10 ದಿನಗಳ ವರೆಗೆ ನಡೆಯುವ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗದ ನವುಲೆಯ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಮೈದಾನದಲ್ಲಿ ಮತ್ತು ಜೆಎನ್ ಸಿಸಿ ಇಂಜಿನಿಯರ್ ಕಾಲೇಜಿನಲ್ಲಿ 15 ವರ್ಷದ ಒಳಗಿನ ಬಾಲಕಿಯರ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಲಾಗಿದೆ.
35 ಒವರ್ ಗಳ ಸೀಮಿತ ಓವರ್ ಪಂದ್ಯಾವಳಿಗಳನ್ನ ಕೆಎಸ್ ಸಿಎ ಮೈದಾನದಲ್ಲಿ ಎರಡು ಪಂದ್ಯಾವಳಿ ಮತ್ತು ಜೆಎನ್ ಸಿಸಿ ಇಂಜಿನಿಯರ್ ಕಾಲೇಜಿನಲ್ಲಿ ಒಂದು ಪಂದ್ಯಾವಳಿ ಆರಂಭವಾಗಿದೆ. ಪಂದ್ಯಾವಳಿಗಳು 10 ದಿನಗಳ ವರೆಗೆ ನಡೆಯಲಿದೆ. ಉತ್ತರ ಪ್ರದೇಶ, ಹಿಮಾಚಲ ಪ್ರದೇಶ, ಬರೋಡಾ, ಪಾಂಡೀಚರಿ, ಪಂಜಾಬ್, ಮಣಿಪುರ ನಡುವೆ ಪಂದ್ಯಾವಳಿಗಳು ನಡೆಯಲಿದೆ.
ಕೆಎಸ್ ಸಿಎ ಮೈದಾನದಲ್ಲಿ ಸರಿಯಾಗಿ 9-25 ಕ್ಕೆ ಗಂಟೆ ಬಾರಿಸುವ ಮೂಲಕ ಕ್ರಿಕೆಟ್ ಗೆ ಚಾಲನೆ ನೀಡಲಾಯಿತು. ಸದಾನಂದ್, ರಾಜೇಂದ್ರ ಕಾಮತ್, ಸುಬ್ರಹ್ಮಣ್ಯ, ಗೋಪಿನಾಥ್, ನಾಗೇಂದ್ರ ಪಂಡಿತ್ ಟಿಜಿ.ರಾಘವೇಂದ್ರ ಸಂಜಯ್ ಕುಮಾರ್, ಗೋ.ವ.ಮೋಹನ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಕೆಎಸ್ ಸಿಎ ಮೈದಾನದಲ್ಲಿ ಹಿಮಾಚಲ್ ಪ್ರದೇಶ್, ಮಣಿಪುರ, ಉತ್ತರ ಪ್ರದೇಶ ಮತ್ತು ಪಂಜಾಬ್ ನಡುವೆ ಪಂದ್ಯಾವಳಿಗಳು ಆರಂಭವಾಗಿದೆ. ಹಿಮಾಚಲ್ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಹಿಮಾಚಲ ಪ್ರದೇಶದ ಒಪನರ್ ಆಗಿ ಸೈನಾ ಮತ್ತು ಅನಾಹಿತಾ ಸಿಂಗ್ ಒಪನರ್ ಆಗಿ ಆಗಮಿಸಿದ್ದಾರೆ. ಸೈನಾ ಅವರ ಅಮೋಘ ನಾಲ್ಕು ರನ್ ಹೊಡೆತ ಆರಂಭಿಸಿ ಬಿರುಸಿನ ಬ್ಯಾಟಿಂಗ್ ಪ್ರದರ್ಶನ ಮಾಡುತ್ತಿದ್ದಾರೆ.
ಕೆಎಸ್ ಸಿಎ ಎರಡನೇ ಮೈದಾನದಲ್ಲಿ ಟಾಸ್ ಗರದ್ದ ಯುಪಿ ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಪಂಜಾಬ್ ನ ಆರಂಭಿಕ ಆಟಗಾರರಾದ ಆರತಿ ಶರ್ಮ, ಮನ್ ಪ್ರೀತ್ ಕೌರ್ ಆಗಮಿಸಿದ್ದು ಪಂಚಾಬ್ ಗೆ ಯುಪಿ ಆರಂಭಿಕ ಆಘಾತ ನೀಡಿ ಉತ್ತಮ ಪ್ರದರ್ಶನ ನೀಡಿದೆ. ಅವನ್ಯ ಜೈನ್ ಔಟಾಗಿದ್ದಾರೆ.
ಜೆಎನ್ ಸಿಸಿ ಇಂಜಿನಿಯರ್ ಕಾಲೇಜಿನಲ್ಲಿ ಪಾಂಡೀಚೆರಿ ಮತ್ತು ಬರೋಡಾ ತಂಡಗಳ ನಡುವೆ ಸೆಣಸಾಟ ನಡೆದರೆ, ಬರೋಡಾ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಪಾಙಡೂಚೆರಿ ಆರಂಭಿಕ ಆಘಾತ ಎದುರಿಸುತ್ತಿದ್ದು ಎರಡು ವಿಕೆಟ್ ಕಳೆದುಕೊಂಡಿದೆ.
ಇದನ್ನೂ ಓದಿ-https://suddilive.in/archives/3190
