ರಾಷ್ಟ್ರೀಯ ಸುದ್ದಿಗಳು

ರಾಗಿಗುಡ್ಡದಲ್ಲಿ ನಡೆದ ಗಲಭೆ ಕುರಿತಂತೆ ಎಸ್ಪಿ ಮಿಥುನ್ ಕುಮಾರ್ ಸುದ್ದಿಗೋಷ್ಠಿ!

ಸುದ್ದಿಲೈವ್/ಶಿವಮೊಗ್ಗ

ಮೆರವಣಿಗೆಯ ವೇಳೆ ನಡೆದ ಗಲಭೆಯನ್ನ  ಪರಿಸ್ಥಿತಿ ನಿಯಂತ್ರಿಸಲಾಗಿದೆ. ಡ್ರೋಣ್ ಸಿಸಿಟಿವಿ ಫೂಟೇಜ್ ಎಲ್ಲವೂ ಬಳಕೆ ಮಾಡಿ ಯಾರು ತಪ್ಪಿತಸ್ಥರಿದ್ದಾರೆ ಅವರನ್ನ ಬಂಧಿಸಲಾಗಿದೆ ಎಂದು ಎಸ್ಪಿ ಮಿಥುನ್ ಕುಮಾರ್ ತಿಳಿಸಿದರು.

ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಗಲಭೆಯ ಸಂತ್ರಸ್ಥರು ಮತ್ತು ಗಲಭೆಯ ಆರೋಪಿಗಳಲ್ಲಿ ಮೂವರು ಸಮಾಜದವರು ಇದ್ದಾರೆ. 24 ಎಫ್ಐಆರ್ ಆಗಿದೆ 60 ಜನ ಬಂಧಿಸಲಾಗಿದೆ ಎಂದು ತಿಳಿಸಿದರು.

ಕೆಲ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮಾಡಿ ಹರಿದಾಡಲು ಬಿಡಲಾಗಿದೆ. ರೂಮರ್ಸ್ ಹರಿಬಿಟ್ಟವರ ವಿರುದ್ಧ  ವಿಷೇಶ ತಂಡ ರಚಿಸಿ ವಶಕ್ಕೆ ಪಡೆಯಲಾಗಿದೆ. ವಿಡಿಯೋದಲ್ಲಿ ಪೊಲೀಸರಿಂದ ನಡೆದ ಲಾಠಿ ಪ್ರಹರದಲ್ಲಿ ಒಳಗಾದವನು ಆರೋಗ್ಯವಾಗಿ ಇದ್ದಾನೆ. ಆತನಿಗೆ ಚಿಕಿತ್ಸೆ ನೀಡಲಾಗುತ್ತಿದೆ. ವಿಡಿಯೋ ಹರಿ ಬಿಟ್ಟವರ ವಿರುದ್ಧ ಪ್ರಕರಣ ದಾಖಲಾಗಿದೆ ಎಂದರು.

ಯಾವುದೇ ವಿಡಿಯೋವನ್ನ ಇಲಾಖೆ ಅನುಮತಿ ಪಡೆಯದೆ ಹರಿಬಿಟ್ಟಲ್ಲಿ ಕ್ರಮ ತೆಗೆದುಕೊಳ್ಳಲಾಗುವುದು. ಬೇರೆ ರಾಜ್ಯದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟರೆ ಕ್ರಮ ಜರುಗಿಸಲಾಗುತ್ತದೆ. ಓಮಿನಿ ವಾಹನದಲ್ಲಿ ಬಂದವರ ವಿಷಯವೂ ಸುಳ್ಳು ಸುದ್ದಿ ಎಂದು ಎಸ್ಪಿ ಮಿಥುನ್ ಕುಮಾರ್ ತಿಳಿಸಿದರು.

ಎರಡು ಒಮಿನಿಯಲ್ಲಿ ಬಂದವರು ನ್ಯಾಮತಿಯವರಾಗಿದ್ದಾರೆ.  ಅವರ ಕ್ರೊಮಿನಲ್ ಬ್ಯಾಕ್ ರೌಂಡ್ ಕಂಡು ಬಂದಿಲ್ಲ.ಒಂದು ಕಮ್ಯುನಿಟಿಯವರನ್ನ ಟಾರ್ಗೆಟ್ ಮಾಡಬಾರದು ಗಲಭೆ ನಡೆಸಿದವರು ಹಾಗೂ .ಕಾನೂನು ಕೈಗೆತ್ತಿಕೊಂಡವರು ಕ್ರಿಮಿನಲ್ಸ್ ಗಳು ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಅವರಿಗೆ ಯಾವುದೇ ಜಾತಿ ಧರ್ಮವಿರಲ್ಲ ಎಂದರು.

ಯಾವುದೇ ವದಙತಿಗಳಿಗೆ ಕಿವಿಗೊಡಬಾರದು. ಸಾಗರದಲ್ಲಿ ನಡೆದ ಮೆರವಣಿವೆಯಲ್ಲೂ ಪ್ರಚೋದನ ಕೆಲಸ ಆಗಿದೆ ಎಂದು ವಿಡಿಯೋ ವೈರಲ್ ಆಗಿದೆ.  ಸಾಗರದಲ್ಲಿ  ಪ್ಲಾಸ್ಟಿಕ್ ಆಯುಧ ಪ್ರದರ್ಶಿಸಲಾಗಿದೆ. ಯಾವುದೇ ಮೆಟಲ್ ಆಯುಧ ಪ್ರದರ್ಶನವಾಗಿಲ್ಲ. ಅವರ ಪ್ರಚೋದನ ಹೇಳಿಕೆ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಗಾಂಧಿ ಬಜಾರ್ ನಲ್ಲಿ ತೋರಿದ ಆಯುಧ ಬಗ್ಗೆ ತಪಾಸಣೆ ನಡೆಯುತ್ತಿದೆ. ಎರಡು ಪ್ರಕರಣದಲ್ಲಿ ಪ್ಲಾಸ್ಟಿಕ್ ಆಯುಧ ಎಂದು ತಿಳಿದು ಬಂದಿದೆ ಎಂದರು.

ಎನ್ ಕೌಂಟರ್ ಆಗಿದೆ ಎಂದು ಸುಮೋಟೋ ಪ್ರಕರಣವಾಗುತ್ತದೆ. ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿದೆ. ಎಎ ವೃತ್ತದಲ್ಲಿ ಅಲಿ ಬಳಸಲಾಗಿರುವ ತಲ್ವಾರ್ ಬಗ್ಗೆ ತನಿಖೆ ನಡೆದಿದೆ. ಕಲ್ಲುತೂರಾಟ ನಡೆದವರ ವಿರುದ್ಧ ಕಾನೂನು ಅಡಿಯಲ್ಲಿ ಪ್ರಕರಣ ದಾಖಲಿಸಲಾಗುತ್ತಿದೆ. ಬೇರೆ ರಾಜ್ಯದಲ್ಲಿ ಆದ ಘಟನೆ ಶಿವಮೊಗ್ಗದಲ್ಲಿ ಆಗಿದೆ ಎಂದು ಹೇಳಲಾಗುತ್ತಿದೆ.

ಫ್ಲೆಕ್ಸ್ ಮತ್ತು ಕಟೌಟ್ ನಿರ್ಮಾಣದಲ್ಲಿ ಜಿಲ್ಲಾಡಳಿತದಿಂದ  ಕ್ರಮ ಜರುಗಿಸಲಾಗಿದೆ. ಯಾವುದೇ ತಪ್ಪಾಗಿದ್ದರೂ ಕ್ರಮ ಜರುಗಿಸಲಾಗುತ್ತಿದೆ. ರಾಗಿಗುಡ್ಡದ ಪ್ರಕರಣದಲ್ಲಿ 6 ಜನ ಪೊಲೀಸರಿಗೆ ಗಾಯವಾಗಿದೆ. ಪಿಐ ಹರೀಶ್ ಪಾಟೀಲ್ ಗೆ ಆವಾಜ್ ಹಾಕಿರುವ ವಿಡಿಯೋ ವೈರಲ್ ಆಗಿರುವ ಬಗ್ಗೆಯೂ ವಿಡಿಯೋ ವೈರಲ್ ಆಗಿದೆ. ಈ ಬಗ್ಗೆ ಸ್ಪಷ್ಟೀಕರಣ ನೀಡಲಾಗುವುದು ಎಂದರು.

144 ಸೆಕ್ಷನ್ ಲ್ಲಿ ಪ್ರತಿಭಟನೆ ಗೆ ನಿರ್ಬಂಧ ಇದೆ. ವ್ಯಾಪಾರವಹಿವಾಟಿಗೆ ಇಲ್ಲ. ರಾಗಿಗುಡ್ಡದಲ್ಲಿ ಸೆಕ್ಷನ್ ಅನಿರ್ದಿಷ್ಟಾವಧಿಯ ವರೆಗೆ ನಡೆದಿದೆ. ಶಾಸಕರ ಎರಡು ಓಮಿನಿ ವಾಹನಗಳು ನ್ಯಾಮತಿ ತಾಲೂಕಿನವರು. ಎರಡೂ ಸಮಾಜದವರು ಇದ್ದಾರೆ ಈದ್ ಮೆರವಣಿಗೆಯಲ್ಲಿ ಬಂದಿದ್ದರು. ಅವರು ನಮ್ಮ ಸಂಪರ್ಕದಲ್ಲಿದ್ದಾರೆ. ಒಂದು ಒಮಿನಿಯಲ್ಲಿ ಒಂದು ಕಮ್ಯೂನಿಟಿ ಎರಡನೇ ವಾಹನದಲ್ಲಿ ಎರಡೂ ಧರ್ಮಿಯವರು ಬಂದಿದ್ದಾರೆ ಎಂದರು.

ಕೆ 19 ಎಂಎನ್ 0007 ವ್ಯಾಗನರ್ ವಾಹನ ಸರ್ಕಲ್ ನಲ್ಲಿ ನಿಂತಿರುವ ಬಗ್ಗೆ ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದ ಎಸ್ಪಿ ಈ ಬಗ್ಗೆ ಮಾಹಿತಿ ನೀಡಲಾಗುವುದು ಎಂದರು. ನಿನ್ನೆ ಸಂಜೆಯ ಲೆಕ್ಕಕ್ಕೆ 10 ಜನ ಗಾಯಗೊಂಡಿದ್ದರು ಅವರಿಗೆಲ್ಲಾ ಚಿಕಿತ್ಸೆ ಪಡೆಯಲಾಗಿದೆ. ಗಾಯಗೊಂಡವರಲ್ಲಿ ಕೆಲವರ ಮೇಲೆ ಎಫ್ಐಆರ್‌ಆಗಿದೆ. ಮೂರು ಧರ್ಮದ ನಿವಾಸಿಗಳ ಮನೆಗಳು ಧ್ವಂಸವಾಗಿದೆ. ವಾಹನ ಮತ್ತು ಮನೆ ಡ್ಯಾಮೇಜ್ ಆಗಿದವರ ಮಾಲೀಕರಿಂದ ಎಫ್ಐಆರ್ ಪಡೆಯಲಾಗಿದೆ. ಇನ್ನೂ ಯಾರಾದರು ಸಂತ್ರಸ್ತರಿದ್ದರೆ ಮುಂದೆ ಬಂದು ದೂರು ಕೊಟ್ಟರೆ ಸ್ವೀಕರಿಸಲಾಗುವುದು ಎಂದರು.

ಗಲಭೆ ನಿಯಂತ್ರಿಸಲು ಮುನ್ನಚ್ಚರಿಕೆ ಕ್ರಮವಾಗಿ ನಗರದಲ್ಲಿ ನಾಕ ಬಂಧಿ ನಿರ್ಮಿಸಲಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ-https://suddilive.in/2023/10/03/communal-vilence/

Related Articles

Leave a Reply

Your email address will not be published. Required fields are marked *

Back to top button