ರಾಜ್ಯ ಸುದ್ದಿಗಳು

ಭರವಸೆ ಮೂಡಿಸಿದ ಜಿಲ್ಲಾಧಿಕಾರಿಗಳ ಮೆಗ್ಗಾನ್ ಭೇಟಿ

ಸುದ್ದಿಲೈವ್/ಶಿವಮೊಗ್ಗ

ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಇಂದು ಮೆಗ್ಗಾನ್ ಬೋಧನಾ ಜಿಲ್ಲಾಸ್ಪತ್ರೆಗೆ ದಿಢೀರ್ ಭೇಟಿ ನೀಡಿ ಆಸ್ಪತ್ರೆಯ ವಿವಿಧ ವಿಭಾಗಗಳು ಮತ್ತು ವಾರ್ಡುಗಳಿಗೆ ಭೇಟಿ ನೀಡಿ, ಪರಿಶೀಲಿಸಿದರು. ಇವರ ದಿಡೀರ್ ಭೇಟಿಯಿಂದ ಮೆಗ್ಗಾನ್ ನಲ್ಲಿ ಸಂಚಲನ ಮೂಡಿಸಿದೆ.

ರಕ್ತನಿಧಿಯ ರಕ್ತ ಶೇಖರಣಾ, ರಕ್ತ ವಿಭಜನಾ ಘಟಕ, ಸೀರಮ್ ಪರೀಕ್ಷಾ ಕೊಠಡಿ, ಫ್ಲೆಬೊಟಮಿ ವಿಭಾಗ, ರಕ್ತ ಸಂಬಂಧಿತ ಖಾಯಿಲೆಗಳ ಹಗಲು ಆರೈಕೆ ಕೇಂದ್ರ, ಐಸಿಸಿಯು ಘಟಕ, ಓಬಿಜಿ ವಿಭಾಗ, ಎನ್‍ಐಸಿಯು, ತಾಯಿ ಎದೆಹಾಲು ಶೇಖರಣಾ ಕೇಂದ್ರ ‘ಅಮೃತಧಾರೆ’, ಶಸ್ತ್ರಚಿಕಿತ್ಸೆ ಕೊಠಡಿ, ಇತರೆ ವಿಭಾಗಗಳಿಗೆ ತೆರಳಿ ವೀಕ್ಷಣೆ ಮಾಡಿದ್ದಾರೆ.

ಸಿಮ್ಸ್ ನಿರ್ದೇಶಕರಾದ ಡಾ.ವಿರೂಪಾಕ್ಷಪ್ಪ, ಮೆಗ್ಗಾನ್ ಬೋಧನಾ ಜಿಲ್ಲಾಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ತಿಮ್ಮಪ್ಪ ಶಸ್ತ್ರಚಿಕಿತ್ಸಕ ಡಾ.ಸಿದ್ದನಗೌಡ ಪಾಟೀಲ್, ಇತರೆ ವೈದ್ಯರು ಮತ್ತು ಸಿಬ್ಬಂದಿಗಳೊಂದಿಗೆ ಆಸ್ಪತ್ರೆ ಸೇವೆಗಳ ಕುರಿತು ಪರಿಶೀಲನೆ ನಡೆಸಿ, ಸಲಹೆ ಸೂಚನೆಗಳನ್ನು ನೀಡಿದರು.

ನಂತರ ಹೊಸದಾಗಿ ನಿರ್ಮಾಣ ವಾಗುತ್ತಿರುವ ಕ್ಯಾನ್ಸರ್ ಆಸ್ಪತ್ರೆಯ ನಿರ್ಮಾಣ ಕಾಮಗಾರಿಯ ಪರಿಶೀಲನೆ ನಡೆಸಿದರು.  ಈ ಕುರಿತು ಸುದ್ದಿಲೈವ್ ನೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿಗಳು, ಮುಮದಿನ ದಿನಗಳಲ್ಲಿ ಉತ್ತಮ ಸೇವೆ ನೀಡುವ ಭರವಸೆ ನೀಡಿದ್ದಾರೆ. ಸುತ್ತಮುತ್ತಲಿನ ಊರುಗಳಿಗೆ ಮೆಗ್ಗಾನ್ ಉತ್ತಮ ಆಸ್ಪತ್ರೆಯಾಗಿದೆ. ಇದನ್ನ ಇನ್ನೂ ಉತ್ತಮ ಪಡಿಸುವ ಭರವಸೆ ನೀಡಿದರು.

ಮೆಗ್ಗಾನ್ ಹೆರಿಗೆ ವಿಬಾಗದಲ್ಲಿ ಉತ್ತಮ ಸಾಧನೆಯಾಗಿರುವ ಬಗ್ಗೆ ಕೇಳಿ ಬಂದಿದೆ.  ಕಳೆದ ವರ್ಷ 10 ಸಾವಿರ ಹೆರಿಗೆಯಲ್ಲಿ  ಕೇವಲ 9 ಸಾವು ಕಂಡು ಬಂದಿದೆ. ಅಲ್ಲದೆ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಎರಡು ಮನೆಗಳು ಇನ್ನೂ ನೆಲೆ ಊರಿದ್ದು ಅವರಿಗೆ ಆದಷ್ಟು ಬೇಗ ಜಾಗ ಗುರುತಿಸಿಕೊಡುವುದಾಗಿ ಭರವಸೆ ನೀಡಿದ್ದಾರೆ. ಆದರೆ ದಿಡೀರ್ ಭೇಟಿ ಜನರಿಗೆ ಹೆಚ್ಚಿನ ಭರವಸೆ ಮೂಡಿಸಿವೆ.

ಹಲವು ನೆಗೆಟಿವ್ ವಿಷಯಗಳು ಮೆಗ್ಗಾನ್ ನಲ್ಲಿ ಇರೋದು ನಿಜ. ಆದರೆ ಮೊದಲನೆ ಭಾರಿಗೆ ಡಿಸಿಗಳು ಭೇಟಿ ನೀಡಿರೋದರಿಂದ ಈ ಭೇಟಿಯ ವೇಳೆ ನೆಗೆಟಿವ್ ವಿಷಯಗಳನ್ನ ಪಕ್ಕಕ್ಕೆ ಇಟ್ಟು ಮಾತನಾಡುವ ಅವಶ್ಯಕತೆ ಇದೆ. ಈ ಹಿಂದೆ ಡಿಸಿ ಧನಂಜಯ್ ಜಿಲ್ಲಾಧಿಕಾರಿಯಾಗಿ ಶಿವಮೊಗ್ಗಕ್ಕೆ ಬಂದ ತಕ್ಷಣ ಮೆಗ್ಗಾನ್ ಗೆ ಭೇಟಿ ನೀಡಿದ್ದರು. ಅದರಂತೆ ಈಗಿನ ನೂತನ ಡಿಸಿಗಳು ಭೇಟಿ ನೀಡಿದ್ದಾರೆ.

ಇದನ್ನೂ ಓದಿ-https://suddilive.in/archives/8533

Related Articles

Leave a Reply

Your email address will not be published. Required fields are marked *

Back to top button