ನ.2 ರಂದು ಮೆಟ್ರೋ ಆಸ್ಪತ್ರೆಯಲ್ಲಿ ಡಯಾಬಿಟಿಸ್ ವೆಲ್ ನೆಸ್ ಸೆಂಟರ್ ಆರಂಭ

ಸುದ್ದಿಲೈವ್/ಶಿವಮೊಗ್ಗ

ಮೆಟ್ರೋ ಆಸ್ಪತ್ರೆಯ ವತಿಯಿಂದ ಈ ಹಿಂದೆ ಸಕ್ಕರೆ ಕಾಯಿಲೆ ಕುರಿತು ಜನಜಾಗೃತಿ ಜಾಥ ಆರಂಭಿಸಲಾಗಿತ್ತು. ಕುವೆಂಪು ರಂಗ ಮಂದಿರದಲ್ಲಿ ಈ ಜನಜಾಗೃತಿ ಕಾರ್ಯಕ್ರಮ ನಡೆದಿತ್ತು. ಸಕ್ಕರೆ ಖಾಯಿಲೆ ಸೈಲೆಂಟ್ ಕಿಲ್ಲರ್ ಆಗಿದೆ. ಭಾರತದಲ್ಲಿ 57% ಜನರಿಗೆ ಕಾಯಿಲೆ ಬಗ್ಗೆ ಗೊತ್ತಿಲ್ಲದ ಕಾರಣ. ಈ ಬಗ್ಗೆ ಜಾಗೃತಿ ಮೂಡಿಸಲು ಮುಂದಾಗಿದೆ.
.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಾ.ಪೃಥ್ವಿ ಸಕ್ಕರೆ ಖಾಯಿಲೆ ಬಲ್ಲವನು ಖಾಯಿಲೆ ಗೆಲ್ಲುವನು ಎಂಬ ಅಭಿಯಾನದಲ್ಲಿ ಆಸ್ಪತ್ರೆಯಲ್ಲಿ ಡಯಾಬಿಟಿಸ್ ವೆಲ್ ನೆಸ್ ಸೆಂಟರ್ ಆರಂಭಿಸಲಾಗುತ್ತಿದೆ. ನ.2 ರಂದು ನಗರದ ಶಿವಮೂರ್ತಿ ವೃ್ತದಲ್ಲಿರುವ ಮೆಟ್ರೋ ಆಸ್ಪತ್ರೆನಲ್ಲಿ ಸೆಂಟರ್ ಉದ್ಘಾಟನೆಗೊಳ್ಳಲಿದೆ ಎಂದರು.
ಸಕ್ಕರೆ ಕಾಯಿಲೆ ಇದ್ದರೆ ಕಣ್ಣು ಕಳೆದುಕೊಳ್ಳುತ್ತೇವೆ. ಇದನ್ನ ಆಧುನಿಕ ಉಪಕರಣದಿಂದ ಚಿಕಿತ್ಸೆ ನೀಡಲಾಗುತ್ತಿದೆ. 24 ಗಂಟೆಯಲ್ಲಿ ರೋಗಿಗೆ ಮೊಬೈಲ್ ನಲ್ಲಿ ಕಾಯಿಲೆ ಬಗ್ಗೆ ತಿಳಿಸಲಾಗುವುದು. ಇನ್ಸುಲೆನ್ ಪಡೆದರೆ ಕೊನೆ ಸ್ಟೇಜ್ ಎಂಬ ಮಾತಿದೆ. ಆದರೆ ಇನ್ಸುಲಿನ್ ಮನುಷ್ಯನಿಗೆ ಅಮೃತವಾಗಿದೆ. ಇನ್ಸುಲಿನ್ ಮೂಲಕ ಸಕ್ಕರೆ ಕಾಯಿಲೆಯನ್ನ ನಿಯಂತ್ರಿಸಬಹುದಾಗಿದೆ. ಇದುವರೆಗೂ ಆಸ್ಪತ್ರೆಯಲ್ಲಿ 400 ಜನ ರೋಗಿಗಳಿಗೆ ಗ್ಲೂಕೋಮೀಟರ್ ಮತ್ತು ಶುಗರ್ ಪೆನ್ ಗಳನ್ನ ನೀಡಲಾಗಿದೆ ಎಂದರು.
ಅಪಘಾತ ಹೊರತುಪಡೆಸಿದರೆ ಮನುಷ್ಯ ಕಾಲು ಕಳೆದುಕೊಳ್ಳುವುದು ಸಕ್ಕರೆ ಕಾಯಿಲೆಯಿಂದಲೇ. ಹಾಗಾಗಿ ಕಾಲಿಗೆ ಹಾನಿಯಾಗದಂತೆ ಚಪ್ಪಲಿಗಳನ್ನ ನೀಡಲಾಗುವುದು. ಕೊಬ್ಬು ಕರಗಿಸಲು ಚಿಕಿತ್ಸೆ ಇದೆ. ಏನು ತಿನ್ನಬೇಕು ಏನು ತಿನ್ನಬಾರದು ಎಂಬ ಡಯಟ್ ಫುಡ್ ಸೂಚಿಸಲಾಗುವುದು. ಯೋಗ ತರಬೇತಿಯನ್ನ ಈ ಸೆಂಟರ್ ನಲ್ಲಿ ತಿಳಿಸಲಾಗುವುದು ಎಂದರು.
ಇನ್ಸುಲಿನ್ ಪಂಪ್ ಅಳವಡಿಸುವ ಕುರಿತು ಹಾಗೂ ಒಂದೇ ಸೂರಿನ ಅಡಿ ಚಿಕಿತ್ಸೆ ನೀಡಲಾಗುತ್ತದೆ. ದರಗಳು ಸಹ ಅಗ್ಗದ ದರದಲ್ಲಿ ನೀಡಲಾಗುವುದು. 2-5 ಲಕ್ಷ ರೂ. ಕರ್ಚಾಗಲಿದೆ ಎಂದರು.ಸುದ್ದಿಗೋಷ್ಠಿಯಲ್ಲಿ ಚೇರ್ ಮನ್ ಪಿ.ಲಕ್ಷ್ಮೀ ನಾರಾಯಣ ಆಚಾರ್ ಉಪಸ್ಥಿತರಿದ್ದರು.
ಇದನ್ನೂ ಓದಿ-https://suddilive.in/archives/2140
