6 ಕ್ಲಾಸ್ ನಿಂದ ಯೋಗ ಮಾಡಿಕೊಂಡು ಬಂದಿರುವೆ-ಸ್ಪೀಕರ್ ಖಾದರ್

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗದ ಕುವೆಂಪು ರಂಗ ಮಂದಿರದಲ್ಲಿ ಪಾಲಿಕೆ ವತಿಯಿಂದ ಹಮ್ಮಿಕೊಳ್ಳಲಾದ ಯೋಗಾ ದಸರಾಕ್ಕೆ ವಿಧಾನ ಸಭಾ ಸ್ಪೀಕರ್ ಯು.ಟಿ. ಖಾದರ್ ಬೆಳ್ಳಂಬೆಳಿಗ್ಗೆ ಆಗಮಿಸಿ ಯೋಗಾದಲ್ಲಿ ಪಾಲ್ಗೊಂಡಿದ್ದಾರೆ.
ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಸ್ಪೀಕರ್ ಅವರು ನಾನು 6ನೇ ಕ್ಲಾಸ್ ನಿಂದ ಯೋಗಾಸನ ಮಾಡಿಕೊಂಡು ಬಂದಿದ್ದೇನೆ. ಆಗಿನಿಂದಲೂ ನನಗೆ ಯೋಗದ ಪರಿಚಯವಿದೆ. ನನ್ನ ತಾಯಿಯವರ ತಂದೆ, ನನ್ನ ಅಜ್ಜ ಯೋಗ ಗುರುವಿಗೆ ಮನೆಗೆ ಬಂದು ಕಲಿಸಿಕೊಡುವಂತೆ ಕರೆ ನೀಡುತ್ತಿದ್ದರು. ಇದರಿಂದ ಯೋಗ ನನಗೆ ಕರಗತವೆಂದರು.
ಎಲ್ಲರೂ ಯೋಗಾಸನ ಮಾಡಬೇಕು.ಯೋಗಾಸನ ಆರೋಗ್ಯಕ್ಕೆ ಒಳ್ಳೆಯದು ಎಂದ ಸಭಾಪತಿಗಳು, ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ವಿಚಾರದ ಬಗ್ಗೆಯೂ ಮಾತನಾಡಿ. ಈ ಬಗ್ಗೆ ಸರ್ಕಾರ ತೀರ್ಮಾನ ತೆಗೆದುಕೊಳ್ಳಲಿದೆ.ಎಷ್ಟು ದಿನ ಅಧಿವೇಶನ ನಡೆಯಲಿದೆ ಎಂಬುದು ಸರ್ಕಾರ ತೀರ್ಮಾನಿಸಲಿದೆ ಎಂದರು.
ನಾನು ಹಾಗೂ ಪರಿಷತ್ ಸಭಾಪತಿಗಳು ತೆರಳಿ ಅಧಿವೇಶನದ ಬಗ್ಗೆ ಪರಿಶೀಲನೆ ನಡೆಸುತ್ತೇವೆ.ಈ ಬಗ್ಗೆ ಬೆಳಗಾವಿ ಜಿಲ್ಲಾಧಿಕಾರಿ ಬಳಿ ಮಾತನಾಡಿದ್ದೇನೆ ಎಂದರು.
ಇದನ್ನೂ ಓದಿ-https://suddilive.in/archives/1650
