ಸಿನಿಮಾ ಸುದ್ದಿಗಳು

ಡಿ.15 ರಂದು ಮಾಯಾನಗರಿ ಸಿನಿಮಾ ಬಿಡುಗಡೆ

ಸುದ್ದಿಲೈವ್/ಶಿವಮೊಗ್ಗ

ಭರತ್ ಸಾಗರ್ ಅಭಿನಯದ ಮಾಯಾನಗರಿ ಸಿನಿಮಾ ಡಿ.15 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.‌

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಟ ಭರತ್,   ತಾನು ಸಾಗರದ ಯುವಕನಾಗಿರುವುದಾಗಿ ಹೇಳಿಕೊಂಡಿದ್ದಾರೆ. ಸಾಗರದಲ್ಲಿ  1-10 ನೇ ತರಗತಿಯ ವಿದ್ಯಾಭ್ಯಾಸ ಮುಗಿಸಿದ್ದಾರೆ. ಮೈಸೂರಿನಲ್ಲಿ ಪಿಯುಸಿ ಮುಗಿಸಿದ್ದು ಬಿಫಾರ್ಮಸಿ ಪದವಿ ಹೊಂದಿದ್ದಾರೆ, ಬೆಂಗಳೂರಿನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಡಲಿಂಗ್ ಆಸಕ್ತಿ ವಹಿಸಿದ್ದರು ಎಂಬ ಮಾಹಿತಿಯನ್ನ‌ ಹಂಚಿಕೊಂಡರು.

ಮಾಡಲಿಂಗ್ ಮಾಡ್ತಾ ಸಿನಿಮಾದಲ್ಲಿ ಪಾತ್ರಕ್ಕೆ ಅಭಿಲಾಷೆ ಹುಟ್ಟಿತು. ಸಣ್ಣಪುಟ್ಟ ಪಾತ್ರದೊರೆಯಿತು ಮಾಯಾನಗರದ ಸಿನಿಮಾದಲ್ಲಿ ನಾಯಕನಾಗಿ ನಟಿಸಿದ್ದೇನೆ. ಶ್ರಾವ್ಯ ಮತ್ತು ನಿಹಾರಿಕ ನಾಯಕಿ ನಟಿಯಾಗಿದ್ದಾರೆ.  ಮೊದಲನೇ ಹೀರೋಆಗಿ ಅನೀಶ್ ನಟಿಸಿದ್ದಾರೆ. ಎರಡನೇ ನಾಯಕನಾಗಿ ತಾವು ನಟಿಸಿರುವುದಾಗಿ ತಿಳಿಸಿದರು.

ಡಿ. 15 ಕ್ಕೆ ಮಾಯಾನಗರಿ ಸಿಮಿಮಾ ಬಿಡುಗಡೆಯಾಲಿದೆ.  ಶಂಕರ್ ಅವರ ನಿರ್ದೇಶನದಲ್ಲಿ ಶೂಟಿಂಗ್ ನಡೆದಿದೆ. ಶರತ್ ಲೋಹಿತೇಶ್ವರ್, ಅನಿಶ್ ನಟಿಸಿರುವ ಸಿನಿಮಾ. ಥ್ರಿಲ್ಲಿಂಗ್ ಆಕ್ಷನ್ ಎಲ್ಲವೂ ಸೇರಿ ಸಮಗ್ರ ಪ್ಯಾಕೇಜ್ ಢಗಿ ಸಿನಿಮಾ ಹೊರಹೊಮ್ಮಿದೆ ಎಂದರು.

ಕಾಲವೇ ಮೋಸಗಾರ ತನ್ನ ಎರಡನೇ ಸಿನಿಮಾ ಆಗಿದ್ದು ಫೆಬ್ರವರಿಯಲ್ಲಿ ಬಿಡುಗಡೆಯಾಗಲಿದೆ. ಮಾಯಾನಗರಿ ಜೋಗ, ಸಾಗರ ಶಿವಮೊಗ್ಗ ಚಿಕ್ಕಮಗಳೂರು ನಲ್ಲಿ ಶೂಟಿಂಗ್ ನಡೆದಿದೆ. ಹಿರಿಯ ನಟ ದ್ವಾರಕೀಶ್ ಈ ಸಿನಿಮಾದಲ್ಲಿ ನಟಿಸಿರುವುದು ವಿಶೇಷವಾಗಿದೆ ಎಂದು ಭರತ್ ತಿಳಿಸಿದರು.

ಇದನ್ನೂ ಓದಿ-https://suddilive.in/archives/4247

Related Articles

Leave a Reply

Your email address will not be published. Required fields are marked *

Back to top button