ಕ್ರೈಂ ನ್ಯೂಸ್

ಮೆಡಿಕಲ್ ಶಾಪ್ ನಲ್ಲಿದ್ದ ವ್ಯಕ್ತಿಯಿಂದ ವಂಚನೆಯ ಆರೋಪ

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗದ ಪ್ರತಿಷ್ಠಿತ ಆಸ್ಪತ್ರೆಯ ಮೆಡಿಕಲ್ ಶಾಪ್ ನಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯಿಂದ 5 ಲಕ್ಷಕ್ಕೂ ಹೆಚ್ಚು ಹಣ ದುರುಪಯೋಗವಾಗಿದೆ ಎಂದು ಆಸ್ಪತ್ರೆಯ ವೈದ್ಯರೊಬ್ವರು ದೂರು ದಾಖಲಿಸಿದ್ದಾರೆ.

ಶಿವಮೊಗ್ಗ ನಗರದ ಕುವೆಂಪು ರಸ್ತೆಯಲ್ಲಿರುವ ಆದರ್ಶ ಸೂಪರ್ ಸ್ಪೆಷಾಲಿಟಿ ಕಣ್ಣಿನ  ಆಸ್ಪತ್ರೆಯಲ್ಲಿಯೇ ಫಾರ್ಮಸಿ ಸಹ ಇರುತ್ತದೆ.ಆದರ್ಶ ಕಣ್ಣಿನ ಆಸ್ಪತ್ರೆಯಲ್ಲಿರುವ ಫಾರ್ಮಸಿಯ ಬಿಲ್ಲಿಂಗ್ ಗೆ ಬೇರೆ ಕಡೆ ವಿಭಾಗದಲ್ಲಿ ಕೆಲಸಮಾಡಿ ಅನುಭವಳ್ಳವರನ್ನು ಆಯ್ಕೆ ಮಾಡಲಾಗಿದ್ದು, ಇದರಲ್ಲಿ ಕಾರ್ತಕ್ ಎಂಬಾತನನ್ನ ಜೂನ್ ನಲ್ಲಿ ನೇಮಕ ಮಾಡಲಾಗಿತ್ತು.  .

ಆಸ್ಪತ್ರೆಯ ಫಾರ್ಮಸಿಗರ ಬಿಲ್ಲಿಂಗ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಕಾರ್ತಿಕ್ ರವರು ಪ್ರತಿದಿನ ವ್ಯಾಪಾರದ ಹಣವನ್ನು ಲೆಕ್ಚರ್ ನಲ್ಲಿ ಬರೆದುಕೊಡುತ್ತಿದ್ದು ನಂತರದ ದಿನಗಳಲ್ಲಿ ವೈದ್ಯ ಮೇಘರಾಜ್ ಗೆ ನೀಡುತ್ತಿದ್ದ ಹಣವು ಕಡಿಮೆಯಾಗುತ್ತಿದ್ದು ಪಿರ್ಯಾದಿದಾರರು ಅನುಮಾನದ ಮೇರೆಗೆ 2023 ನೇ ನವೆಂಬರ್ ನಲ್ಲಿ ಫಾರ್ಮಸಿಗರ ತರಿಸಿದ್ದ ಔಷಧಿಗಳ ಹಾಗೂ ಮಾರಾಟ ಮಾಡಿದ ಔಷದಿಗಳ ಬಿಲಿನಲ್ಲಿ ಪರಿಶೀಲಿಸಿ ನೋಡಿದಾಗ ಸುಮಾರು 5.37.486/- ರೂಗಳು ವ್ಯತ್ಯಾಸ ಕಂಡುಬಂದಿತ್ತು.

ಬಿಲ್ಲಿಂಗ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಕಾರ್ತಿಕ್ ನನ್ನು ವಿಚಾರಿಸಿದಾಗ  ಕೆಲವು ಔಷಧಿಗಳನ್ನು ಬಿಲ್ ಮಾಡದೆ ರೋಗಿಗಳಿಗೆ ಕೊಟ್ಟಿರುವುದಾಗಿ ಹಾಗೂ ನಾನು ಆ ಹಣವನ್ನು ಸ್ವಂತಕ್ಕೆ ಉಪಯೋಗಿಸಿಕೊಂಡಿರುತ್ತೇನೆ. ವ್ಯತ್ಯಾಸವಾದ ಹಣವನ್ನು ಕೊಡುತ್ತೇನೆ ಎಂದು ಒಪ್ಪಿಕೊಂಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

ಈ ಬಗ್ಗೆ ಆಡಿಯೋ ಹಾಗೂ ವಿಡಿಯೋ ಸಹ ಇದೆ ಎಂದು ತಿಳಿಸಿರುವ ವೈದ್ಯರು, ನಂತರ ದಿನಾಂಕ:- 15/11/2023 ರಂದು  ಕಾರ್ತಿಕ್ ನನ್ನು ಕೆಲಸದಿಂದ ಬಿಡಿಸಲಾಗಿತ್ತು.  ನಂತರ ಕಾರ್ತಿಕ್ ನಿಗೆ  ಹಣವನ್ನು ಕೊಡು ಎಂದು ಕೇಳಿದರೆ ಏನಾದರೂ ಒಂದು ಕಾರಣ ನೀಡಿ ಕೊಡುತ್ತೇನೆ ಎಂದು ಹೇಳಿದ್ದು ಇಲ್ಲಿಯವರೆಗೆ ನೀಡಿಲ್ಲ.

ಕಾರ್ತಿಕನು ಬಿಲ್ ಮಾಡದೆ ಔಷಧಿ ಮಾರಾಟ ಮಾಡಿ ಹಣವನ್ನು ಉಪಯೋಗಿಸಿಕೊಂಡು ನಂಬಿಕೆ ದ್ರೋಹ ಮಾಡಿ ಮೋಸ ಮಾಡಿದ್ದು ಕಾರ್ತಿಕ್ ನ ಮೇಲೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ-https://suddilive.in/archives/4960

Related Articles

Leave a Reply

Your email address will not be published. Required fields are marked *

Back to top button