ಸೊರಬ ತಾಲೂಕಿನಲ್ಲಿ ಅಡ್ಡಿಯಿಲ್ಲದ ಹೋರಿಹಬ್ಬಕ್ಕೆ ಶಿಕಾರಿಪುರದಲ್ಲಿ ತಕರಾರು-ಸಂಸದರ ಸಲಹೆ ಒಪ್ಪಿಕೊಳ್ಳುತ್ತಾ ಜಿಲ್ಲಾಡಳಿತ?

ಸುದ್ದಿಲೈವ್/ಶಿವಮೊಗ್ಗ

ಜಿಲ್ಲೆಯಲ್ಲಿ ಹೋರಿಹಬ್ಬಕ್ಕೆ ಭರ್ಜರಿ ತಯಾರಿ ನಡೆದಿರುವ ಹಿನ್ನಲೆಯಲ್ಲಿ ಸೊರತ ತಾಲೂಕಿನಲ್ಲಿ ಹೋರಿ ಹಬ್ಬಕ್ಕೆ ಅವಕಾಶ ದೊರೆತರು ಶಿಕಾರಿಪುರದಲ್ಲಿ ಪೊಲೀಸ್ ಇಲಾಖೆ ತಡೆ ನೀಡಿರುವುದು ಭಾರಿ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.
ಸ್ವತಃ ಸಂಸದ ರಾಘವೇಂದ್ರ ಶಿಕಾರಿಪುರ ಪೊಲೀಸ್ ಠಾಣೆಯ ಎದುರು ಧರಣಿಯಲ್ಲಿ ಭಾಗಿಯಾಗಿದ್ದಾರೆ. ಅಂದರೆ ಶಿಕಾರಿಪುರಕ್ಕೆ ಒಂದು ಕಾನೂನು ಸೊರಬಕ್ಕೆ ಮತ್ತೊಂದು ಕಾನೂನು ಲಾಗೂ ಆಗುತ್ತಿದೆ ಎಂಬ ಅನುಮಾನವನ್ನೂ ಈ ಪ್ರತಿಭಟನೆ ಹುಟ್ಟಿಸಿದೆ.
ಶಿಕಾರಿಪುರ ತಾಲ್ಲೂಕಿನ ಮದಗ ಹಾರನಹಳ್ಳಿ ಗ್ರಾಮದಲ್ಲಿ ಪ್ರತಿವರ್ಷ ದೀಪಾವಳಿ ಹಬ್ಬದ ಪ್ರಯುಕ್ತ ಇಂದು ಏರ್ಪಡಿಸಿದ್ದ ಹೋರಿ ಹಬ್ಬದ ಆಚರಣೆಗೆ ಪೊಲೀಸ್ ಇಲಾಖೆ ಅಡ್ಡಿಪಡಿಸಿದೆ ಎಂದು ಆರೋಪಿಸಿ ಠಾಣೆ ಎದುರು ರೈತರು ಪ್ರತಿಭಟನೆಗೆ ಇಳಿಯಲು ಕಾರಣವಾಗಿದೆ. ಸೊರಬ ತಾಲೂಕಿನ ದ್ವಾರಹಳ್ಳಿ, ಅಗಸವಳ್ಳಿ, ಚನ್ನಾಪುರದಲ್ಲಿ ಈಗಾಗಲೇ ಹೋರಿ ಹಬ್ಬ ಮುಗಿದಿದೆ.
ಎಲ್ಲೂ ತಂಟೆ ತಕರಾರು ತೆಗೆಯದ ಇಲಾಖೆ ಶಿಕಾರಿಪುರದ ಮಾಗದಹಳ್ಳಿಯಲ್ಲಿ ತಕರಾರು ತೆಗೆದು ಇಂದು ನಡೆಯಬೇಕಾದ ಹೋರಿಹಬ್ಬಕ್ಕೆ ಬ್ರೇಕ್ ಹಾಕಿದೆ. ಸಂಸದರು ಪಾಲ್ಗೊಳ್ಳುವಂತೆ ಮಾಡಿದೆ. ಹೊಸ ಕಾನೂನಿನಲ್ಲಿ ಹಲವು ತಿದ್ದುಪಡಿ ತಂದು ಜಿಲ್ಲಾಡಳಿತ ಅನುಮತಿ ನೀಡಲಾಗುತ್ತಿದೆ. ಈ ವೇಳೆ ಇಲಾಖೆಯ ತಕರಾರು ಏಕೆ ಎಂಬ ಪ್ರಶ್ನೆಯನ್ನೂ ಮೂಡಿಸಿದೆ.
ಈ ವೇಳೆ ಸಂಸದರು ಸಿಂಗಲ್ ವಿಂಡೋ ಆರಂಭಿಸಿ ಅನುಮತಿ ನೀಡುವಂತೆ ಸೂಚಿಸಿರುವುದು ಜಿಲ್ಲಾಡಳಿತ ಒಪ್ಪಿಕೊಳ್ಳಲಿದೆಯಾ ಎಂಬ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಈ ಸಂದರ್ಭದಲ್ಲಿ MADB ಮಾಜಿ ಅಧ್ಯಕ್ಷರಾದ ಗುರುಮೂರ್ತಿ ಅವರು, ಶಿಕಾರಿಪುರ ಮಂಡಲ ಅಧ್ಯಕ್ಷರಾದ ವೀರೇಂದ್ರ ಪಾಟಿಲ್ ಅವರು, ಶಿಕಾರಿಪುರ ಯುವ ಮೋರ್ಚಾ ಅಧ್ಯಕ್ಷರಾದ ಪ್ರವೀಣ್ ಅವರು, ತೊಗರ್ಸಿ ಮಹಾಶಕ್ತಿಕೇಂದ್ರದ ಸತೀಶ್, ಮುಖಂಡರಾದ ರುದ್ರೇಶ್ ಸೇರಿದಂತೆ ಅನೇಕ ಪ್ರಮುಖರು ಜೊತೆಗಿದ್ದರು.
ಇದನ್ನೂ ಓದಿ-https://suddilive.in/archives/3230
