ಸಿಗರೇಟ್ ಗಾಗಿ ರೌಡಿ ರಜಾಕ್ ನಿಂದ ದಾಂಧಲೆ

ಸುದ್ದಿಲೈವ್/ಶಿವಮೊಗ್ಗ

ಜೆಪಿ ನಗರದ ನೇತಾಜಿ ವೃತ್ತದ ಸಮುದಾಯ ಭವನದಬಳಿ ಬಳಿ ಗೂಡಂಗಡಿ ಇಟ್ಟುಕೊಂಡು ಜೀವನ ನಡೆಸುತ್ತಿದ್ದ ದಲಿತ ಕುಟುಂಬದ ಮೇಲೆ ರೌಡಿಗಳು ದಾಳಿ ನಡೆಸಿ ಸಿಗರೇಟ್ ಗಾಗಿ ದಾದಾಗಿರಿ ನಡೆಸಿದ ಘಟನೆ ತುಂಗನಗರದಲ್ಲಿ ದೂರು ದಾಖಲಾಗಿದೆ.
ಆನಂದ್ ಎಂಬುವರು ಮನೆಯ ಮುಂದೆ ಗೂಡಂಗಡಿಯಿಟ್ಟುಕೊಂಡು ಜೀವನ ನಡೆಸುತ್ತಿದ್ದು ಅ.26 ರಂದು ರಾತ್ರಿ 12 ಗಂಟೆಯ ವೇಳೆಗೆ ಬಂದ ಸುಮಾರು ನಾಲ್ಕೈದು ಜನ ಮನೆಯ ಬಾಗಿಲು ಬಡಿದಿದ್ದಾರೆ. ಯಾರು ಎಂದು ಕೇಳಿದ್ದಕ್ಕೆ ನಿಮ್ಮಪ್ಪ ಎಂದು ಗದರಿಸಿ ಬೇಗ ಬಾಗಿಲು ತೆಗೆಯುವಂತೆ ಗದರಿಸಿದ್ದಾರೆ.
ಬಾಗಿಲು ತೆಗೆಯುತ್ತಿದ್ದಂತೆ ಆನಂದ್ ಬನಿಯನ್ ಹಿಡಿದ ಜೆಪಿ ನಗರದ ರೌಡಿ ರಜಾಕ್ ಬಿನ್ ಅಸ್ಲಾಮ್ ಬಾಗಿಲು ತೆಗೆಯಲು ಇಷ್ಟುಹೊತ್ತಾ ಎಂದು ಮರ್ಮಾಂಗಕ್ಕೆ ಒದಿಯಲು ಮುಂದಾಗಿದ್ದಾನೆ. ತಪ್ಪಿಸಿಕೊಂಡ ಆನಂದ್ ಸಂಸಾರಸ್ಥರು ಇರುವ ಮನೆಗೆ ಇಷ್ಟುಹೊತ್ತಿಗೆ ಬಂದು ಬಾಗಿಲು ಬಡಿದರೆ ಹೇಗೆ ಎಂದು ಕೇಳಿದ್ದಾರೆ. ನಿನಗೆ ಸಮಯ ನೋಡಕೊಂಡು ಬಂದು ಎಬ್ಬಿಸಬೇಕಾ ಎಂದು ಗದರಿಸಿದ್ದಾನೆ.
ಸಿಗರೇಟ್ ಗಾಗಿ ಮನೆಯ ಮುಂದೆ ಗಲಾಟೆ ಮಾಡಿದ್ದು ಕೇಳಿಸಿಕೊಂಡು ಅಕ್ಕಪಕ್ಕದವರು 112 ಗೆ ಕರೆ ಮಾಡಿದ್ದಾರೆ.112 ಬಂದಿದ್ದು ನೋಡಿ ರಜಾಕ್ ಗ್ಯಾಂಗ್ ಪರಾರಿಯಾಗಿದೆ. ನಿನ್ನನ್ನು ನಿಮ್ಮ ಕುಟುಂಬವನ್ನು ಜೀವಸಹಿತ ಉಳಿಸುವುದಿಲ್ಲ ಎಂದು ಕೂಗಾಡತ್ತಾ ಬೆದರಿಕೆ ಹಾಕುತ್ತಿದ್ದ ರಜಾಕ್ ಕಾಲುಕಿತ್ತಿದೆ ಎಂದು ದೂರಿನಲ್ಲಿ ದಾಖಲಾಗಿದೆ.
ಇದನ್ನೂ ಓದಿ-https://suddilive.in/archives/2073
