ಸ್ಥಳೀಯ ಸುದ್ದಿಗಳು

ಗಡಿ ಅಂಚಿನ ಗ್ರಾಮದಲ್ಲಿ ಮೂರು ಕಾಡಾನೆ ಪ್ರತ್ಯಕ್ಷ

ಸುದ್ದಿಲೈವ್/ಆನವಟ್ಟಿ

ಶಿವಮೊಗ್ಗ ಜಿಲ್ಲೆಯ ಗಡಿ ಅಂಚಿನ ಗ್ರಾಮಗಳಲ್ಲಿ ಕಾಡಾನೆಗಳು ಪ್ರತ್ಯಕ್ಷವಾಗಿವೆ. ಮೂರು ಆನೆಗಳು ಪ್ರತ್ಯಕ್ಷವಾಗಿರುವುದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.

ಸೊರಬ ತಾಲೂಕು ಆನವಟ್ಟಿ ಹೋಬಳಿಯ ದ್ವಾರಹಳ್ಳಿ ಶಿವಮೊಗ್ಗ ಜಿಲ್ಲೆಯ ಗಡಿಯ ಗ್ರಾಮವಾಗಿದ್ದು ದ್ವಾರಹಳ್ಳಿಗೆ ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಗೋಂದಿಹಳ್ಳಿಯಿಂದ ಬಂದಿರುವುದಾಗಿ ಗ್ರಾಮಸ್ಥರು ದೂರಿದ್ದಾರೆ.  ವರದ ನದಿ ದಾಟಿಕೊಂಡು ಬಂದಿರುವುಅಗಿ ಶಂಕಿಸಲಾಗಿದೆ.

ಬೆಳೆದು ನಿಂದ ಭತ್ತದ ಗದ್ದೆಯಲ್ಲಿ ಎರಡು ದೊಡ್ಡ ಆನೆಗಳು ಒಂದು ಮರಿ ಆನೆ ಪ್ರತ್ಯಕ್ಷವಾಗಿದೆ. ಬೆಳೆ ಫೈರಿಗೆ ಹಾನಿ ಮಾಡುವ ಮುನ್ನ ಆನೆಗಳನ್ನ ಓಡಿಸುವಂತೆ ಗ್ರಾಮಸ್ಥರು ಅರಣ್ಯ ಅಧಿಕಾರಿಗಳಲ್ಲಿ ಕೇಳಿಕೊಂಡಿದ್ದಾರೆ.

ಶಿವಮೊಗ್ಗ ತಾಲೂಕು ಹಣಗರೆಕಟ್ಟೆಯ ಸುತ್ತಮುತ್ತಲಿನ ಗ್ರಾಮಗಳಲ್ಲಿ ಎರಡು ಆನೆಗಳ ಪ್ರತ್ಯಕ್ಷವಾಗಿರುವುದು ಗ್ರಾಮಸ್ಥರ ನಿದ್ದೆಗೆಡೆಸಿತ್ತು. ಈಗ ಸಕ್ರಬೈಲಿನ ಆನೆಗಳಿಂದ ಡ್ರೈವ್ ಆರಂಭಿಸಿದ  ನಂತರ ಕಾಡಾನೆಗಳು ಕಾಣಿಸಿಕೊಂಡಿರುವ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

ಭದ್ರಾವತಿ ತಾಲೂಕಿನ ಉಂಬ್ಳೆ ಬೈಲಿನಲ್ಲಿ ಆನೆಗಳ ಹಾವಳಿ ಆರಂಭವಾಗಿದೆ. ಈಗ ಜಿಲ್ಲೆಯ ಗಡಿ ಅಂಚಿನ ಗ್ರಾಮದಲ್ಲಿ ಕಾಡಾನೆ ಕಾಣಿಸಿಕೊಂಡಿರುವುದು ಭಯ ಹುಟ್ಟಿಸಿದೆ.

ಇದನ್ನೂ ಓದಿ-https://suddilive.in/archives/3641

Related Articles

Leave a Reply

Your email address will not be published. Required fields are marked *

Back to top button