ಸ್ಥಳೀಯ ಸುದ್ದಿಗಳು

ಜಿಲ್ಲೆಯಲ್ಲಿ ಕೆಎಫ್ ಡಿ ಕಾಯಿಲೆ ಪತ್ತೆಯಾಗಿಲ್ಲ.

ಸುದ್ದಿಲೈವ್/ಶಿವಮೊಗ್ಗ

ಮಂಗನ ಕಾಯಿಲೆ ಕುರಿತಂತೆ ಆರೋಗ್ಯ ಇಲಾಖೆ ಪ್ರಕಟಣೆ ಹೊರಡಿಸಿದೆ. ಎರಡು ದಿನಗಳ ಹಿಂದೆ 11 ಜನರಲ್ಲಿ ಕೆಎಫ್ ಡಿ ಪಾಸಿಟಿವ್ ಕಾಣಿಸಿಕೊಡಿತ್ತು. ಇಂದು ಶಿವಮೊಗ್ಗ ಜಿಲ್ಲೆಯಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ.

ಆದರೆ 11 ಜಿಲ್ಲೆಯಲ್ಲಿ ಈ ಕೆಎಫ್ ಡಿ ಕಾಣಿಸಿಕೊಳ್ಳುತ್ತಿದ್ದು 11ರಲ್ಲಿ ಇವತ್ತು ಎರಡು ಜಿಲ್ಲೆಗಳಲ್ಲಿ ಕೆಎಫ್ ಡಿ ಪಾಸಿಟಿವ್ ಕಾಣಿಸಿಕೊಂಡಿದೆ. ಚಿಕ್ಕಮಗಳೂರಿನಲ್ಲಿ ಇಬ್ಬರಲ್ಲಿ ಮತ್ತು ಶಿರಸಿ ಜಿಲ್ಲೆಯಲ್ಲಿ ಒಂದು ಪ್ರಕರಣ ಕಾಣಿಸಿಕೊಂಡಿದೆ.

ಇಂದು 154 ಜನರಲ್ಲಿ ಕೆಎಫ್ ಡಿ ಪರೀಕ್ಷೆಗೆ ಒಳಪಡಿಸಲಾಗಿದೆ. ಇದರಲ್ಲಿ 111 ಜನರು ಶಿವಮೊಗ್ಗದ ಜನರಿದ್ದರೂ ಯಾರಿಗೂ ಸೋಂಕು ಪತ್ತೆಯಾಗಿಲ್ಲ. ಶಿರಸಿ ಜಿಲ್ಲೆಯಲ್ಲಿ 33 ಜನರಿಗೆ ಪರೀಕ್ಷೆಗೆ ಒಳಪಡಿಸಲಾಗಿದೆ. 33 ಜನರಲ್ಲಿ 1 ರಿಗೆ ಪಾಸಿಟಿವ್ ಕಾಣಿಸಿಕೊಂಡಿದೆ.

ಚಿಕ್ಕಮಗಳೂರಿನಲ್ಲಿ 8 ಜನರನ್ನ ಪರೀಕ್ಷೆಗೆ ಒಳಪಡಿಸಲಾಗಿದೆ. ಇದರಲ್ಲಿ ಇಬ್ಬರಲ್ಲಿ ಸೋಂಕು ಪತ್ತೆಯಾಗಿದೆ. ಜನವರಿ 1, 2024 ರಿಂದ ಇವತ್ತಿನ ವರೆಗೆ 2567 ಜನರನ್ನ ಕೆಎಫ್ ಡಿ ಪರೀಕ್ಷೆಗೆ ಒಳಪಡಿಸಲಾಗಿದೆ. 68 ಜನರಲ್ಲಿ ಸೋಂಕು ಪ್ತೆಯಾಗಿದೆ. 41 ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ. ಇದರಲ್ಲಿ ಎರಡು ಸಾವಾಗಿದೆ. ಒಟ್ಟು 25 ಜನರಲ್ಲಿ ಸೋಂಕು ಇದೆ.

ಇದನ್ನೂ ಓದಿ-https://suddilive.in/archives/8541

Related Articles

Leave a Reply

Your email address will not be published. Required fields are marked *

Back to top button