ಸ್ಥಳೀಯ ಸುದ್ದಿಗಳು

ಈಗಲೇ ಹಿಂಗೆ, ಬೇಸಿಗೆಯಲ್ಲಿ ಕಥಗಳೇನು?

ಸುದ್ದಿಲೈವ್/ಭದ್ರಾವತಿ

ಭದ್ರ ನಾಲೆಯನ್ನ ನಂಬಿಕೊಂಡಿರುವ ಭದ್ರಾವತಿಯ ತಾಲೂಕಿನಲ್ಲೇ ನೀರಿಗೆ ಆಹಾಕಾರ ಆರಂಭವಾಗಿದೆ. ಇನ್ನೂ ಬೇಸಿಗೆಗೆ ಕೆಲ ತಿಂಗಳು ಬಾಕಿ ಇದೆ ಆಗಲೇ ನೀರಿಗಾಗಿ ಆಹಾಕಾರ ಆರಂಭವಾಗಿದೆ.

ಭದ್ರಾ ಬಲದಂಡೆ ನಾಲೆಯ ತಾಲೂಕಿನ, ಗುಡ್ಡದ ನೆರ್ಲೇಕೆರೆ ಗ್ರಾಮ, ಸಿದ್ದನಮಟ್ಟಿ ಯಲ್ಲಿ ಇರುವ ಜಮೀನಿನಲ್ಲಿರುವ ಅಡಿಕೆ ಸಸಿಗಳು ಒಣಗಲು ಆರಂಭವಾಗಿದೆ. ಡಿ.25 ರಿಂದ ಬಲದಂಡೆಗೆ ನೀರು ಹರಿದು ಬರಬೇಕಿತ್ತು. ಆದರೆ ನೀರು ಇಲ್ಲದ ಕಾರಣ ಅಡಿಕೆ ಸಸಿಗಳು ಒಣಗಿವೆ.

ಭದ್ರಾ ಬಲದಂಡೆಗೆ ನೀರು ಬಿಟ್ಟಲ್ಲಿ ಜೀವ ಬಂದಂತಾಗುತ್ತದೆ. ಕಳೆದ 3 ವರ್ಷದಿಂದ ಬೆಳೆದ ಅಡಿಕೆ ಬೆಳೆ ಒಣಗಲು ಆರಂಭವಾಗಿದೆ. ಭದ್ರನಾಲೆಯಿಂದ ನೀರು‌ಹರಿಸಿದಲ್ಲಿ ಜಾನುವಾರುಗಳು ಮತ್ತು ಸಸಿಗಳು ಬದುಕಲಿವೆ ಎಂದು ರೈತ ಪುರುಷೋತ್ತಮ್ ನೋವು ತೋಡಿಕೊಂಡಿದ್ದಾರೆ.

ಡಿಸೆಂಬರ್ ಅಂತ್ಯಕ್ಕೆ ಈ ಸ್ಥಿತಿ ಆದರೆ ಇನ್ನೂ ಬೇಸಿಗೆ ಸ್ಥಿತಿ ಏನು ಎಂಬುದು ಅವರ ಅಳಲಾಗಿದೆ. ಹೊಸದಾಗಿ ಅಡಿಕೆ ಸಸಿಗಳು ಒಣಗಿದರೆ ಸಸಿಗಳನ್ನ‌ಬೆಳೆಸಲು ಪಟ್ಟ ಶ್ರಮ‌ ನೀರಿನಲ್ಲಿ ಹೋಮ ಮಾಡಿದಂತಾಗುತ್ತದೆ ಎಂಬ ಆತಂಕ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ-https://suddilive.in/archives/5931

Related Articles

Leave a Reply

Your email address will not be published. Required fields are marked *

Back to top button