ರಾಜಕೀಯ ಸುದ್ದಿಗಳು

ಸಹ್ಯಾದ್ರಿ ಕಾಲೇಜಿನ ಉಪನ್ಯಾಸಕನ ವಿರುದ್ಧ ಕ್ರಮ -ಮಧು ಬಂಗಾರಪ್ಪ

ಸುದ್ದಿಲೈವ್/ಶಿವಮೊಗ್ಗ

ಕರ್ನಾಟಕ ಮತ್ತು ಮಹಾರಾಷ್ಟ್ರದ ಗಡಿ ಭಾಗದ ಹಳ್ಳಿಗಳನ್ನ ವಿಮೆ ಮಾಡಿಸಲಾಗುತ್ತಿರುವ ಬಗ್ಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಹಾರಾಷ್ಟ್ರ ಕಾನೂನು ಮೀರಿ ಕೆಲಸ ಮಾಡಲು ಸಾಧ್ಯವಿಲ್ಲವೆಂದು ಹೇಳಿದರು.

ವಿಮೆ ನೀಡುವ ಬಗ್ಗೆ ನನಗೆ ಮಾಹಿತಿ ಇಲ್ಲ. ಇದು ಕಾನೂನಿನಲ್ಲೂ ನೀಡಲು ಬರೊದಿಲ್ಲ ಎಂದರು. ದತ್ತಪೀಠ ಮತ್ತು ಕರಸೇವಕರ ಮೇಲಿನ ಹಳೇ ಕೇಸು ಮತ್ತೆ ರೀ ಒಪನ್ ಮಾಡಲಾಗುತ್ತಿದೆ. ಈ  ಬಗ್ಗೆ ಪ್ರತಿಕ್ರಿಯಿಸಿದ‌ ಸಚಿವ ಮಧು ಬಂಗಾರಪ್ಪ, ಬಿಜೆಪಿ ರಾಜಕೀಯ ಉದ್ದೇಶದಿಂದ ಪ್ರತಿಭಟನೆಗೆ ಇಳಿದಿದೆ ಎಂದರು.‌

ರಾಮಮಂದಿರ ಉದ್ಘಾಟನೆ ಆಗುವ ವೇಳೆ 30 ವರ್ಷದ ಕೇಸು ಈಗ ಯಾಕೆ ಎತ್ತಲಾಗಿದೆ ಎಂಬ ಮಾಧ್ಯಮ ಪ್ರಶ್ನೆಗೆ ರಾಮನ ಉದ್ಘಾಟನೆಗೆ ಕರಸೇವಕರ ಮೇಲಿನ ಪ್ರಕರಣವನ್ನ ಲಿಂಕ್ ಮಾಡಬಾರದು. ಅದು ಪ್ರೋಸೆಸ್ ನ ಒಂದು ಭಾಗ ಎಂದು ಸ್ಪಷ್ಟಪಡಿಸಿದರು.

ಕರ್ನಾಟಕದಲ್ಲ ಗೋಧ್ರ ಪ್ರಕರಣ ಮರುಕಳುಸಲಿದೆ ಎಂಬ ಹರಿಪ್ರಸಾದ್ ಹೇಳಿಕೆಯನ್ನ ಹರಿಪ್ರಸಾದ್ ಅವರೇ  ಸಮರ್ಥಿಸಿಕೊಂಡಿದ್ದಾರೆ ರಾಜಕೀಯವಾಗಿ ಮುಗಿಬೀಳುವ ಹವ್ಯಾಸ ಬಿಜೆಪಿಗೆ ರಕ್ತಗತವಾಗಿದೆ. ಬಿಜೆಪಿ ದಮಾಧಾನವಾಗಿ ತಿಳಿಧು ನಂತರ ಪ್ರತಿಕ್ರಿಯಿಸಲಿ ಎಂದರು.

ರಾಮನ ಬಿಜೆಪಿ ಆಸ್ತಿ ಎಂದು ಬಿಂಬಿಸಿಕೊಂಡು ಹೋಗ್ತಾ ಇದ್ದಾರೆ. ಬೇರೆ ಧರ್ಮದವರು ಈ ದೇಶದಲ್ಲಿ ಯಾರು ಬೇಕಾದರು ಅವರ ಧರ್ಮ‌ಆಚರಿಸಬಹುದು.‌ ಆದರೆ ಈಶ್ವತಪ್ಪನವರು ಯತೀಂದ್ರ ಮತ್ತು ಸಿದ್ದರಾಮಯ್ಯ ಮತಾಂತರವಾಗಲಿ ಎಂದಿದ್ದಾರೆ. ಅದರ ಬಗ್ಗೆ ನಾನು ಯಾಕೆ ಪ್ರತಿಕ್ರಿಯಿಸಲಿ ಎಂದರು.

ಸಿದ್ದರಾಮಯ್ಯನವರಿಗೆ ರಾಮಮಂದಿರ ಉದ್ಘಾಟನೆಗೆ ಆಹ್ವಾನ ಬಂದಿಲ್ಲವೆಂಬ ಹೇಳಿಕೆಯನ್ನ ರಾಜಕೀಯವಾಗಿ ನೋಡುವುದು ಬಿಜೆಪಿಗೆ ಗೊತ್ತಿದೆ. ಶಾಲೆ ಶಿಕ್ಷಕರು ರಸ್ತೆ ಬಗ್ಗೆ ನನ್ನನ್ನ ಕೇಳಲಿ, ಧಾರ್ಮಿಕ ಭಾವನೆ ಕೆರಳಿಸಿ ಮತ  ಕೇಳುವುದು ಅವರ ಹವ್ಯಾಸ. 2013 ರಿಂದ ಬಿಜೆಪಿ ಧರ್ಮವನ್ನ ಕೆರಳಸುತ್ತಿದ್ದಾರೆ. ಈ ಬಾರಿ ರಾಮನೇ ಅವರಿಗೆ ತಿರುವಮಗುಬಾಣವಾಗಲಿದೆ ಎಂದರು.

ರಾಮ ಮತ್ತು  ಅಲ್ಲಾ ಇಬ್ವರೂ ಕಾಂಗ್ರೆಸ್ ಗೆ ಒಳ್ಳೆಯದನ್ನ ಮಾಡಲಿದ್ದಾರೆ.  ಈ ಬಾರಿ ಬಿಜೆಪಿ 28 ಕ್ಕೆ 28 ಸ್ಥಾನ ಗೆಲ್ಲುವುದಾಗಿ ಹೇಳಿಕೊಂಡಿದೆ. ಈ ಬಾರಿ ವಿಧಾನ ಸಭೆಯಲ್ಲಿ ಬಿಜೆಪಿ 150 ಸ್ಥಾನ ಗೆಲ್ಲುವುದು ಗುರಿ ಎಂದಿತ್ತು ನಂತರ ಬಂದಿದ್ದು 50 ಕ್ಕಿಂತ 17 ಹೆಚ್ಚು ಸ್ಥಾನಕ್ಕೆ ತೃಪದತಿಪಡಬೇಕಿದೆ ಎಂದರು.

ನಿಗಮ ಮಂಡಳಿ ಅಧ್ಯಕ್ಷರನ್ನ ನೇಮಿಸುವುದು ವಿಳಂಭ ವಾಗುತ್ತಿದೆ. ದೊಡ್ಡ ವಿಷಯವಾಗಿದ್ದರಿಂದ ಹೈಕಮ್ಯಾಂಡ್ ನಿರ್ಣಯಿಸಲಿದೆ. ಲೋಕಸಭಾ‌ ಚುನಾವಣೆ ಅಭ್ಯರ್ಥಿಗಳ ಹೆಸರನ್ನ ಯಾವಾಗ‌ಬಿಡುಗಡೆಯಾಗಲಿದೆ ಎಂಬ ವಿಷಯದ ಬಗ್ಗೆ ಪ್ರತಿಕ್ರಿಯಿಸಿದ ಮಧು ನನಗೆ ಮಂಗಳೂರು ಇನ್ಚಾರ್ಜ್ ಇದ್ದೀನಿ. ರಾಜಣ್ಣ ಶಿವಮೊಗ್ಗದ ಇನ್ಚಾರ್ಜ್ ಆಗಿದ್ದೇನೆ.

ನಾನು ಮಂಗಳೂರಿನಲ್ಲಿ ಮೂರು ಸಭೆ ಮಾಡಿದ್ದೇನೆ ಅಧ್ಯಕ್ಷರಿಗೆ ಮಾಹಿತಿ ನೀಡಿದ್ದೀನಿ. ಶಿವಮೊಗ್ಗ ಲೋಕಸಭಾದಿಂದ ಗೀತಾ ಶಿವರಾಜ್ ಕುಮಾರ್ ಸ್ಪರ್ಧಿಸುವ ಬಗ್ಗೆ ಪಕ್ಷ ನಿರ್ಣಯಿಸಲಾಗಿದೆ. ಚಿಂತಾಮಿವಸತಿ ಶಾಲೆಯ ಊಟದಲ್ಲಿ ಮಲ ಸೇರಿಸಿದ್ದರ ಬಗ್ಗೆ ಲ್ಯಾಬ್ ರಿಪೋರ್ಟ್ ಬಙದಿದೆಯಾ ಎಂಬ ಮಾಧ್ಯಮ ಪ್ರಶ್ನೆಗೆ ಮಾಹಿತಿ ಇಲ್ಲ ಎಂದರು.

ಸಹ್ಯಾದ್ರಿ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರೊಬ್ವರ ಮೇಲೆ ವಿದ್ಯಾರ್ಥಿಗಳು ಪ್ರತಿಭಟನೆ ಮಾಡಿರುವ ಬಗ್ಗೆ ಶಿಕ್ಷಕನನ್ನ ಕೆಲಸ ದಿಂದ ತೆಗೆಯಲಾಗಿದೆ.‌ಎಫ್ಐಆರ್ ಸಹ ದಾಖಲಿಸಲಾಗಿದೆ ಎಂದು ಸಚಿವರು ತಿಳಿಸಿದರು.

ಇದನ್ನೂ ಓದಿ-https://suddilive.in/archives/6235

Related Articles

Leave a Reply

Your email address will not be published. Required fields are marked *

Back to top button