ಸ್ಥಳೀಯ ಸುದ್ದಿಗಳು

ಆಯುಧ ಪೂಜೆಯ ದಿನ ಪ್ರತಿ ಮನೆಗಳಲ್ಲಿ ತಲ್ವಾರ್ ಪೂಜೆಗೆ ಪುತ್ತಿಲ ಕರೆ

ಶಿವಮೊಗ್ಗ ಬ್ರೇಕಿಂಗ್..

ಶಿವಮೊಗ್ಗದ ರಾಗಿಗುಡ್ಡದಲ್ಲಿ ಹಿಂದು ಮುಖಂಡ ಅರುಣ್‌ ಪುತ್ತಿಲ ಗಲಭೆ ಕುರಿತು ಪ್ರತಿಕ್ರಿಯಿಸಿದ್ದಾರೆ. ಶಿವಮೊಗ್ಗದ ರಾಗಿಗುಡ್ಡದಲ್ಲಿ ಮತಾಂಧ ಮುಸ್ಲಿಂ ಸಮುದಾಯದಿಂದ ಘಟನೆ ಆಗಿದೆ. ಆಯುಧ ಪೂಜೆಯ ದಿನ ಆಯುಧಗಳಿಗೆ ಪೂಜೆ ಮಾಡಿಟ್ಟುಕೊಳ್ಳಿ ಮುಂದಿನ ದಿನಗಳಲ್ಲಿ ಕೆಲಸಕ್ಕೆ ಬರಲಿದೆ ಎಂದು ಗುಡುಗಿದ್ದಾರೆ.

ಮಾಧ್ಯಮಗಳಿಗೆ ಮಾತನಾಡಿ,  ಹಾನಿಗೊಳಗಾದ ಹಿಂದೂಗಳ  ಮನೆಗಳಿಗೆ ಭೇಟಿ ನೀಡಿದ್ದೇನೆ.   ಸಾಂತ್ವಾನ ಹೇಳಲು ಇಲ್ಲಿಗೆ ಆಗಮಿಸಿದ್ದೇನೆ. ಹಿಂದೂಗಳ ಜೊತೆಗೆ ನಾವಿದ್ದೇವೆ.  ಮುಸ್ಲಿಂ ಪುಷ್ಟೀಕರಣಕ್ಕೆ, ಮುಸ್ಲಿಂ ಮತಗಳನ್ನು ಓಲೈಸಲು, ಸರಕಾರ ಮತಾಂಧ ಶಕ್ತಿಗೆ ಕುಮ್ಮಕ್ಕು ಕೊಡ್ತಿದೆ.ಇದು ಪೂರ್ವ ನಿಯೋಜಿತ ಕೃತ್ಯ ಎಂದು ಗುಡುಗಿದರು.

ಈ ಭಾಗದಲ್ಲಿ ಗಣೇಶೋತ್ಸವ ವಿಜೃಂಭಣೆಯಿಂದ ಮಾಡಲಾಗಿದೆ. ವಿಜೃಂಭಣೆಯ ಉತ್ಸವದಿಂದ ಹಿಂದು ಸಮಾಜಕ್ಕೆ ದೊಡ್ಡ ಶಕ್ತಿ ಬರುತ್ತದೆ ಅಂತಾ ದುರ್ಘಟನೆ ನಡೆದಿವೆ. ರೋಹನ್ ಎನ್ನುವ ಯುವಕನ ಮನೆಗೆ ನುಗ್ಗಿ ಹಲ್ಲೆ ಮಾಡಿದ್ದಾರೆ ವಾಹನ ಜಖಂ ಆಗಿದೆ. ಶಿಕ್ಷಕರ ಮನೆಗೆ ನುಗ್ಗಿ ಮುಸ್ಲಿಂ ವಿದ್ಯಾರ್ಥಿಗಳು ಹಲ್ಲೆ ಮಾಡಿದ್ದಾರೆ. ಘಟನೆ ಇಡೀ ನಾಗರೀಕ ಸಮುದಾಯ ತಲೆ ತಗ್ಗಿಸುವಂತೆ ಮಾಡಿದೆ ಎಂದು ಗುಡುಗಿದರು.‌

ಅನೇಕ ರೀತಿಯ ದಾಳಿ, ನೋವು ಅಪಮಾನದ ನಡುವೆ ಹಿಂದು ಸಮಾಜ ರಕ್ಷಣೆ ಮಾಡಬೇಕಿದೆ. ಸರಕಾರ ತಲ್ವಾರ್ ಹಿಡಿದು ಮೆರವಣಿಗೆಗೆ ಅವಕಾಶ ಕೊಡ್ತಾರೆ ಅಂದ್ರೆ, ಮಾರಕಾಸ್ತ್ರ ಹಿಡಿದು ಹಿಂದು ಸಮಾಜದ ಮೇಲೆ, ಹಿಂದು‌ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಲು ಸಹಕಾರ ಕೊಡಲಾಗುತ್ತಿದೆ ಎಂಬ ಅನುಮಾನ ಹುಟ್ಟುತ್ತದೆ ಎಂದರು.

ನಮ್ಮಲ್ಲು ತಲ್ವಾರ್, ಶಸ್ತ್ರಾಸ್ತ್ರ ಇದೆ ಅಗತ್ಯ ಬಿದ್ದರೆ ಇದೇ ಶಸ್ತ್ರಾಸ್ತ್ರ ಮೂಲಕ ಪ್ರತಿಕ್ರಿಯೆ ಕೊಡಲು ಹಿಂದು ಸಮಾಜ ಸಿದ್ದವಿದೆ. ನವರಾತ್ರಿ ದಿನ ಶಸ್ತ್ರಾಸ್ತ್ರಗಳಿಗೆ ಪೂಜೆ ಮಾಡ್ತೇವೆ. ಪ್ರತಿ ಮನೆಯಲ್ಲಿಯೂ ತಲ್ವಾರ್ ಗಳಿಗೆ ಪೂಜೆ ಮಾಡಬೇಕು.ಸ್ಕ್ಯೂಡ್ರೈವರ್, ಸ್ಯ್ಪಾನರ್ ಹೊರತುಪಡಿಸಿ ತಲ್ವಾರ್ ಗಳಿಗೆ ಪೂಜೆ ಮಾಡಿ. ಸರಕಾರ ತಕ್ಷಣ ಪರಿಹಾರ ಕೊಡಬೇಕು. ಹಾನಿಯಾಗಿರು ಮನೆಗಳಿಗೆ ಸಂಪೂರ್ಣ ಖರ್ಚು ಸರಕಾರ ಭರಿಸಬೇಕು ಎಂದು ಗುಡುಗಿದರು.

ಶಾಂತಿ ಸುವ್ಯವಸ್ಥೆ ನಡುವೆ ಬಹುಸಂಖ್ಯಾತರು ಬದುಕಲು ಕಷ್ಟ ಇದೆ. ಸರಕಾರ ಗಂಭೀರವಾದ ಕಠಿಣ ಕ್ರಮ ಕೈಗೊಳ್ಳಬೇಕು. ಪೊಲೀಸರ ಮೇಲೆಯೂ ಹಲ್ಲೆ ನಡೆದಿದೆ. ಪೊಲೀಸರ ‌ಬಗ್ಗೆ ಗೌರವ ಇದೆ. ಸರಕಾರ ಪೊಲೀಸರ ಅಧಿಕಾರ ಹಸ್ತಕ್ಷೇಪ ಮಾಡ್ತಿದೆ. ಇಲಾಖೆಗೆ ಪಾರದರ್ಶಕವಾಗಿ ಕೆಲಸ ಮಾಡಲು ಅವಕಾಶ ಕೊಡಬೇಕು. ಸಮಾಜಕ್ಕೆ ರಕ್ಷಣೆ ಕೊಡಬೇಕಾದ ಪೊಲೀಸ್ ಇಲಾಖೆಗೆ ರಕ್ಷಣೆ ಕೊಡಬೇಕಾದ ಕೆಲಸ ಮಾಡದೇ ಸ್ವತಂತ್ರವಾಗಿ ಕೆಲಸ ಮಾಡಲು ಅವಕಾಶ ಕೊಡಬೇಕು ಎಂದರು.

ಇದನ್ನೂ ಓದಿ-https://suddilive.in/archives/651

Related Articles

Leave a Reply

Your email address will not be published. Required fields are marked *

Back to top button