ರಾಜಕೀಯ ಸುದ್ದಿಗಳು

ಮೈತ್ರಿ ಪಕ್ಷದ ಗೂಂಡಾ ವರ್ತನೆ ಖಂಡಿಸಿ ಕಾಂಗ್ರೆಸ್ ಭರ್ಜರಿ ಪ್ರತಿಭಟನೆ

ಸುದ್ದಿಲೈವ್/ಭದ್ರಾವತಿ

ಭದ್ರಾವತಿಯ ಕಾಚಗೊಂಡನ ಹಳ್ಳಿಯಲ್ಲಿ ನಡೆದ ಒಂದು ಸಣ್ಣ ಘಟನೆ ಹೊಸಮನೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾದ ಪ್ರಕರಣ ಈಗ ಪರ ಮತ್ತು ವಿರೋಧಕ್ಕೆ ಕಾರಣವಾಗಿದೆ.

ಭದ್ರಾವತಿಯ ಕಾಚಗೊಂಡನ ಹಳ್ಳಿಯಲ್ಲಿ ನಡೆದ ಪ್ರಕರಣ ಹೊಸಮನೆ ಪೊಲೀಸ್ ಠಾಣೆಯಲ್ಲಿ  ಮಾಜಿ ಶಿಮೂಲ್ ಅಧ್ಯಕ್ಷ ಆನಂದ್ ಮತ್ತು ಚಂದ್ರಶೇಖರ್ ಡಿ ಅವರ ಮೇಲೆ 307 ಪ್ರಕರಣ ದಾಖಲಾತಿಗೆ ಕಾರಣವಾಗಿತ್ತು.‌ ಈ ಪ್ರಕರಣವನ್ನ ವಿರೋಧಿಸಿ ನಿನ್ನೆ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ಜಂಟಿ ಪ್ರತಿಭಟನೆಗೂ ಕಾರಣವಾಗಿತ್ತು.

ಆದರೆ ಇಂದು ತಾಲೂಕ ಕಚೇರಿಯ ಮುಂದೆ ಭದ್ರಾವತಿ ನಗರ  ಮತ್ತು ಗ್ರಾಮಾಂತರ ಕಾಂಗ್ರೆಸ್ ಸಮಿತಿ ಬಿಜೆಪಿ-ಜೆಡಿಎಸ್ ಪಕ್ಷಗಳ ಗೂಂಡಾವರ್ತನೆಯನ್ನ ಖಂಡಿಸಿ ಪ್ರತಿಭಟನೆ ನಡೆಸಿದ್ದಾರೆ.

ಕಾಚಗೊಂಡನ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಚುನಾವಣೆ ನಡೆಸುವ ಸಂಬಂಧ ನಾಮಿನೇಷನ್ ಪ್ರಕ್ರಿಯೆ ನಡೆದಿದೆ. ಬಿಸಿಎಂ ವರ್ಗದ ವೈರಮುಡಿ ಎಂಬುವರು ಅಭ್ಯರ್ಥಿಯಾಗಿದ್ದು ನಾಮಿನೇಷನ್ ಪರಿಶೀಲನೆ ನಡೆಸಿ ಅಭ್ಯರ್ಥಿಗಳ ಸೂಚಕರ ಪರವಾಗಿ ಹಾಕಿದ  ಸಹಿ ವಿಚಾರದಲ್ಲಿ ಮಾತಿನ ಚಕಮಕಿ ನಡೆದು ನಂತರ ಪೊಲೀಸ್ ಠಾಣೆಯಲ್ಲಿ 307 ಪ್ರಕರಣ ದಾಖಲಾಗಿದೆ.

ಈ ಪ್ರಕರಣವನ್ನ ಖಂಡಿಸಿ ನಿನ್ನೆ ಬಿಜೆಪಿ-ಜೆಡಿಎಸ್ ಹೊನೆ ಪೊಲೀಸ್ ಠಾಣೆಯಲ್ಲಿ ಪ್ರತಿಭಟನೆ ನಡೆಸಿತ್ತು. ಇಂದು ತಾಲೂಕ ಕಚೇರಿಯಲ್ಲಿ ಕಾಂಗ್ರೆಸ್ ಗೂಂಡಾವರ್ತನೆಯನ್ನ‌ಖಂಡಿಸಿ ಪ್ರತಿಭಟಿಸಿದೆ. ಮಾಜಿ ಸಂಸದ ಆಯನೂರು‌ ಮಂಜುನಾಥ್ ಸಹ ಭಾಗಿಯಾಗಿ ಬಿಜೆಪಿ-ಜೆಡಿಎಸ್ ಪಕ್ಷ ಬರ ಬಂದಿರುವ ಈ ಸಮಯದಲ್ಲಿ ಸಣ್ಣಪುಟ್ಟ ಗಲಭೆಯನ್ನ ಹಿಡಿದು ಪ್ರತಿಭಟಿಸಿ ಜನರ ಮುಂದೆ ಸಣ್ಣವರಾಗಿದ್ದಾರೆ ಎಂದು ದೂರಿದ್ದಾರೆ.

ಒಟ್ಟಿನಲ್ಲಿ 307 ಪ್ರಕರಣ ಮೂರು ಪಕ್ಷಗಳ ನಡುವೆ ರಾಜಕೀಯ ಬಣ್ಣ ಪಡೆದುಕೊಂಡಿದೆ. ಗುರುವಾರ ಮೈತ್ರಿ ಪಕ್ಷ ಏಮು ಮಾಡಲಿದೆ ಎಂದು ಕಾದು ನೋಡಬೇಕಿದೆ.

Related Articles

Leave a Reply

Your email address will not be published. Required fields are marked *

Back to top button