ಸ್ಥಳೀಯ ಸುದ್ದಿಗಳು

ಸ್ವಾಮೀಜಿಗೆ ಆದ ಅವಮಾನ ಹಿಂದೂಗಳಿಗೆ ಆದ ಅವಮಾನ-ಈಶ್ವರಪ್ಪ

ಸುದ್ದಿಲೈವ್/ಶಿವಮೊಗ್ಗ

ಎಲ್ ಕೆ ಅಡ್ವಾಣಿ ಅವರಿಗೆ ಭಾರತರತ್ನ ಸಿಕ್ಕ ವಿಚಾರದ ಬಗ್ಗೆ ಮಾಜಿ ಸಚಿವ ಈಶ್ವರಪ್ಪ ಪ್ರತಿಕ್ರಿಯೆ ನೀಡಿದ್ದಾರೆ.ನನ್ನ ಜೀವನದಲ್ಲಿ ಮೂರು ಸಂತೋಷದ ಸಂದರ್ಭ ಬರುತ್ತದೆ ಎಂದು ಕನಸಿನಲ್ಲೂ ಎನಿಸಿರಲಿಲ್ಲ ಎಂದು ಉತ್ಪ್ರೇಕ್ಷೆಯಾಗಿ ಮಾತನಾಡಿದರು.

ಅವರು ಮಾಧ್ಯಮದೊಂದಿಗೆ ಮಾತನಾಡಿ,  ಎಲ್ ಕೆ ಅಡ್ವಾಣಿ ಜೊತೆಗೆ ರಥಯಾತ್ರೆಯಲ್ಲಿ ಪಾಲ್ಗೊಂಡಿದ್ದೆ ನನ್ನ ಜೀವನದಲ್ಲೇ ಇದು ನನಸಾಗುತ್ತದೆ ಎಂದು ಕೊಂಡಿರಲಿಲ್ಲ. ಜ್ಞಾನವ್ಯಾಪಿ ಮಸೀದಿಯಲ್ಲಿ ಹಿಂದೂಗಳ ಪೂಜೆ ಆರಂಭವಾಗಿರೋದು ಸಂತಸ ತಂದಿದೆ ಎಂದರು‌

ರಾಜಕೀಯ ಭೀಷ್ಮ ಲಾಲ್ ಕೃಷ್ಣ ಅಡ್ವಾಣಿ ಅವರಿಗೆ ಭಾರತ ರತ್ನ ಘೋಷಣೆ ಮಾಡಿರುವುದು ನಮ್ಮ ಜೀವನದ ಪುಣ್ಯ. ಈ ಮೂರು ಸಂತೋಷದ ಘಟನೆಗಳು ನನ್ನ ಜೀವಿತಾವಧಿಯಲ್ಲಿ ನಡೆದಿರುವುದು ಖುಷಿಕೊಟ್ಟಿದೆ. ನಾನು ಬಿಜೆಪಿ ರಾಜ್ಯಾಧ್ಯಕ್ಷನಾಗಿದ್ದಾಗ ದಕ್ಷಿಣ ಭಾರತದ 50 ಪದಾಧಿಕಾರಿಗಳ ಸಭೆಯನ್ನು ಲಾಲ್ ಕೃಷ್ಣ ಅಡ್ವಾಣಿ ಅವರ ಜೊತೆ ನಡೆಸಿದ್ದೆ ಎಂದರು.

ಅಂದು ಎಲ್ ಕೆ ಅಡ್ವಾಣಿ ಅವರು ಸಿದ್ಧಾಂತ ಸಂಘಟನೆ ಮೊದಲಾದ ವಿಷಯಗಳ ಬಗ್ಗೆ ಹೇಳಿಕೊಟ್ಟಿದ್ದರು, ಎಂಎಲ್ಎ ಸ್ಥಾನ ಸಿಗಲಿಲ್ಲ, ಎಂಪಿ ಸ್ಥಾನ ಸಿಗಲಿಲ್ಲ, ಎಂದು ಇಂದು ಪಕ್ಷ ಬಿಟ್ಟು ಬೇರೆ ಕಡೆ ಹೋಗುವ ಶಾಸಕ ಸಂಸದರ ಅಧಿಕಾರದ ವ್ಯಾಮೋಹ ನೋಡುತ್ತೇವೆ. ಅಂದು ಭಾರತದಲ್ಲಿ ಲಾಲ್ ಕೃಷ್ಣ ಅಡ್ವಾಣಿ ಮತ್ತು ವಾಜಪೇಯಿ ಇಬ್ಬರಲ್ಲಿ ಯಾರು ಪ್ರಧಾನಿಯಾಗುತ್ತಾರೆ ಎಂಬ ಚರ್ಚೆ ನಡೆಯುತ್ತಿತ್ತು

ಆಂದು ಮುಂಬೈನಲ್ಲಿ ನಡೆದ ಸಭೆಯಲ್ಲಿ ಮುಂದಿನ ಪ್ರಧಾನಿ ವಾಜಪೇಯಿ ಎಂದು ಘೋಷಣೆ ಮಾಡಿದ್ದರು. ಅಂದು ಪ್ರಧಾನ ಸ್ಥಾನ ನನಗೆ ಬೇಡ ವಾಜಪೇಯಿ ಸಿಗಲಿ ಎಂಬ ಅವರ ಆದರ್ಶ ನಮಗೆ ಸಿಕ್ಕ ಮಾರ್ಗದರ್ಶನವಾಗಿದೆ.ಅಡ್ವಾಣಿಯರ ರಾಮರಥದ ಯಾತ್ರೆಯ ಸಂದರ್ಭದಲ್ಲಿ ಅವರೊಂದಿಗೆ ಪ್ರಯಾಣಿಸುವ ಸೌಭಾಗ್ಯ ನನಗೆ  ಸಿಕ್ಕಿತ್ತು ಎಂದು ಹೇಳಿದರು.

ಮುಂದಿನ ಊರು ಯಾವುದೆಂದು ರಥಯಾತ್ರೆಯ ಸಂದರ್ಭದಲ್ಲಿ ಕೇಳುತ್ತಾ ಈ ಊರಲ್ಲಿ ಇಂತಹ ಒಬ್ಬ ಹಿರಿಯ ಕಾರ್ಯಕರ್ತ ಇದ್ದ ಎಂದು ಮಾತನಾಡುತ್ತಿದ್ದರು. ಇತ್ತೀಚಿಗೆ ದೆಹಲಿಯಲ್ಲಿ ನಾನು ಮತ್ತು ಪುತ್ರ ಕಾಂತೇಶ್ ಎಲ್ ಕೆ ಅಡ್ವಾಣಿ ಅವರನ್ನು ಭೇಟಿ ಮಾಡಿದಾಗ ಆತ್ಮೀಯವಾಗಿ ನೋಡಿ ಕೊಂಡರು. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ವಾಜಪೇಯಿ ಮತ್ತು ಅಡ್ವಾಣಿ ಜೈಲಿನಲ್ಲಿ ಇದ್ದರು ಎಂದು ನೆನಪಿಸಿಕೊಂಡರು.‌

ಭಾರತ್ ಮಾತಾ ಕಿ ಜೈ, ವಂದೇ ಮಾತರಂ ಎಂಬ ಘೋಷಣೆ ಕೂಗಿದ್ದಕ್ಕಾಗಿ ಜೈಲಿನಲ್ಲಿ ಇದ್ದರು.ಖರ್ಗೆಯವರು ಮೋದಿಯವರನ್ನು ಸರ್ವಾಧಿಕಾರಿ ಎಂದಿದ್ದಾರೆ. ಮುಂದಿನ ಚುನಾವಣೆಯಲ್ಲಿ ಯಾರು ಸರ್ವಾಧಿಕಾರಿ ಎಂದು ದೇಶ ಹೇಳುತ್ತದೆ. ರಥಯಾತ್ರೆಯ ಸಂದರ್ಭದಲ್ಲಿ ಎಸ್ ಪಿ ಜಿ ಸೆಕ್ಯೂರಿಟಿ ಹಿನ್ನೆಲೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ನನ್ನನ್ನು ರಥದಲ್ಲಿ ಕೂರಿಸಿಕೊಂಡು ರಾಜ್ಯ ಬಿಜೆಪಿಯ ಅಧ್ಯಕ್ಷ ಎಂದು ಎಲ್ಲರಿಗೂ ಪರಿಚಯಿಸಿದರು ದೇಶದ ಅತಿ ಉನ್ನತ ಸ್ಥಾನ ಸಿಕ್ಕಿರುವುದು ಸಂತಸ ತಂದಿದೆ ಎಂದರು.

ಈಶ್ವರಾನಂದ ಪುರಿ ಸ್ವಾಮೀಜಿ ಹೇಳಿಕೆ ವಿಚಾರ

ಈಶ್ವರಾನಂದ ಸ್ವಾಮೀಜಿಯವರು ಜಾತಿ ವ್ಯವಸ್ಥೆಯಿಂದಾಗಿ ಚೆನ್ನಕೇಶವ ದೇವಾಲಯಕ್ಕೆ ಹೋಗಲ್ಲ ಎಂದಿದ್ದಾರೆ.  ಈ ಘಟನೆಯಲ್ಲಿ ಹೇಗಾಯಿತು ಎಂದು ಮಾಧ್ಯಮಗಳಲ್ಲಿ ನೋಡಿದ್ದೇವೆ. ದೇವಸ್ಥಾನದಲ್ಲಿ ಅರ್ಚಕರು ನಾವು ಸ್ವಾಮೀಜಿಗೆ ಸನ್ಮಾನ ಮಾಡಿ ಗೌರವ ಸಲ್ಲಿಸಿದ್ದೇವೆ ಎಂದಿದ್ದಾರೆ

ಈಶ್ವರಾನಂದಪುರಿ ಸ್ವಾಮೀಜಿಗಳು ನಾನು ಹೋದ ಬಳಿಕ ದೇವಾಲಯ ಸ್ವಚ್ಛ ಮಾಡಿದ್ದಾರೆ ಎಂದಿದ್ದಾರೆ. ಹಾಗಾದರೆ ಎಲ್ಲಿ ಗೊಂದಲ ಆಯಿತು ಎಂಬುದು ಬಹಿರಂಗ ಆಗಬೇಕು. ಈ ಬಗ್ಗೆ ತನಿಖೆ ನಡೆದು ಬಹಿರಂಗಪಡಿಸಬೇಕು. ಇಂದು ದಲಿತ ಎಂಬುದನ್ನು ಕೂಡ ಹೇಳುತ್ತಿಲ್ಲ ಎಲ್ಲರೂ ಹಿಂದೂಗಳು ಎಂದು ಹೇಳಲಾಗುತ್ತಿದೆ ಎಂದು ತಿಳಿಸಿದರು.

ಉಡುಪಿಯಲ್ಲಿ ಶ್ರೀಕೃಷ್ಣ ಕನಕದಾಸರ ಭಕ್ತಿಯನ್ನು ಮೆಚ್ಚಿ ಗೋಡೆ ಹೊಡೆದು ದರ್ಶನ ನೀಡಿದ್ದ ಘಟನೆ ಎಲ್ಲರಿಗೂ ಗೊತ್ತಿದೆ. ಸ್ವಾಮೀಜಿಗೆ ಅವಮಾನ ಆಗಿದ್ದರೆ ಅದು ಹಿಂದೂ ಸಮಾಜಕ್ಕೆ ಮಾಡಿದ ಅವಮಾನ. ಈ ಘಟನೆ ಸತ್ಯವಾಗಿದ್ದರೆ ಸಂಬಂಧಪಟ್ಟವರ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು. ಇದು ಸತ್ಯವಾಗಿಲ್ಲದಿದ್ದರೆ ಇದಕ್ಕೆ ಕಾರಣರಾದವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದರು.

ಸಿದ್ದರಾಮಯ್ಯನವರ ವಿರುದ್ಧ ಗರಂ

ಅಡ್ವಾಣಿ ಅವರಿಗೆ ಭಾರತ ರತ್ನ ಘೋಷಣೆ ಬಗ್ಗೆ ಸಿಎಂ ಸಿದ್ದರಾಮಯ್ಯ ಹೇಳಿಕೆ ವಿಚಾರದ ಬಗ್ಗೆನೂ ಪ್ರತಿಕ್ರಿಯಿಸಿದ ಮಾಜಿ ಸಚಿವರು, ಸಿದ್ದರಾಮಯ್ಯ ಒಬ್ಬ ಮನುಷ್ಯ ಅಲ್ಲ ಎಂದು ಹೇಳಬೇಕಾಗುತ್ತದೆ.

ಡಿಕೆಶಿ ಮತ್ತು ಸಿದ್ದರಾಮಯ್ಯ ಮುಖ್ಯಮಂತ್ರಿ ಯಾರಾಗಬೇಕೆಂದು ದೆಹಲಿಯಲ್ಲಿ ನಾಲ್ಕೈದು ದಿನ ಯಾಕೆ ಕೂತಿದ್ದರು. ಎಲ್ ಕೆ ಅಡ್ವಾಣಿ ಅವರಿಗೆ ಭಾರತ ರತ್ನ ನೀಡಿರುವ ಸಂದರ್ಭದಲ್ಲಿ ಹರ್ಷವನ್ನು ಹಂಚಿಕೊಳ್ಳಬೇಕು.ತುಮಕೂರಿನ ಸಿದ್ದಗಂಗಾ ಶ್ರೀಗಳಿಗೆ ಭಾರತ ರತ್ನ ಕೊಡಬೇಕೆಂದು ಈಗಲೂ ಆಗ್ರಹ ಮಾಡುತ್ತೇವೆ ಎಂದರು.

ಕಾಂಗ್ರೆಸ್ ಭ್ರಷ್ಟಾಚಾರದ ಸರ್ಕಾರ ಎಂದು ಶಾಸಕ ಶಿವರಾಂ ಹೇಳುತ್ತಿದ್ದಾರೆ.ಸತ್ತ ನಂತರ ಭಾರತ ರತ್ನ ಅನೇಕರಿಗೆ ಕೊಡಲಾಗಿದೆ. ಅನೇಕರಿಗೆ ಜೀವಿತಾವಧಿಯಲ್ಲಿ ಸಿಕ್ಕಿರುವುದು ಸಂತಸದ ವಿಚಾರ ಎಂದರು.

ಇದನ್ನೂ ಓದಿ-https://suddilive.in/archives/8341

Related Articles

Leave a Reply

Your email address will not be published. Required fields are marked *

Back to top button