ಬಿಜೆಪಿ ಸತ್ಯಾಶೋಧನೆಯ ಸಮಿತಿಗೆ ಹಿಂದೂ ರಕ್ಷಣೆ ಬಗ್ಗೆ ಪ್ರಶ್ನೆ ಎದುರಾದಾಗ ಮಾಡಿದ್ದೇನು?

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗದ ರಾಗಿಗುಡ್ಡದ ಗಲಭೆ ವಿಚಾರದಲ್ಲಿ ಇಂದು ಸತ್ಯಶೋಧನ ಸಮಿತಿ ಸ್ಥಳಕ್ಕೆ ಭೇಟಿ ನೀಡಿ ನಾಲ್ಕನೇ ತಿರುವಿನಲ್ಲಿರುವ ನಾಗರಾಜ್ ಅವರ ಮನೆಯ ಮೇಲೆ ಸ್ಥಳೀಯರ ಜೊತೆ ಸಭೆ ನಡೆಸಿದ್ದಾರೆ. ಹಿಂದೂ ರಕ್ಷಣೆಯ ಬಗ್ಗೆ ಪುಂಖಾನುಪುಂಖ ಭಾಷಣ ನೀಡುವ ಈ ಸದಸ್ಯರು ಹಿಂದೂಗಳ ರಕ್ಷಣೆ ಬಗ್ಗೆ ಪ್ರಶ್ನೆ ಎದುರಾದಾಗ ಸಭೆಯನ್ನ ಮುಕ್ತಾಯಗೊಳಿಸಿದ್ಸಾರೆ.
ಸಭೆಯಲ್ಲಿ ಕೇಳಿ ಬಂದ ಹಿಂದೂಗಳಿಗೆ ರಕ್ಷಣೆ ಏನು ಎಂಬುದರ ಬಗ್ಗೆ ನಾಯಕರು ಮಾತನಾಡದೆ ಸಭೆ ಮುಗಿಸಿರುವುದು ಅಚ್ಚರಿ ಮೂಡಿಸಿದೆ. ಮಾಜಿ ಸಚಿವರಾದ ಈಶ್ವರಪ್ಪ, ಅಶ್ವಥ್ ನಾರಾಯಣ್, ಈಶ್ವರಪ್ಪ, ಆರಗ ಜ್ಞಾನೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಸಂಸದ ಬಿ.ವೈ ರಾಘವೇಂದ್ರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಹಿಂದೂ ಗಳ ರಕ್ಷಣೆ ಬಗ್ಗೆ ತುಟಿ ಬಿಚ್ಚಲಿಲ್ಲ.
ರಾಗಿಗುಡ್ಡದಲ್ಲಿ ದಂಗೆಯ ರೂಪದಲ್ಲಿ ದಾಳಿ ನಡೆದಿದೆ.ಮುಸ್ಲೀಂ ಮಹಿಳೆಯರು ನಮ್ಮಬಳಿ ಬಂದು ಸೊಂಟದ ಕೆಳಗಿನ ಮಾತು ಆಡುತ್ತಾರೆ. ನಾವು ಬದುಕುವುದಾದರೂ ಹೇಗೆ ಎಂಬ ಪ್ರಶ್ರಗೆ ಯಾವುದೇ ಉತ್ತರನೀಡದ ಸಮಿತಿ ಗಲಭೆಯಲ್ಲಿ ಗಾಯಾಳುಗಳಾಗಿದ್ದವರಿಗೆ ಚಿಕಿತ್ಶೆ ನೀಡಲಾಗುವುದು.
ಪೊಲೀಸರು ದೂರು ತೆಗೆದುಕೊಳ್ಳದಿದ್ದರೆ ದೂರು ಪಡೆಯುವಂತೆ ತಿಳಿಸುವುದಾಗಿ ಭರವಸೆ ನೀಡಿದ ಸಮಿತಿ 10-15 ನಿಮಿಷದಲ್ಲಿ ಸಭೆ ಮುಗಿಸಿದೆ. ಹಿಂದೂಗಳು ಹೇಡಿಗಳಲ್ಲ, ಹಿಂದೂಗಳು ಗದೆ ಹಿಡಿದುಕೊಂಡು ಬಂದರೆ ಹೇಗೆ? ಧೈರ್ಯವಾಗಿರಿ ಎಂಬುದಾಗಿ ಭರವಸೆ ನೀಡಿದ ಸಮಿತಿ ಹೇಗೆ ದೈರ್ಯವಾಗಿರುವುದು ಎಂಬುದರ ಬಗ್ಗೆ ಸಮಿತಿ ಹೇಳಲಿಲ್ಲ.
ಇದನ್ನೂ ಓದಿ-https://suddilive.in/archives/566
