ಪೈಪ್ ಕಳವು ಮಾಡಿದ ಆರೋಪಿ ಮಾಲು ಸಮೇತ ಪತ್ತೆ

ಸುದ್ದಿಲೈವ್/ಶಿವಮೊಗ್ಗ

ಶಾಲೆಯ ಬಹುಗ್ರಾಮ ಕುಡಿಯುವ ನೀರಿಗಾಗಿ ಸಂಗ್ರಹಿಸಿ ಇಟ್ಟಿದ್ದ ಪೈಪ್ ಗಳನ್ನ ಕಳವು ಮಾಡಿದ ಪ್ರಕರಣವನ್ನ ಸಾಗರ ಗ್ರಾಮಾಂತರ ಪೊಲೀಸರು ಬೇಧಿಸಿ ಓರ್ವನನ್ನ ಬಂಧಿಸಿ ಲಕ್ಷಾಂತರ ರೂ ಮೌಲ್ಯದ ಪೈಪ್ ಗಳು ಮತ್ತು ಸಾಗಾಟಕ್ಕೆ ಬಳಸಿದ ವಾಹನವನ್ನ ವಶಕ್ಕೆ ಪಡೆದಿದ್ದಾರೆ.
ಸಾಗರ ತಾಲ್ಲೂಕಿನ ಹೆಗ್ಗೋಡಿನ ಕೇಡಲಸರ ಶಾಲಾ ಆವರಣದಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಆಳವಡಿಸಲು ಸಂಗ್ರಹಿಸಿಟ್ಟಿದ್ದ ಪೈಪ್ ಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುವ ಘಟನೆಯ ಬಗ್ಗೆ ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಬಹುಗ್ರಾಮದ ಪ್ರಾಜೆಕ್ಟ್ ಮ್ಯಾನೇಜರ್ ಕೃಷ್ಣಪ್ರಸಾದ್ ಸಾಗರ ಗಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಸಾಗರದ ಪೊಲೀಸ್ ಉಪಾಧೀಕ್ಷಕರು ಗೋಪಾಲಕೃಷ್ಣ ಟಿ ನಾಯ್ಕ,ಮೇಲ್ವಿಚಾರಣೆಯಲ್ಲಿ, ಪಿಐ ಮಹಾಬಲೇಶ್ವರ, ಪಿಎಸ್ಐ ನಾರಾಯಣ ಮಧುಗಿರಿ ಹಾಗೂ ಸಿಬ್ಬಂಧಿಗಳಾದ ಹೆಚ್.ಸಿ, ಸನಾವುಲ್ಲಾ, ಫೈರೋಜ್ ಅಹಮದ್ ಮತ್ತು ಸಿಪಿಸಿ ರವಿಕುಮಾರ್ ರವರುಗಳನ್ನೊಳಗೊಂಡ ತನಿಖಾ ತಂಡವನ್ನು ರಚಿಸಲಾಗಿದೆ.
ತನಿಖಾ ತಂಡವು ದಿನಾಂಕ: 06-11-2023 ರಂದು ಪ್ರಕರಣದ ಆರೋಪಿ ವೇಗರಾಜ್ @ ರಾಜ್, 40 ವರ್ಷ, ಹೊಸೂರು, ಸಾಗರ ತಾಲ್ಲೂಕ್* ಈತನನ್ನು ದಸ್ತಗಿರಿ ಮಾಡಿ, ಆರೋಪಿತನಿಂದ ಪ್ರಕರಣಕ್ಕೆ ಸಂಬಂಧಿಸಿದ ಅಂದಾಜು ಮೌಲ್ಯ 1,15,000/- ರೂಗಳ ಪೈಪ್ ಬಂಡಲ್ ಗಳು
ಮತ್ತು ಕೃತ್ಯಕ್ಕೆ ಬಳಸಿದ ಅಂದಾಜು ಮೌಲ್ಯ 1,50,000/- ರೂಗಳ ಟಾಟಾ ಸೂಪರ್ ಏಸ್ ಮಿಂಟ್ ವಾಹನ ಸೇರಿ ಒಟ್ಟು ರೂ 2,65,000/- ಮೌಲ್ಯದ ಮಾಲನ್ನು ಅಮಾನತ್ತು ಪಡಿಸಿಕೊಳ್ಳಲಾಗಿರುತ್ತದೆ. ತನಿಖಾ ತಂಡದ ಉತ್ತಮವಾದ ಕಾರ್ಯವನ್ನು ಪೊಲೀಸ್ ಅಧೀಕ್ಷಕರು ಪ್ರಶಂಸಿಸಿ ಅಭಿನಂದಿಸಿರುತ್ತಾರೆ.
ಇದನ್ನೂ ಓದಿ-https://suddilive.in/archives/2607
