ಕ್ರೈಂ ನ್ಯೂಸ್
ರೋಹನ್ ರಾವ್ ಗುಲ್ಬರ್ಗ ಜೈಲಿಗೆ

ಸುದ್ದಿಲೈವ್/ಶಿವಮೊಗ್ಗ

ರಾಗಿಗುಡ್ಡದ ಗಲಭೆ ಪ್ರಕರಣದಲ್ಲಿ ಎರಡರಿಂದ ಮೂರು ಪ್ರಕರಣಗಳಲ್ಲಿ ಆರೋಪಿಯಾಗಿದ್ದ ರೋಹನ್ ರಾವ್ ಗೆ 14 ದಿನ ನ್ಯಾಯಾಂಗ ಬಂಧನಕ್ಕೊಳಪಡಿಸಲಾಗಿದೆ. ಇದರಿಂದ ಆತನನ್ನ ಗುಲ್ಬರ್ಗ ಜೈಲಿಗೆ ರವಾನಿಸಲಾಗಿದೆ.
ರಾಗಿಗುಡ್ಡದ ಪ್ರಕರಣದಲ್ಲಿ ರೋಹನ್ ರಾವ್ ಗಾಯಗೊಂಡು ನಿನ್ನೆ ಬಿಜೆಪಿಯ ಸತ್ಯಶೋಧನಾ ಸಮಿತಿ ಬರುವವರೆಗೂ ಮೆಗ್ಗಾನ್ ನಲ್ಲಿದ್ದ ರೋಹನ್ ರಾವ್ ಇಂದು ನ್ಯಾಯಾಯಲಕ್ಕೆ ಹಾಜರಿ ಪಡಿಸಿ 14 ದಿನಗಳ ಕಾಲ ನ್ಯಾಯಾಂಗ ಬಂಧಕ್ಕೊಳಪಡಿಸಲಾಗಿದೆ.
ರೋಹನ್ ಜೊತೆಗೆ ಇದ್ದ ಕಿರಣ್, ಪ್ರದೀಪ್ ಸೇರಿ ಮೂವರಿಗೆ ನೋಟೀಸ್ ನೀಡಲಾಗಿದೆ ಎಂದು ತಿಳಿದು ಬಂದಿದೆ. ರೋಹನ್ ರಾವ್ ಮೇಲೆ ಅಟ್ಯಾಕ್ ಮಾಡಲಾಗಿದ್ದು ಆತನ ತಲೆಗೆ 6 ಹೊಲಿಗೆ ಹಾಕಲಾಗಿತ್ತು. ನಿನ್ನೆ ವರೆಗೆ ಮೆಗ್ಗಾನ್ ನಾಲ್ಕನೆ ಮಹಡಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದನು.
ಇದನ್ನೂ ಓದಿ-https://suddilive.in/archives/678
