ರಾಜಕೀಯ ಸುದ್ದಿಗಳು

ಅಧಿವೇಶನದ ಬಗ್ಗೆ ಅಸಮಾಧಾನ ಹೊರಹಾಕಿದ ಬಸವರಾಜ್ ಹೊರಟ್ಟಿ

ಸುದ್ದಿಲೈವ್/ಸೊರಬ

ವಿಧಾನ ಪರಿಷತ್ ನ ಸಭಾಪತಿ ಬಸವರಾಜ ಹೊರಟ್ಟಿ ಅಸಮಾಧಾನವನ್ನ ಹೊರ ಹಾಕಿದ್ದಾರೆ. ವಿಧಾನ ಪರಿಷತ್ ನಲ್ಲಿ ನಡೆಯುತ್ತಿರುವ ಅಧಿವೇಶನದ ಬಗ್ಗೆ ರಾಜೀನಾಮೆ ನೀಡಿ ಹೋಗುವಷ್ಟು ಬೇಸರವಾಗಿದೆ ಎಂದು ಹೇಳಿದ್ದಾರೆ.

ಮಾಜಿ ಮುಖ್ಯಮಂತ್ರಿ ದಿವಂಗತ ಬಂಗಾರಪ್ಪ ಅವರ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಹೊರಟ್ಟಿ ಮೊದಲು ಮಾಧ್ಯಮಗಳೊಂದಿಗೆ ಮಾತನಾಡಿ, ಅಧಿವೇಶನ ಅರ್ಥ ಕಳೆದುಕೊಳ್ಳುತ್ತಿದೆ. ಈ ಹಿಂದೆ ಅಧಿವೇಶನ ಚನ್ನಾಗಿ ನಡೆಯುತಿತ್ತು ಎಂದು ಹೇಳಿದ್ದಾರೆ.

ಹಿಂದಿನ ಯಾವುದೇ ಅಧಿವೇಶನದಲ್ಲಿ ಸಭಾಪತಿ ಖುರ್ಚಿಗೆ ಗೌರವ ಇರುತಿತ್ತು. ಆದರೆ ಈಗ ಸಭಾಪತಿ ಖುರ್ಚಿಗೆ ಗೌರವ ಇಲ್ಲ. ಶಾಸನ ಸಭೆಗಳು ವಿಷಯಾಧಾರಿತವಾಗಿ ನಡೆಯುತ್ತಿಲ್ಲ. ಇವರು ಅವರನ್ನು ಬೈಯುವುದು, ಅವರು ಇವರನ್ನು ಬೈಯುವುದೇ ಆಗ್ತಿದೆ. ಬರುತ್ತಾ ಬರುತ್ತಾ ಕಳಪೆ ಆಗ್ತಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.

ನಾನು ಸರಿಪಡಿಸಲು  ಬಹಳ‌ ಪ್ರಯತ್ನ ಮಾಡಿದ್ದೇನೆ. ಆ ಪ್ರಯತ್ನ ಫಲಕಾರಿಯಾಗಿಲ್ಲ. ಈ ಬಗ್ಗೆ ನನಗು ಬೇಸರ ಇದೆ. ರಾಜೀನಾಮೆ ಕೊಟ್ಟು ಹೋಗೋದು ಒಳ್ಳೆಯದು ಅಂತಾ ಒಂದು ಸರಿ ಹೇಳಿದ್ದೆ. ಹೊಸ ಶಾಸಕರಿಗೆ ಕಾರ್ಯಾಗಾರ ಅವಶ್ಯಕತೆ ‌ಇದೆ ಎಂದರು.

ಯಾವುದೇ ಕಾರ್ಯಾಗಾರ ಮಾಡಿದರೂ ಬದಲಾವಣೆ ಕಾಣಿಸುತ್ತಿಲ್ಲ. ವ್ಯವಸ್ಥೆ ಆಳಾಗಿ ಹೋಗಿದೆ. ವಿಧಾನ ಪರಿಷತ್ ನಲ್ಲಿ‌ ಖಾದ್ರಿ ಶಾಮಣ್ಣ, ಮಲ್ಲಿಕಾರ್ಜುನ ಮನ್ಸೂರು ಅಂತಹ ದೊಡ್ಡ ದೊಡ್ಡ ನಾಯಕರು ಇರುತ್ತಿದ್ದರು. ಚುನಾವಣೆಯಲ್ಲಿ ಸೋತ ಎಂಪಿ‌, ಎಂಎಲ್ ಎ, ದೊಡ್ಡ ದೊಡ್ಡ ರಾಜಕಾರಣಿಗಳ ಜೊತೆ ಅಡ್ಡಾಡುವವರು ಪರಿಷತ್ ಗೆ ಬರುತ್ತಿದ್ದಾರೆ ಬರುತ್ತಿದ್ದಾರೆ ಎಂದರು.

ಸುಧಾರಣೆ ಆಗುವ ಲಕ್ಷಣ ಕಂಡಿಲ್ಲ, ಪ್ರಯತ್ನ ಮಾಡ್ತೇವೆ. ಬೆಳಗಾವಿ ಅಧಿವೇಶನ ವಿಸ್ತರಣೆ ಮಾಡಬೇಕು ಅಂತಾ ಬಹಳ ಮಂದಿ ಕೇಳಿದರು. ಅಧಿವೇಶನ ವಿಸ್ತರಣೆ ಮಾಡಲು ಸಾಧ್ಯವಾಗಿಲ್ಲವೆಂದು ಅಸಮಾಧಾನ ಹೊರ ಹಾಕಿದರು.

ಇದನ್ನೂ ಓದಿ-https://suddilive.in/archives/5511

Related Articles

Leave a Reply

Your email address will not be published. Required fields are marked *

Back to top button