ಕ್ರೈಂ ನ್ಯೂಸ್
ಶಿವಮೊಗ್ಗದಲ್ಲಿ ಯಾವುದೇ ಕೊತ ಕೊತ ದಗ ದಗ ಇಲ್ಲ-ಎಸ್ಪಿ ಸ್ಪಷ್ಟನೆ

ಸುದ್ದಿಲೈವ್/ಶಿವಮೊಗ್ಗ

ನಿನ್ನೆ ರಾಗಿಗುಡ್ಡದಲ್ಲಿ ನಡೆದ ಗಲಭೆಗೆ ಸಂಬಂಧಿಸಿದಂತೆ 24 ದೂರು ಗಳು ದಾಖಲಾಗಿದ್ದು 60 ಜನರನ್ನ ಪೊಲೀಸರು ಬಂಧಿಸಲಾಗಿದೆ.
ಮಾಧ್ಯಮಕ್ಕೆ ಮಾಹಿತಿ ನೀಡಿದ ಎಸ್ಪಿ ಮಿಥುನ್ ಕುಮಾರ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ರಾಗಿಗುಡ್ಡದಲ್ಲಿ ನಡೆದ ಗಲಭೆ ಅರ್ಧಗಂಟೆಯಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ. ಶಿವಮೊಗ್ಗದಲ್ಲಿ ಮಾಧ್ಯಮದಲ್ಲಿ ಬಿತ್ತರವಾಗುತ್ತಿರುವ ಯಾವುದೇ ದಗ ದಗ ಕೊತ ಕೊತ ಇಲ್ಲವೆಂದು ಸ್ಪಷ್ಟಪಡಿಸಿದ್ದಾರೆ.
ಪ್ರಕರಣದಲ್ಲಿ 7 ಮನೆಗಳ ಕಿಟಕಿ ಗ್ಲಾಜುಗಳು ಒಡೆಯಲಾಗಿದೆ. ನಮ್ಮ ಮಾಹಿತಿ ಪ್ರಕಾರ ಲೋಕೇಶ ಗೌಡ, ರೇಖಾ ಶಿವಕುಮಾರ್ ಲಕ್ಷ್ಮಣ ಗೌಡ, ವೆಂಕಟೇಶ್, ಕುಮಾರ, ಚಾಂದ್ರಶೇಖರ ಮತ್ತು ಪ್ರಸನ್ನ ಎಂಬುವರ ಮನೆ ಡ್ಯಾಮೇಜ್ ಆಗಿರುವ ಮಾಹಿತಿ ತಿಳಿದು ಬಂದಿದೆ.
ಒಂದು ನಾಲ್ಕು ಚಕ್ರ, ಎರಡು ದ್ವಿಚಕ್ರ, ಒಂದು ಆಟೋವನ್ನ ವಶಕ್ಕೆ ಪಡೆಯಲಾಗಿದೆ ಎಂಬ ಮಾಹಿತಿಯನ್ನ ಎಸ್ಪಿ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ-https://suddilive.in/2023/10/02/ಎರಡು-ವ್ಯಾನ್-ಗಳಲ್ಲಿ-ಬಂದವರ/
