ಸ್ಥಳೀಯ ಸುದ್ದಿಗಳು

ಬಿಜೆಪಿ ಯಾಕೆ ಕರಸೇವೇಕರ ವಿಷಯ ಕೈಗೆತ್ತಿಕೊಂಡಿದೆ ಎಂಬುದರ ಬಗ್ಗ ಆಯನೂರು ಸ್ಪಷ್ಟನೆ

ಸುದ್ದಿಲೈವ್/ಶಿವಮೊಗ್ಗ

ಕರಸೇವಕರನ್ನ ಬಂಧಿಸಿದ್ದಕ್ಕೆ ಬಿಜೆಪಿ ನಾಯಕರು‌ ಶಿವಮೊಗ್ಗದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಆದರೆ ನಿನ್ನೆ ಬಂಧನವಾದವರ ಹೆಸರ ವಿರುದ್ಧ ದೂರು ದಾಖಲಾಗಿವೆಯಾ ಎಂದು ಈಶ್ವರಪ್ಪನವರ ಹೆಸರು ಹೇಳದೆ ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಲೇವಡಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಕರಸೇವಕರ ಹೋರಾಟವನ್ನ ಬಿಜೆಪಿ ಯಾಕೆ ಕೈಗೆ ಎತ್ತಿಕೊಂಡಿದೆ. ಪಬ್ಲಿಕ್ ಅಕೌಂಟ್ ಸಮುತಿಗೆ 40 ಸಾವಿರ ಕೋಟಿ ಹಣ ದುರುಪಯೋಗವಾಗಿರುವುದು ಬಂದಿದೆ ಎಂಬ ಯತ್ನಾಳ್ ಆರೋಪವನ್ನ‌ ಒತ್ತಟ್ಟಿಗೆ ಇಡಲಾಗಿದೆ. ಸೋಮಣ್ಣನವರನ್ನ‌ ಸೋಲಿಸುವ ಪ್ರಯತ್ನ ನಡೆದಿದೆ ಎಂಬ ಆರೋಪಗಳನ್ನ ಬದಿಗಿಟ್ಟು ಕರಸೇವಕರ ಪ್ರತಿಭಟನೆ ಎತ್ತಿಕೊಳ್ಳಲಾಗಿದೆ. ಬಿಜೆಪಿಯಲ್ಲಿ ವಿಧಾನ ಪರಿಷತ್ ನಾಯಕರ ಆಯ್ಕೆ ಆಗಿಲ್ಲ ಆಗಬೇಕಿತ್ತು ಮಾಡಿಲ್ಲ ಎಂದು ಆರೋಪಿಸಿದರು.

ಬಸವರಾಜ್ ಬೊಮ್ಮಾಯಿಯನ್ನ ಸೋಲಿಸಲು ಈಗಿನ‌ಬಿಜೆಪಿ ರಾಜ್ಯಾಧ್ಯಕ್ಷ ವಿಜೇಂದ್ರ ಯತ್ನಿಸಿದ್ದಾರೆ ಎಂದು ಯತ್ನಾಳ್ ಆರೋಪಕ್ಕೆ ಬೊಮ್ಮಾಯಿ ಇಲ್ಲವೆಂದು ಹೇಳಲೇ ಇಲ್ಲ. ಈ ಬಗ್ಗೆ ಯಾರಾದರೂ ಹೇಳಬೇಕಲ್ವಾ? ಇದನ್ನ ಮುಚ್ಚಲು ಕರಸೇವಕರ ಬಂಧನದ ವಿಚಾರ ಕೈಗೆತ್ತಿಕೊಳ್ಳಲಾಗಿದೆ ಎಂದು ದೂರಿದರು.

ಈಶ್ವರಪ್ಪ ನವರು ಸಿದ್ದರಾಮಯ್ಯ ಮತ್ತು ಪುತ್ರ ಯತೀಂದ್ರ ರವರನ್ನ ಮತಾಂತರವಾಗಿ ಎಂದಿದ್ದಾರೆ. ಈಶ್ವರಪ್ಪ ಮತಾಂತರ ಮಾಡುವ ಸ್ವಾಮೀಜಿನಾ ಎಂದು ದೂರಿದರು. ಈಗಿನ ಶಾಸಕರು ಸಿದ್ದರಾಮಯ್ಯ ನವರ ತಲೆ ಕಡಿಯಬೇಕೆಂಬ ಕರೆ ಕೊಟ್ಟಿದ್ದರು. ಇವೆಲ್ಲ ಬಿಜೆಪಿಗೆ ಕರಗತವಾದ ಮಾತುಗಳು ಎಂದು ದೂರಿದರು.

ಸಿಎಂ ಸ್ಥಾನವನ್ನ ಸಿದ್ದರಾಮಯ್ಯನವರು ಉಳಿಸಿಕೊಳ್ಳಬೇಕೆಂದರೆ ಕಾಂಗ್ರೆಸ್ ನವರು ಹಣೊರಾಟ ಮಾಡಬೇಕು ಎಂದು ಉತೀಂದ್ರ ಹೇಳಿಕೆ ಬಗ್ಗೆ ಪ್ರಸ್ತಾಪಿಸಿದ ಆಯನೂರು ಬಿಜೆಪಿಯಲ್ಲಿ ಯಡಿಯೂರಪ್ಪನವರನ್ನ ಯಾರು ಸಿಎಂ ಸ್ಥಾನದಿಂದ ಇಳಿಸಿದರು ಎಂದು ಪ್ರಶ್ನಿಸಿದರು. ಸಿಎಂ ಸ್ಥಾನವೇ  ಹೋರಾಟದಿಂದ  ಬಳಿಸಿಕೊಳ್ಳುವ ಸ್ಥಾನ ಎಂದರು.

ಸುದ್ದಿಗೋಷ್ಠಿಯ್ಲಿ ಪಾಲಿಕೆ ಮಾಜಿ ಸದಸ್ಯ ಧೀರಾಜ್ ಹೊನ್ಬವಿಲೆ, ಶಿಜು ಪಾಶ, ಹಿರಣಯ್ಯ ಮೊದಲಾದವರು ಉಪಸ್ಥಿತರಿದ್ದರು.

ಇದನ್ನೂ ಓದಿ-https://suddilive.in/archives/6203

Related Articles

Leave a Reply

Your email address will not be published. Required fields are marked *

Back to top button

Notice: ob_end_flush(): Failed to send buffer of zlib output compression (0) in /home/twzwscfi/suddilive.in/wp-includes/functions.php on line 5373