ರಾಗಿಗುಡ್ಡದಲ್ಲಿ ಗಲಭೆ ವಿಚಾರ ಆಮ್ ಆದ್ಮಿಯ ಪ್ರತಿಕ್ರಿಯೆ

ಸುದ್ದಿಲೈವ್/ಶಿವಮೊಗ್ಗ

ರಾಗಿಗುಡ್ಡದಲ್ಲಿ ಈದ್ ಮೆರವಣಿಗೆಯಲ್ಲಿ ನಡೆದ ಘಟನೆಯನ್ನ ಆಮ್ ಆದ್ಮಿ ಪಕ್ಷ ಖಂಡಿಸಿದೆ.
ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿದ ಪ್ರಧಾನ ಕಾರ್ಯದರ್ಶಿ ನಜೀರ್ ಅಹ್ಮದ್ ಮಾತನಾಡಿ, ಕೋಮುದ್ವೇಷವನ್ನ ಹರಡಲು ಯತ್ನಿಸಿದ ಕಿಡಿಗೇಡಿಗಳಿಂದ ಘಟನೆ ನಡೆದಿದೆ. ಕೆಲ ಮಾಧ್ಯಮಗಳಲ್ಲಿ ಶಾಂತಿ ಕದಡುವ ದೃಶ್ಯವನ್ನ ವೈಭವೀಕರಿಸಲಾಗಿದೆ. ರಾಗಿಗುಡ್ಡದಲ್ಲಿ ನಡೆದ ಕಿಡಿಗೇಡಿಗಳ ಕೃತ್ಯವನ್ನ ಮಾಧ್ಯಮಗಳು ಹೆಚ್ಚಿನ ವೈಭವೀಕರಿಸದಂತೆ ಮನವಿ ಮಾಡಿದರು.
ಮಂಜುನಾಥ್ ಪೂಜಾರಿ ಮಾತನಾಡಿ, ಎಸ್ಪಿಯ ಮೇಲೆ ಮತ್ತು ಶಿವಮೊಗ್ಗ ಗ್ರಾಮಾಂತರ ಪಿಐ ಅಭಯ್ ಪ್ರಕಾಶ್ ಸೋಮನಾಳ್ ಮೇಲೆ ಕೆಲವರು ಬೆಟ್ಟು ಮಾಡಿ ತೋರಿಸಲಾಗುತ್ತಿದೆ. ಆದರೆ ಶಾಸಕರು ಹೊರಗಡೆಯಿಂದ ಬಂದವರು ಕಾರಿನಲ್ಲಿ ಬಂದವರು ಗಲಭೆ ನಡೆಸಲಾಗಿದೆ ಎಂದು ಹೇಳಿದ್ದಾರೆ. ಹಾಗಾದರೆ ಹೊರಗಡೆಯಿಂದ ಬಂದವರು ಯಾರು ಎಂಬುದು ಬಹಿರಂಗ ಪಡಿಸಬೇಕು ಎಂದರು.
ಕೋಮುಗಲಭೆಯ ವಿಚಾರದಲ್ಲಿ ಠಾಣೆಯಿಂದ ಹೊರಬಂದ ಎಲ್ಲಾ ಪಕ್ಷದವರು ಮಾಧ್ಯಮಗಳ ಜೊತೆ ಮಾತನಾಡುತ್ತಾರೆ. ತಮ್ಮ ಪ್ರಭಾವ ಬೀರಲು ಯತ್ನಿಸಲಾಗಿದೆ. ಈ ರೀತಿ ನಡೆಸಿದರೆ ಕಾನೂನು ಕೆಲಸ ಮಾಡುವುದು ಹೇಗೆ? ಹಾಗಾಗಿ ಗಲಭೆ ಕುರಿತು ಮಾತನಾಡದೆ ಕಾನೂನಾತ್ಮಕವಾಗಿ ಮಾತನಾಡಬೇಕಿತ್ತು. ಈ ಕಾರ್ಯ ನಡೆಯಲಿಲ್ಲವೆಂದರು.
ಇದನ್ನೂ ಓದಿ-https://suddilive.in/2023/10/03/ಗಲಭೆ-ನಡೆಸಿದವರಿಗೆ-ಕಾನೂನು/
