲೆಯಲ್ಲಿ ತಕ್ಷಣ ವಿಪಕ್ಷ ನಾಯಕನ ಸ್ಥಾನ ಹಾಗೂ ರಾಜ್ಯಾಧ್ಯಕ್ಷ ಸ್ಥಾನ ತಡ ಮಾಡದೆ ನೇಮಿಸಲು ಮನವಿ ಮಾಡುತ್ತೇನೆ. ಸೋಲಿಗೆ ಎಂದು ಧೃತಿಗೆಟ್ಟಿಲ್ಲ ಸೋಲಿಗೆ ನೂರು ಜನ ಅಪ್ಪಂದಿರು ಗೆಲುವಿಗೆ ಒಬ್ಬನೇ ಅಪ್ಪ. ಬಿಜೆಪಿ ನಾಯಕರು ಕಾರ್ಯಕರ್ತರು ದೇಶದ ಕೆಲಸ ಮಾಡಲು ಇದ್ದಾರೆ. ನರೇಂದ್ರ ಮೋದಿ ಅವರನ್ನು ಪ್ರಧಾನಿಯನ್ನಾಗಿ ಮಾಡಬೇಕಿದೆ. ಈ ಹಿನ್ನಲೆಯಲ್ಲಿ ನಮ್ಮಿಂದ ತಪ್ಪಾಗಿದ್ದರೆ, ನಮ್ಮ ತಪ್ಪು ತಿದ್ದಿಕೊಳ್ಳಲು ಅವಕಾಶ ಕೊಡಿ ಎಂದಿದ್ದಾರೆ.
INDIA ಒಕ್ಕೂಟದ ತೃಪ್ತಿಗೆ ಕಾವೇರಿ ಹರಿದಿದ್ದಾಳೆ
ಸ್ಟಾಲಿನ್ ಒಪ್ಪಿಸಲು india ಒಕ್ಕೂಟದ ಜೊತೆ ನಾವಿದ್ದೇವೆ ಎಂದು ತಿಳಿಸಲು ನೀರು ಬಿಟ್ಟು ಕರ್ನಾಟಕ ತೊಂದರೆ ಅನುಭವಿಸುವ ಪರಿಸ್ಥಿತಿಗೆ ಬಂದಿದೆ. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋದರೆ ನಿಮಗೇನು ತೊಂದರೆ. ಐಎನ್‌ಡಿಐಎ ಒಕ್ಕೂಟಕ್ಕಾಗಿ ನೀರು ಬಿಡುಗಡೆ ಮಾಡಿ ಕರ್ನಾಟಕ ಜನ ಸತ್ತರೂ ಪರವಾಗಿಲ್ಲ ಎಂಬ ನಿಮ್ಮ ಧೋರಣೆ ಖಂಡಿಸುತ್ತೇನೆ ಎಂದರು.
ಇಷ್ಟೊಂದು ಅನ್ಯಾಯ ರಾಜ್ಯದ ಯಾವ ಮುಖ್ಯಮಂತ್ರಿ ಉಪಮುಖ್ಯಮಂತ್ರಿ ಮಾಡಿರಲಿಲ್ಲ. ಸಿಎಂ ಡಿಸಿಎಂ ಸರ್ವಾಧಿಕಾರಿ ಧೋರಣೆಯಿಂದ ಕದ್ದು ಮುಚ್ಚಿ ನೀರು ಬಿಟ್ಟಿದ್ದಾರೆ. ರಾಜ್ಯದಲ್ಲಿ ಬರ ಪರಿಸ್ಥಿತಿ ಬಂದಿದೆ ಎಷ್ಟು ನೀರು ಬೇಕು ಮೊದಲಾದವುಗಳ ಸರ್ವೆ ನಡೆಸದೆ ಪರಿಸ್ಥಿತಿ ನಿವಾರಿಸುತ್ತಿಲ್ಲ. ಎಲ್ಲದಕ್ಕೂ ಕೇಂದ್ರ ಸರ್ಕಾರ ಪ್ರಧಾನಮಂತ್ರಿಯನ್ನು ಘೋಷಣೆ ಮಾಡುತ್ತಾರೆ ಎಂದು ತಿರುಗೇಟು ನೀಡಿದ ಅವರು ಕಾವೇರಿ ನದಿ ಪ್ರಾಧಿಕಾರ ಹಾಗೂ ಸುಪ್ರೀಂ ಕೋರ್ಟ್ ಗೆ ಹೋಗಿದ್ಯಾರು? ಎಂದು ಪ್ರಶ್ನಿಸಿದರು.
ಇವರು ಮಾಡಿದ ತಪ್ಪಿಗೆ ರೈತರು ಏನು ಮಾಡಬೇಕು. ಕೋರ್ಟ್ ಆದೇಶದ ಮೇರೆಗೆ ನೀರು ಬಿಡುಗಡೆ ಮಾಡಲಿಲ್ಲ ಎಂದರೆ ನ್ಯಾಯಾಲಯ ಜನರ ಆದೇಶವನ್ನು ವಶಪಡಿಸಿಕೊಂಡು ಸರ್ಕಾರ ಕಿತ್ತು ಬಿಸಾಕುತ್ತಾರೆ ಇದು ಅವರಿಗೂ ಗೊತ್ತು. ಪ್ರಧಾನಮಂತ್ರಿ ಮೇಲೆ ಆಪಾದನೆ ಮಾಡುವುದು ಇವರಿಗೆ ಸಲೀಸಾದ ಕೆಲಸವಾಗಿದೆ. ಸರ್ವಪಕ್ಷ ನಿಯೋಗವನ್ನು ಪ್ರಧಾನಿ ಬಳಿ ಯಾಕೆ ಕರೆದುಕೊಂಡು ಹೋಗಲಿಲ್ಲ ಎಂದು ಪ್ರಶ್ನಿಸಿದರು.
ರಾಜ್ಯದ ಹಿತಾಸಕ್ತಿ ಕಾಪಾಡಲು ಇಡೀ ಕರ್ನಾಟಕ ಒಟ್ಟಾಗಿ ಇರಬೇಕು. ಸ್ಟಾಲಿನ್, ಸೋನಿಯಾ ಗಾಂಧಿ, ಇಂಡಿಯಾ ಒಕ್ಕೂಟ ಮೆಚ್ಚಿಸುವ ಕೆಟ್ಟ ರಾಜಕಾರಣ ಡಿಕೆಶಿ ಮಾಡುತ್ತಿದ್ದಾರೆ.ಈಗಲೂ ಕೂಡ ಎಲ್ಲರನ್ನು ಕರೆದು ಒಟ್ಟಾಗಿ ಯೋಚನೆ ಮಾಡಿದರೆ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದು ತಿಳಿಸಿದರು.
ಭಂಡ ಸರ್ಕಾರವನ್ನ ನೋಡಿಲ್ಲ
ಅಭಿವೃದ್ಧಿ ಯೋಜನೆಗಳಿಗೆ ಅನುದಾನ ನೀಡಲು ಸಾಧ್ಯವಿಲ್ಲ ಗ್ಯಾರಂಟಿ ಯೋಜನೆಗಳಿಗೆ ಹಣ ಬೇಕು ಎಂದು ಬಾಯಿಬಿಟ್ಟು ಹೇಳಿದ ಬಂಡ ಸರ್ಕಾರವನ್ನು ಇದುವರೆಗೂ ನಾನು ನೋಡಿಲ್ಲ. ನುಡಿದಂತೆ ನಡೆದ ಸರ್ಕಾರ ಎನ್ನುತ್ತೀರಾ ಇರುವ ದುಡ್ಡನ್ನು ಹಂಚಲು ನೀವೇ ಬೇಕಾ? ಎಂದು ಗುಡುಗಿದರು.
ಮುಸಲ್ಮಾನ್ ಗೂಂಡಾಗಳ ಆಟ ನಡೆಯೊಲ್ಲ
ಗಣಪತಿ ವಿಸರ್ಜನಾ ಮೆರವಣಿಗೆ ಶಾಂತಿಯುತವಾಗಿ ನೆರವೇರಿದೆ. ಶಿವಮೊಗ್ಗದ ಸರ್ಕಲ್ ನಲ್ಲಿ ಭಗವಾಧ್ವಜ ಕಟ್ಟುವ ವಿಚಾರದಲ್ಲಿ ನಡೆದ ವಿವಾದದ ಬಗ್ಗೆಯೂ ಈಶ್ವರಪ್ಪ ಗುಡುಗಿದ್ದು, ಶಿವಮೊಗ್ಗದಲ್ಲಿ ಮುಸಲ್ಮಾನ್ ಗುಂಡಾಗಳು ಆಟ ಆಡಿದ್ರೆ ಜನತೆ ಸುಮ್ಮನಿರುವುದಿಲ್ಲ ಎಂದಿದ್ದಾರೆ.
ಕಾಂಗ್ರೆಸ್ ಸರ್ಕಾರದಲ್ಲಿ ಮುಸಲ್ಮಾನರಿಗೆ ರಕ್ಷಣೆ ನೀಡಲಾಗುತ್ತಿದೆ. ಹಿಂದುತ್ವ ಎಂದವರನ್ನ ಕಡೆಗಣಿಸಲಾಗುತ್ತಿದೆ. ಸರ್ಕಾರಿ ಅಧಿಕಾರಿಗಳು ಗುಲಾಮರಂತೆ ಕೆಲಸ ಮಾಡುತ್ತಿದ್ದಾರೆ. ಹಿಂದುತ್ವದ ಬಗ್ಗೆ ಹೆಮ್ಮೆ ಇಟ್ಟುಕೊಳ್ಳಬೇಕು. ಕಾಂಗ್ರೆಸ್ಸಿಗರನ್ನು ಮುಸಲ್ಮಾನರನ್ನು ತೃಪ್ತಿ ಪಡಿಸುವ ರೀತಿಯಲ್ಲಿ ಗುಲಾಮರಂತೆ ಕೆಲಸ ಮಾಡಬಾರದು ಎಂದು ಅಧಿಕಾರಿಗಳಿಗೆ ಈಶ್ವರಪ್ಪ ಬುದ್ದಿಹೇಳಿದ್ದಾರೆ.
ಇದನ್ನೂ ಓದಿ-https://suddilive.in/2023/09/30/ಚೆನ್ಬಾಗಿ-ಒದೆ-ತಿಂದ-ಕಳ್ಳನಿ/
