ಸ್ಥಳೀಯ ಸುದ್ದಿಗಳು

ಸಂಸದರಿಗೆ ‘ಡಿಚ್ಚಿ’ ಹೊಡುದ್ರಾ ಆಯನೂರು!

ಸುದ್ದಿಲೈವ್/ಶಿವಮೊಗ್ಗ

ಚುನಾವಣ ಹಿನ್ನೆಲೆಯಲ್ಲಿ ಯಾರು ಯಾರು ಬೇಕಾದರು ಡಿಚ್ಚಿಹೊಡೆಯಬಹುದು. ಬಿಎಸ್ ವೈ ಗರಡಿಯಲ್ಲಿಯೇ ಬೆಳೆದ ಮಾಜಿ ಶಾಸಕ  ಆಯನೂರು ಮಂಜುನಾಥ್ ಅವರ ಪುತ್ರ ಹಾಗೂ ಸಂಸದರಿಗೆ ರಾಜಕೀಯವಾಗಿ ಎಚ್ಚರಿಕೆ ನೀಡಿದ್ದಾರೆ.ಚುನಾವಣೆ ಹಿನ್ನಲೆಯಲ್ಲಿ ಯಾರು ಹೇಗೆ ಸ್ವೀಕರಿಸುತ್ತಾರೆ ಕಾದು ನೋಡಬೇಕಿದೆ.

ಅದರಂತೆ ಇಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್,  ಶಿವಮೊಗ್ಗ ಜಿಲ್ಲೆಯಲ್ಲಿ ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆ ಇದೆ. ಸುಪ್ರೀಂ ಕೋರ್ಟ್ ನಲ್ಲಿ ಸಹ ಪ್ರಕರಣ ನಡೆಯುತ್ತಿದೆ. ಅದರ ಬಗ್ಗೆ ಗಂಭೀರ ಪ್ರಯತ್ನ ಮಾಡಬೇಕಿರೋದು ಕೇಂದ್ರ ಸರ್ಕಾರ ಎಂದರು.

ಕಳೆದ ಹದಿನೈದು ವರ್ಷದಿಂದ ಬಿಜೆಪಿ ಸಂಸದರೇ ಇದ್ದಾರೆ. ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಹೋರಾಟ ಮಾಡಬೇಕಿತ್ತು.ಈ ಸಮಸ್ಯೆ ಅರಣ್ಯ ನಾಶದ ಪ್ರಕರಣ ಅಲ್ಲ. ರಾಜ್ಯದ ಜನರಿಗೆ ಬೆಳಕು ಕೊಡಲು ತಮ್ಮ ಭೂಮಿ ಕೊಟ್ಟು ಶರಾವತಿ ಸಂತ್ರಸ್ತರು ಅನಾಥರಾಗಿದ್ದಾರೆ ಎಂದರು.

ಅರಣ್ಯ ಇಲಾಖೆ ಕಾನೂನುಗಳಿಂದ ಸಂತ್ರಸ್ತರಿಗೆ ನ್ಯಾಯ ಸಿಗುತ್ತಿಲ್ಲ.ಸಂಸದರು ಈ ಸಮಸ್ಯೆಯನ್ನು ಕೇಂದ್ರ ಸರ್ಕಾರಕ್ಕೆ ಅರ್ಥೈಸಿಕೊಡಬೇಕು.ಆ ಜವಾಬ್ದಾರಿ ಇಲ್ಲಿನ ಸಂಸದರಿಗಿದೆ.ಸಂಸದ ರಾಘವೇಂದ್ರ ಇಲ್ಲಿಯವರೆಗೆ ಯಾವುದೇ ಈ ರೀತಿಯ ಕೆಲಸ ಮಾಡಿಲ್ಲ.ಮೊನ್ನೆ ಒಂದು ಪ್ರಶ್ನೆ ಕೇಳಿದ್ದಾರೆ ಇದಕ್ಕೆ ಮಂತ್ರಿಗಳು ಉತ್ತರ ಕೊಟ್ಟಿದ್ದಾರೆ. ಸುಪ್ರೀಂ ಕೋರ್ಟ್ ನ ಒಪ್ಪಿಗೆ ಬೇಕು ಅಂತಾ ಹೇಳಿದ್ದಾರೆ ಸರ್ಕಾರವೇ ಶರಾವತಿ ಸಂತ್ರಸ್ತರಿಗೆ ಅನ್ಯಾಯ ಮಾಡಿದೆ. ಸಂಸದರು ಅಟಾರ್ನಿ ಜನರಲ್ ಮೂಲಕ ನ್ಯಾಯ ಕೊಡಿಸುವ ಕೆಲಸ ಮಾಡಬೇಕಿತ್ತು ಎಂದು ಸಲಹೆ ನೀಡಿದ್ದಾರೆ.

ಸಂಸದರ ಪ್ರಾಥಮಿಕ ಹೊಣೆಗಾರಿಕೆಯನ್ನೆ ಅವರು ಮಾಡಿಲ್ಲ.ಈ ಹಿಂದೆ ಸರ್ಕಾರವೇ ಅವರ ಮನೆಯ ಒಳಗಡೆ ಇತ್ತು.ಆಗ ನೈಜ ಕಾಳಜಿ ಇದ್ದರೆ ಸಮಸ್ಯೆ ಬಗೆಹರಿಸಬೇಕಿತ್ತು. ಸಂಸದರು ಮುಳುಗಡೆ ರೈತರಿಗೆ ಬಹಳ‌ ದೊಡ್ಡ ಅನ್ಯಾಯ ಮಾಡಿದ್ದಾರೆ.ಪಾರ್ಲಿಮೆಂಟ್ ಈಗಲೂ ನಡೆಯುತ್ತಿದೆ ಈ ಬಗ್ಗೆ ಗಂಭೀರವಾಗಿ ಮಾತಾಡಿ ಎಂದು ಸಲಹೆ ನೀಡಿದರು.

ಸದನದಲ್ಲಿ ಹೋರಾಟ ಮಾಡಿ ಜಿಲ್ಲೆಯ ರೈತರಿಗೆ ನ್ಯಾಯ ಒದಗಿಸುವ ಕೆಲಸ ಮಾಡಿ.ನಾವು ನಿಮ್ಮೊಂದಿಗೆ ಇರುತ್ತೇವೆ .ಇಲ್ಲ ಶರಾವತಿ ಸಂತ್ರಸ್ತರನ್ನ ಕಟ್ಟಿಕೊಂಡು ತಮ್ಮ ವಿರುದ್ಧ ಹೋರಾಟ ಮಾಡುತ್ತೇವೆ‌. ಪಕ್ಷಾತೀತವಾಗಿ ಈ ವಿಷಯದಲ್ಲಿ ನಾವು ನಿಮ್ಮನ್ನ ಬೆಂಬಲಿಸುತ್ತೇವೆ .ಸಂಸತ್ತಿನಲ್ಲಿ ಧ್ವನಿ ಎತ್ತಿ ಮಾತಾಡಿ.ಶರಾವತಿ ಸಂತ್ರಸ್ತರ ಬದುಕಿಗೆ ನ್ಯಾಯ ಕೊಡಿಸುವ ಕೆಲಸ ಸಂಸದರಿಂದ ಆಗಬೇಕು ಎಂದರು

ಇದನ್ನೂ ಓದಿ-https://suddilive.in/archives/4830

Related Articles

Leave a Reply

Your email address will not be published. Required fields are marked *

Back to top button