ಸ್ಥಳೀಯ ಸುದ್ದಿಗಳು

ಬಿಜೆಪಿಯ ಬಹಿರಂಗ ಚರ್ಚೆಯ ಆಹ್ವಾನಕ್ಕೆ ಸಚಿವರ ಪ್ರತಿಕ್ರಿಯೆ ಏನು ಗೊತ್ತಾ?

ಸುದ್ದಿಲೈವ್/ತೀರ್ಥಹಳ್ಳಿ

ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್ ಅವರ ಬಹಿರಂಗ ಚರ್ಚೆಗೆ ಆಹ್ವಾನವನ್ನ ಖಙಡ ತುಂಡವಾಗಿ ಜಿಲ್ಲಾ ಉಸ್ತುವಾರಿ ಹಾಗೂ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿರಸ್ಕರಿಸಿದ್ದಾರೆ.

ಅವರು ಕುಪ್ಪಳ್ಳಿಯಲ್ಲಿ ಮಾಧ್ಯಮಗಳಿಗೆ ಮಾತನಾಡಿ, ಶುಗರ್ ಫ್ಯಾಕ್ಟರಿಯ ಜಾಗದಲ್ಲಿ ರೈತರನ್ನ ಹಾಗೂ ಸಾರ್ವಜನಿಕರ ವಸತಿ ನಿಲಯವನ್ನ‌ಒಕ್ಕಲೆಬ್ಬಿಸದಂತೆ  ಬಿಜೆಪಿ ಪ್ರತಿಭಟನೆ ನಡೆಸಿತ್ತು. ಈ ಪ್ರತಿಭಟನೆಯ ವೇಳೆ ಸಙಸದ ರಾಘವೇಂದ್ರ ಮತ್ತು ಬಿಜೆಪಿ ಜಿಲ್ಲಾಧ್ಯಕ್ಷರು ಸಚಿವ ಮಧು ಬಂಗಾರಪ್ಪನವರ ವಿರುದ್ಧ ಮಾತನಾಡಿದ್ದಾರೆ ಎಂಬ ಕಾರಣಕ್ಕೆ ಸಚಿವರು ಮಾಧ್ಯಮದಲ್ಲಿ ಗರಂ ಆಗಿದ್ದರು.

ಗರಂ ಆದ ಮರುದಿನ ಬಿಜೆಪಿ ಜಿಲ್ಲಾಧ್ಯಕ್ಷ  ಟಿ.ಡಿ.ಮೇಘರಾಜ್ ಸಚಿವರು ಬಯಸಿದ್ದಲ್ಲಿ ಬಹಿರಂಗ ಚರ್ಚೆಗೆ ಸಿದ್ದ ಎಂದು ಆಹ್ವಾನಿಸಿದ್ದರು. ಇಂದು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಸಚಿವ ಮಧು ಬಂಗಾರಪ್ಪ ಸೋತಿರುವವರ ಜೊತೆ ಬಹಿರಂಗ ಚರ್ಚೆಗೆ ಹೋಗಲು ನನಗೆ ಏನು ತಲೆಕೆಟ್ಟಿಲ್ಲ ಎಂದು ಖಡಕ್ ಉತ್ತರ ನೀಡಿದ್ದಾರೆ.

ಬಿಜೆಪಿಯವರಿಗೆ ಮಾಡಲು ಕೆಲಸವಿಲ್ಲ ಅವರ ಭಾಷಣಕ್ಕೆ ಉತ್ತರಕೊಡೋಕೆ ಆಗುತ್ತಾ? ಇದೇ ಬಹಿರಂಗ ಚರ್ಚೆನಾ ಅಧಿಕಾರವಿದ್ದಾಗ ಅವರ ಸಂಸದರ ಜೊತೆ ಶಾಸಕರ ಜೊತೆ ಬಹಿರಂಗ ಚರ್ಚೆ ಯಾಕೆ ಮಾಡಲಿಲ್ಲ ಇವನು ಎಂದು ಏಕವಚನದಲ್ಲಿ ಗುಡುಗಿದ್ದಾರೆ. ಅಧಿಕಾರ ನಮ್ಮ ಕೈಯಲಿದೆ ನಾವು ಒಳ್ಳೆಯ ಕೆಲಸ ಮಾಡ್ತೀವಿ ಎಂದು ಹೇಳುವ ಮೂಲಕ ಬಿಜೆಪಿ ಬಹಿರಂಗ ಚಿತ್ರ ್ಚೆಯನ್ನ ತಿರಸ್ಕರಿಸಿದ್ದಾರೆ.

ನಾನು ಜೀವನದಲ್ಲಿ ಮೊದಲಬಾರಿಗೆ ಕುಪ್ಪಳ್ಳಿಗೆ ಬಂದಿರುವೆ. ಕುವೆಂಪು ಅವರು ಜನರ ಹೃದಯದಲ್ಲಿ ಖಾಯಂ ಆಗಿ ನೆಲೆಸಿದ್ದಾರೆ. ಕುವೆಂಪು ಪ್ರತಿಷ್ಠಾನದ ಎಲ್ಲಾ ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡಿದರು.

ಇವತ್ತು ಅಥವಾ‌ನಾಳೆಯ ಒಳಗೆ ಶಾಲಾ ಶೌಚಾಲು ಶುಚಿ ವಿಚಾರದ ಬಗ್ಗೆ ಕಠಿಣ ಕ್ರಮ ತೆಗೆದುಕೊಳ್ಳಲು ಗೈಡ್ ಲೈನ್ಸ್ ಹೊರ ಬೀಳಲಿದೆ.  ಎಸ್ ಡಿ ಎಂಸಿ ಯವರು ಶಾಲೆಗೆ ಭೇಟಿ ಕೊಟ್ಟು ಶಾಲಾ ಮಕ್ಕಳ ಬಗ್ಗೆ ಗಮನ ಹರಿಸಬೇಕಾಗುತ್ತದೆ. ನನ್ನ ಇಲಾಖೆಯಲ್ಲಿ‌ಇನ್ನು‌ಮುಂದೆ ಮಕ್ಕಳ ಕೈಯಲ್ಲಿ ಶೌಚ ಶುಚಿ ಮಾಡಿಸಿದರೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು.

ಮಕ್ಕಳ ಕೈಯಲ್ಲಿ ಓದುವುದನ್ನ ಬಿಟ್ಟು ನೇರೆ ಏನೂ ಮಾಡಿಸದಂತೆ ಕ್ರಮ‌ಕೈಗೊಳ್ಳಲಾಗುವುದು. ಗ್ರಾಪಂ ನಲ್ಲಿ ಪೌರಕಾರ್ಮಿಕ ಬಳಕೆ ಮಾಡುವ ಬಗ್ಗೆ ಪ್ರತಿಕ್ರಿಯಿಸಿದ ಅವರು ಗ್ರಾಪಂ ಜವಬ್ದಾರಿ ತೆಗೆದುಕೊಂಡು ಕಾರ್ಮಿಕರನ್ನ‌ನೇಮಿಸಿ ಎಸ್ ಡಿ ಎಂ ಸಿಯಿಂದಲೂ ಕೆಲಸ ಮಾಡಲಾಗುವುದು ಎಂದು ತಿಳಿಸಿದರು.

ಡಿಸಿಎಂರನ್ನ ಮೂವರನ್ನ‌ನೇಮಿಸಬೇಕೆಂಬ ಸಚಿವ ಸತೀಶ್ ಜಾರಕಿಹೊಳೆಯವರ ಹೇಳಿಕೆಗೆ ನಿರಾಕರಿಸಿದ ಸಚಿವ‌ಮಧು ಬಂಗಾರಪ್ಪ ಮೂರು ಡಿಸಿಎಂ ನೇಮಿಸುವುದು ಹೈಕಮ್ಯಾಂಡ್ ಗೆ ಬಿಟ್ಟಿದ್ದು, ಮಾಧ್ಯಮದವರು ತಲೆಕೆಡೆಸಿಕೊಳ್ಳುವ ಅವಶ್ಯಕತೆ ಇಲ್ಲ. ಮೂರು ಡಿಸಿಎಂ ನೇಮಕದ ಬೇಡಿಕೆ ಕ್ರಿಮಿನಲ್ ಆಕ್ಟಿವಿಟಿ ಅಲ್ಲ ಎಂದು ಹೇಳಿದರು.

Related Articles

Leave a Reply

Your email address will not be published. Required fields are marked *

Back to top button