ಸ್ಥಳೀಯ ಸುದ್ದಿಗಳು

ಸಾಮೂಹಿಕ ಪಡಿಪೂಜೆ ಮತ್ತು ಶಕ್ತಿಪೂಜೆಗೆ ಚಾಲನೆ

ಸುದ್ದಿಲೈವ್/ಶಿವಮೊಗ್ಗ

ಶಬರಿ ಮಲೆಯಲ್ಲಿ ಅಯ್ಯಪ್ಪ ಸ್ವಾಮಿ ಭಕ್ತರಿಗೆ ಅನ್ನದಾನಕ್ಕಾಗಿ ಮುಷ್ಠಿ ಅಕ್ಕಿ ಅಭಿಯಾನದ ಅಂಗವಾಗಿ ಸಾಮೂಹಿಕ ಪಡಿಪೂಜೆ ಮತ್ತು ಶಕ್ತಿಪೂಜೆಗೆ ಮಾಜಿ ಸಚಿವ ಈಶ್ವರಪ್ಪ ಮತ್ತು ಶಾಸಕ ಚೆನ್ನಬಸಪ್ಪ ಚಾಲನೆ ನೀಡಿದರು.

ಮನೆ ಮನೆಗೆ ಹೋದ ಈಶ್ವರಪ್ಪ, ಶಾಸಕರು ಮತ್ತು ಸಾಸ್ ನ ಕಾರ್ಯಕರ್ತರು ಮುಷ್ಠಿ ಅಕ್ಕಿಯನ್ನ ಸಂಗ್ರಹಿಸಿದರು. ಇಂದಿನಿಂದ ಸೋಮವಾರದ ವರೆಗೆ ಮನೆ ಮನೆಗೆ ತೆರಳಿ ಅಕ್ಕಿ ಸಂಗ್ರಹ ಮಾಡಲು ವಾಹನವನ್ನ ಬಿಡಲಾಗಿದೆ.

ಈ ಬಗ್ಗ ಮಾತನಾಡಿದ ಸಾಸ್ ನ ಮುಖಂಡ ಮಂಜುನಾಥ್ ಕಳೆದ ಬಾರಿ ಮೂರು ಲಾರಿ ಲೋಡು ಅಕ್ಕಿಯನ್ನ ಸಂಗ್ರಹಿಸಲಾಗಿತ್ತು. ಈ ಬಾರಿ ನಾಲ್ಕು ಲಾರಿ ಲೋಡು ಅಕ್ಕಿಯನ್ನ ಕಳುಹಿಸುವ ಗುರಿಯನ್ನ ಹೊಂದಲಾಗಿದೆ. ಸಾರ್ವಜನಿಕರು ಹೇಗೆ ಪ್ರತಿಕದರಿಯೆ ನೀಡಲಿದ್ದಾರೆ ಅದರ ಆಧಾರದ ಮೇಲೆ ಅಕ್ಲಿ ಸಂಗ್ರಹಿಸಲಾಗುವುದು ಎಂದರು

Related Articles

Leave a Reply

Your email address will not be published. Required fields are marked *

Back to top button

Notice: ob_end_flush(): Failed to send buffer of zlib output compression (0) in /home/twzwscfi/suddilive.in/wp-includes/functions.php on line 5373