ಪ್ರೀತಿಸಿ ಮದುವೆಯಾಗು ಎಂದವನಿಂದ ನಡೆಯಿತಾ ಹೀನ ಕೃತ್ಯ??

ಸುದ್ದಿಲೈವ್/ಶಿವಮೊಗ್ಗ

ಚಿತ್ರದುರ್ಗದ ಯುವತಿ ಒಬ್ಬಳು ಮೆಗ್ಗಾನ್ ನಲ್ಲಿ ಕೊನೆ ಉಸಿರು ಎಳೆದಿದ್ದಾಳೆ. ಯುವಕನ ಪ್ರೀತಿಯನ್ನ ತಿರಸ್ಕರಿಸಿದ ಯುವತಿಯ ಮೇಲೆ ಮಾರಣಾಂತಿಕ ಹಲ್ಲೆ, ಅತ್ಯಾಚಾರ ನಡೆಸಿ ಕೊಲೆ ನಡೆದಿದೆ ಎಂದು ಕುಟುಂಬ ಆರೋಪಿಸಿದೆ. ಇಂದು ಬೆಳಿಗ್ಗೆ ಯುವತಿ ಚಿಕಿತ್ಸೆ ಫಲಕಾರಿಯಾಗದೆ ಮೆಗ್ಗಾನ್ ನಲ್ಲಿ ಕೊನೆ ಉಸಿರು ಎಳೆದಿದ್ದಾಳೆ.
ಚಿತ್ರದುರ್ಗದ ಹುಲ್ಲೂರು ಗ್ರಾಮದ ಅರ್ಪಿತಾ ಡಿಪ್ಲೊಮಾ ಮುಗಿಸಿದ್ದು ಮೈಸೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದಳು. ಅ.02 ರಂದು ತಂದೆ ಹನುಮಂತಪ್ಪರಿಗೆ ಆರೋಗ್ಯ ವಿಚಾರಿಸಿ ಈ ತಿಂಗಳ ಸಂಬಳ ತರುವುದಾಗಿ ಹೇಳಿದ್ದಾಳೆ.
ಆದರೆ ಇದೇ ಗ್ರಾಮದ ಅಜೇಯ ಕುಮಾರ್ ಯಾನೆ ಅಜ್ಗ ಎಂಬಾತನು ಪ್ರೀತಿಸಿ ಮದುವೆಯಾಗು ಎಂದು ಬಲವಂತ ಪಡಿಸುತ್ತಿರುವ ವಿಷಯವೂ ಅರ್ಪಿತಾಳ ತಂದೆಗೆ ಗೊತ್ತಾಗಿ ಬುದ್ದಿವಾದ ಹೇಳಿದ್ದರು. ಆದರೆ ಅ.02 ರಂದು ಅಜೇಯ ಕುಮಾರ್ ಪ್ರೀತಿಸಿ ಮದುವೆಯಾಗು ಎಂದು ಹೇಳಿ ಅರ್ಪಿತಾಳನ್ನ ಮೈಸೂರಿನಿಂದ ಕಿಡ್ನ್ಯಾಪ್ ಮಾಡಿರುವುದಾಗಿ ಚಿತ್ರದುರ್ಗದ ಮಹಿಳಾ ಠಾಣೆಯಲ್ಲಿ ದೂರು ದಾಖಲಾಗಿದೆ.
ಅಜೇಯ ಕುಮಾರ್ ಗೂಡ್ಸ್ ವಾಹನದ ಚಾಲಕನಾಗಿದ್ದು, ಮೈಸೂರಿಗೆ ಹೋಗಿ ಅರ್ಪಿತಾಳನ್ನ ಚಿತ್ರದುರ್ಗಕ್ಕೆ ಕರೆದುಕೊಂಡು ಬಂದು ಅತ್ಯಾಚಾರ ನಡೆಸಿ ಬಲವಂತದಿಂದ ಆಕೆಯ ತಲೆಗೆಆಯುಧದಿಂದ ಹೊಡೆದು ಪ್ರಜ್ಞಾಹೀನಳನ್ನಾಗಿ ಮಾಡಿದ್ದನು. ಈ ವೇಳೆ ಆಕೆಯ ಮೈಮೇಲೆ ಪರಿಚಿದ ಗಾಯಗಳು ಕಾಣಿಕೊಂಡಿದ್ದವು, ದಾವಣಗೆರೆಯ ಎಸ್ ಎಸ್ ಆಸ್ಪತ್ರೆಯಲ್ಲಿ ದಾಖಲಿಸಿದ್ದ ಅಜೇಯ. ಈ ವಿಷಯವನ್ನ ಸಹೋದರ ರಮೇಶ್ ಗೆ ತಿಳಿಸಿದ್ದನು. ಈ ವಿಷಯವನ್ನ ಅರ್ಪಿತಾಳ ತಂದೆಗೆ ಮುಟ್ಟಿಸುವ ಸಲುವಾಗಿ ರಮೇಶ್ ಗ್ರಾಮದ ನಾಗರಾಜಪ್ಪನಿಗೆ ತಿಳಿಸಿದ್ದನು.
ನಾಗರಾಜಪ್ಪ ಅರ್ಪಿತಾಳ ತಂದೆ ಹನುಮಂತಪ್ಪರಿಗೆ ತಿಳಿದ್ದಾರೆ. ಅತ್ಯಾಚರ ವೆಸಗಿ ಆಸ್ಪತ್ರೆಗೆ ದಾಖಲಿಸಿ ಅಜೇಯ ಕುಮಾರ್ ತಲೆಮರಿಸಿಕೊಂಡಿರುವುದಾಗಿ ದೂರು ದಾಖಲಾಗಿತ್ತು. ಎಸ್ ಎಸ್ ಆಸ್ಪತ್ರೆಯಿಯಂದ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ಕರೆತಂದು ಅರ್ಪಿತಾಳಿಗೆ ಚಿಕಿತ್ಸೆ ನೀಡಲು ಯತ್ನಿಸಿದಾಗ್ಯೂ ಸಹ ವೈದ್ಯರು ಆಕೆ ಬದುಕುಳಿಯುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು.
ಶಿವಮೊಗ್ಗದ ಮೆಗ್ಗಾನ್ ನಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಅರ್ಪಿತಾ ಇಂದು ಬೆಳಿಗ್ಗೆಬ 6 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿದ್ದಾಳೆ. ಮೃತದೇಹವನ್ನ ಮೆಗ್ಗಾನ್ ಮರಣೋತ್ತರ ಪರೀಕ್ಷೆಯಲ್ಲಿ ಇತಿಸಲಾಗಿದೆ.
ಇದನ್ನೂ ಓದಿ-https://suddilive.in/archives/614
