ಕ್ರೈಂ ನ್ಯೂಸ್

ನಡು ರಸ್ತೆಯಲ್ಲಿ ಪೆಟ್ರೋಲ್ ಸುರಿದು ವ್ಯಕ್ತಿಗೆ ಬೆಂಕಿ-ಕೊಲೆಯಾದ ಮಹೇಶಪ್ಪ

ಸುದ್ದಿಲೈವ್/ಶಿವಮೊಗ್ಗ

ಹುಟ್ಟಿನಿಂದಲೂ ಅಣ್ಣ ತಮ್ಮಂದಿರು ಬೆಳಿತ ಬೆಳಿತ ದಾಯಾದಿಗಳು ಎಂಬ ಮಾತಿಗೆ ಮಹಾಭಾರತ ಒಂದು ನಿದರ್ಶನವಾಗಿದೆ. ಪಾಂಡವರನ್ನ ಯುದ್ಧದಲ್ಲಿ ಸೋಲಿಸಿದ ಕೌರವರು ಜಿದ್ದಿನ ಜೀವನ ನಡೆಸಿ ಪಾಂಡವರಿಗೆ ಒಂದಿಂಚು ಜಮೀನು ಕೊಡಲು ಒಪ್ಪಲಿಲ್ಲ. ಇದರಿಂದ‌ಮಹಾಭರತವೇ ನಡೆದು ಹೋಯಿತು. ಇದೆಲ್ಲಾ ಪೌರಾಣಿಕ ಕಥೆಗಳಾಗಿವೆ.

ಆದರೆ‌ ಆಸ್ತಿಗಾಗಿ ಹೊಂಚು ಹಾಕಿ ಸಂಚು ಮಾಡಿ ದ್ವಿಚಕ್ರವಾಹನದಲ್ಲಿ ಬರುತ್ತಿದ್ದ ಚಿಕ್ಕಪ್ಪನನ್ನ  ಪೆಟ್ರೋಲ್ ಎರೆಚಿ ದೊಂದಿ ಮೂಲಕ ಬೆಂಕಿ ಹಚ್ಚಿ ಕ್ರೌರ್ಯ ಮೆರೆಯಲಾಗಿದೆ. ಇದು ಈಗಿನ ಸಮಾಜದ ಮನಸ್ಥಿತಿಯಾಗಿದೆ. ಆಸ್ತಿಗಾಗಿ ಅಣ್ಣ ಮತ್ತು ಆತನ ಮಗ ಚಿಕ್ಕಪ್ಪನನ್ನ ಕೊಲೆ ಮಾಡುವ ಮೂಲಕ ಇಡೀ ನಾಗರೀಕ ಸಮಾಜ ತಲೆತಗ್ಗಿಸುವಂತೆ ಮಾಡಿದೆ. ಇಡೀ ಗ್ರಾಮಸ್ಥರು ಆತಂಕ ಪಡುವ ಕೃತ್ಯಕ್ಕೆ ಕೈ ಹಾಕಿದ್ದಾರೆ.

ಜಮೀನಿನ ವಿಚಾರದಲ್ಲಿ ನಡೆಯುತ್ತಿದ್ದ ವ್ಯಾಜ್ಯ ಚಿಕ್ಕಪ್ಪ ಮಹೇಶಪ್ಪನ ಜೀವ ಕಸಿದುಕೊಂಡಿದೆ. ಬೆಳಿಗ್ಗೆ ಬೆಳಲಕಟ್ಟೆಯಿಂದ ಮತ್ತೋಡು ಮೂಲಕ ಬಿಕ್ಕೋನಹಳ್ಳಿಗೆ ದ್ವಿಚಕ್ರ ವಾಹನದಲ್ಲಿ ಹೊರಟಿದ್ದ ಮಹೇಶಪ್ಪರಿಗೆ ಪೆಟ್ರೋಲ್ ಸುರಿದು ಧಗ ಧಗನೇ ದಹಿಸಿದ್ದಾರೆ.

ಸುಟ್ಟ ಸ್ಥಿತಿಯಲ್ಲಿದ್ದರೂ ತನಗೆ ಬೆಂಕಿ ಹಚ್ಚಿದವರ ಹೆಸರು ಹೇಳಿ ಮಹೇಶಪ್ಪ ಸತ್ತಿರುವುದು ಈಗ ದಾಖಲಾತಿಯಾಗಿದೆ. ಈ ವಿಚಾರದಲ್ಲಿ ಕಾರ್ತಿಕ್ ಮತ್ತು ತಂದೆ ಕುಮಾರಪ್ಪ ಸೇರಿದಂತೆ ಹಲವಾರ ಹೆಸರು ಹೇಳಿ ಮಹೇಶಪ್ಪ ಸತ್ತಿದ್ದಾರೆ. ಕುಮಾರಪ್ಪ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿರಿಸಲಾಗಿದೆ.

ಮೂರು ಎಕರೆ ಜಮೀನಿಗಾಗಿ ಎರಡು ಕುಟುಂಬ ಬೀದಿಪಾಲಾಗಿದೆ. ಚಿಕ್ಕಪ್ಪ ಮಹೇಶಪ್ಪರನ್ನ ಧಗ ಧಗ ದಹಿಸಿದ್ದು ಬಿಟ್ಟರೆ ಕುಮಾರಪ್ಪನಿಗೆ ಸಿಕ್ಕಿದ್ದು ಜೈಲಿನ‌ ಕಂಬಿಗಳು.‌ ಪುತ್ರ ಕಾರ್ತಿಕ್ ಸಧ್ಯಕ್ಕೆ ಪೊಲೀಸರಿಂದ ಕಣ್ಣು ತಪ್ಪಿಸಿಕೊಂಡಿದ್ದಾನೆ. ಕಣ್ಣು ತಪ್ಪಿಸಿಕೊಂಡರೂ ಬಂಧನದ ಭೀತಿ ಎದುರಾಗೇ ಆಗಿರುತ್ತದೆ.

ಮಹೇಶಪ್ಪರಿಗೆ ಇನ್ನೇನು ಜಮೀನು ವಿಚಾರದಲ್ಲಿ ನ್ಯಾಯಾಲಯದಲ್ಲಿ ನ್ಯಾಯ ಸಿಗುತ್ತಿದೆ ಎಂದು ಮನಗೊಂಡ ಕುಮಾರಪ್ಪ ಊರಿನ ಆಚೆ ಆತನ ಮಗನೊಂದಿಗೆ ಕಾದಕುಳಿತು ಪೆಟ್ರೋಲ್ ಸುರಿದು ಕೊಲೆಗೈದಿದ್ದಾರೆ. ಮೂರಿಂಚಿನ‌ ಜಾಗಕ್ಕಾಗಿ ಹಿರಿಯ ಜೀವವನ್ನ‌ ಬಲಿ ಪಡೆಯಲಾಗಿದೆ. ಮಲೆನಾಡಿನಲ್ಲಿ ನಡೆದ ಈ‌ ಕೃತ್ಯ ಸಾಮಾನ್ಯನ‌ ನಿದ್ದೆಗೆಡೆಸಿದೆ.

ಇದನ್ನೂ ಓದಿ-https://suddilive.in/archives/4206

Related Articles

Leave a Reply

Your email address will not be published. Required fields are marked *

Back to top button