ಸ್ಥಳೀಯ ಸುದ್ದಿಗಳು

ನಾಳೆ ಮಾರಮ್ಮನ ದರ್ಶನಕ್ಕೆ ವಿಶೇಷ ಪಾಸ್ ವ್ಯವಸ್ಥೆ

ಸುದ್ದಿಲೈವ್/ಶಿವಮೊಗ್ಗ

ಈ ಬಾರಿಅದ್ದೂರಿಯಾಗಿ ಕೋಟೆ ಮಾರಿಕಾಂಬ ದೇವಿಯ ಜಾತ್ರೆ ಆರಂಭಿಸಲಾಗುತ್ತಿದೆ. ಗಾಂಧಿಬಜಾರ್ ನ ಪ್ರವೇಶ‌ದ್ವಾರದಲ್ಲಿ ಚಂದ್ರಘಂಟ ದೇವಿಯ ಅಲಂಕಾರ ಮಾಡಲಾಗಿದೆ ಎಂದು ಶ್ರೀ ಕೋಟೆ ಮಾರಿಕಾಂಬ ದೇವಿ ಸೇವಾ ಸಮಿತಿಯ ಅಧ್ಯಕ್ಷ ಎಸ್ ಕೆ ಮರಿಯಪ್ಪ ತಿಳಿಸಿದರು. 

ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇದನ್ನ ಶಿವಮೊಗ್ಗದ ಜೀವನ್ ಎಂಬುವರು ಈ ಕಲಾಕೃತಿಯನ್ನ ನಿರ್ಮಿಸಿದ್ದಾರೆ. ನಿನ್ನೆ ಕೂರಿಸಿದಾಗ 5 ಸಾವಿರಕ್ಕೂ ಹೆಚ್ಚು ಜನ ಸೇರಿ ಸೆಲ್ಫೆ ತೆಗೆದುಕೊಂಡಿದ್ದಾರೆ. ನೆಲದಿಂದ 46 ಅಡಿ ಎತ್ತರದ‌ ಚಂದ್ರಘಂಟ ದೇವಿಯ  ಪ್ರತಿಮೆಯನ್ನ ಕೂರಿಸಲಾಗಿದೆ ಎಂದರು.

ಬಿಹೆಚ್ ರಸ್ತೆಯಲ್ಲಿ ಶಾಮೀಯಾನ ಅಳವಡಿಸಲಾಗಿದೆ. ಈ ಇವೆಲ್ಲವೂ ಮೊದಲ ಬಾರಿಗೆ ಈ ವರ್ಷ ನಿರ್ಮಿಸಲಾಗುತ್ತಿದೆ. ಜನಸಂದಣೆ ಜಾಸ್ತಿಯಾಗುವ ದೃಷ್ಠಿಯಿಂದ 200 ರೂ ವಿಶೇಷ ದರ್ಶನಕ್ಕೆ ಅವಕಾಶ ಮಾಡಲಾಗಿದೆ. ಬಜಾರ್ ನ ನಾಗಪ್ಪನಕೇರಿಯಿಂದ ವಿಶೇಷ ದರ್ಶನಕ್ಕೆ ಬರುವ ವ್ಯವಸ್ಥೆ ಮಾಡಲಾಗಿದೆ.

ಬಜಾರ್ ನಲ್ಲಿ ಈಗಾಗಲೇ ಅಮ್ಮನವರನ್ನ ಮೂರ್ತಿಯನ್ನ ಕೂರಿಸಲಾಗಿದೆ. ವಿಧಿವಿಧಾನಗಳು ನಾಳೆ ಆರಂಭವಾಗಲಿದೆ ಎಂದರು. ಸಮಿತಿಯ ಕಾರ್ಯದರ್ಶಿ ಮಂಜುನಾಥ್ ಮಾತನಾಡಿ ಈ ಬಾರಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ನಾಳೆ ಸಂಜೆ 7 ಗಂಟೆಗೆ ಗೀತಾ ದತ್ ಅವರಿಂದ ಭರತ ನಾಟ್ಯ ನಡೆಯಲಿದೆ ಎಂದರು.

ವಿಕಲಚೇತನಿರಿಗೆ,. ತುಂಬುಗರ್ಭಿಣಿಗೆ ಮಾತ್ರ ವಿಷೇಶ ಪಾಸ್ ನ ಜಾಗದಲ್ಲಿ ಉಚಿತ ಪ್ರವೇಶವಿರುತ್ತದೆ. ಗರ್ಭಿಣಿಯರ ಜೊತೆ ಬರುವವರಿಗೆ ಉಚಿತವಿಲ್ಲ. ಸಮಿತಿಯು ಜಾತ್ರೆಗಾಗಿ ಹಣ ಸಂಗ್ರಹಿಸೊಲ್ಲ. ಆದರೆ ಭಕ್ತರೇ ಮುಂದು ಬಂದು ಹಣಕೊಟ್ಟಿದ್ದಾರೆ. ಪ್ರಸಾದ ಮತ್ತು ಎಲ್ಲ ವ್ಯವಸ್ಥೆ ಮಾಡಲಾಗಿದೆ ಎಂದರು.

ನಾಳೆ 8 ಗಂಟೆಯಿಂದ ವಿಶೇಷ ದರ್ಶನ ನಡೆಯಲಿದೆ.ಈಗಾಗಲೇ ಕೋಟೆ ಮಾರಿ ದೇವಿಗೆ ವಿಶೇಷ ಅಲಂಕಾರ ನಿರ್ಮಿಸಲಾಗಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸಮಿತಿಯ ರಾಮಯ್ಯ, ಪ್ರಭಾಕರ್ ಗೌಡ ಮೊದಲಾದವರು ಉಪಸ್ಥಿತರಿದ್ದರು.

ಇದನ್ನೂ ಓದಿ-https://suddilive.in/archives/10482

Related Articles

Leave a Reply

Your email address will not be published. Required fields are marked *

Back to top button