ಸ್ಥಳೀಯ ಸುದ್ದಿಗಳು

ನಾಲ್ಕು ರಾಜ್ಯಗಳ ಚುನಾವಣೆ ಫಲಿತಾಂಶ-ಬಿಜೆಪಿಯಲ್ಲಿ ಮುಗಿಲುಮುಟ್ಟಿದ ಸಂಭ್ರಮಾಚರಣೆ

ಸುದ್ದಿಲೈವ್/ಶಿವಮೊಗ್ಗ

ನಾಲ್ಕು ರಾಜ್ಯಗಳ ಚುನಾವಣೆಯಲ್ಲಿ ಇಂದು ಹೊರಬಿದ್ದಿದೆ. ನಾಲ್ಕು ರಾಜ್ಯದಲ್ಲಿ ಬಿಜೆಪಿ ಚೇತೋಹಾರಿ ವಿಜಯ ಸಾಧಿಸಿದೆ. ಇಂದು ನಾಲ್ಕು ರಾಜ್ಯಗಳಲ್ಲಿ ಮಧ್ಯ ಪ್ರದೇಶ್, ರಾಜಸ್ಥಾನ, ಛತ್ತೀಸ್ ಘಡದಲ್ಲಿ ಬಿಜೆಪಿ ಪಕ್ಷ ಮುನ್ನಟೆ ಸಾಧಿಸಿದ ಹಿನ್ಬಲೆಯಲ್ಲಿ ಶಿವಮಿಗ್ಗ ಜಿಲ್ಲಾ ಬಹಳ ಬಿಜೆಪಿ ಕಚೇರಿಯಲ್ಲಿ ಸಂಭ್ರಮಾಚರಣೆ ನಡೆದಿದೆ.

ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಇಂದು ಪಟಾಕಿ ಸಿಡಿಸಿ ಸಿಹಿಹಂಚಲಾಗಿದೆ ಮಾಜಿ ಸಚಿವ ಈಶ್ವರಪ್ಪ ಶಾಸಕ ಚೆನ್ನಬಸಪ್ಪ, ಎಂಪಿ ರಾಘವೇಂದ್ರ ಬಿಜೆಪಿ ಜಿಲ್ಲಾಧ್ಯಕ್ಷ ಮೇಘರಾಜ್, ಮೊದಲಾದ ಕಾರ್ಯಕ್ತರು ಕಚೇರಿಯ ಮುಂದೆ ನಿಂತು ಪಕ್ಷಕ್ಕೆ ಜಯವಾಗಲಿ ಘೋಷಣೆ ಕೂಗಿದ್ದಾರೆ.

ಮೂರು ರಾಜ್ಯದಲ್ಲಿ ಬಿಜೆಪಿ ಗೆದ್ದಿದೆ ಮುಂದಿನ ದಿನಗಳಲ್ಲಿ ದೇಶದ ರಾಜಕಾರಣದ ಮುನ್ಸೂಚನೆಯಾಗಿದೆ. ಬಿಜೆಪಿ ಮತ್ತೊಮ್ಮೆ ಜಯಭೇರಿ ಗೆದ್ದು ಪ್ರಧಾನಿ ಮೋದಿ ಮತ್ತೊಮ್ನೆ ಪ್ರಧಾನಿಯಾಗಲಿದ್ದಾರೆ ಎಂದು ಕಾರ್ಯಕರ್ತರು ಹರ್ಷೋತ್ಕಾರ ವ್ಯಕ್ತಪಡಿಸಿದ್ದಾರೆ.

ಈ ವೇಳೆ ಮಾಜಿ ಸಚಿವ ಈಶ್ವರಪ್ಪ ಮಾಧ್ಯಮಗಳಿಗೆ ಮಾತನಾಡಿ, ರಾಜಸ್ಥಾನ ಗೆದ್ದರೆ ಬಹಳ ಸಂತೋಷ ಆಗುತ್ತೆ ಅಂದುಕೊಂಡಿದ್ವಿ. ಇಷ್ಟರಲ್ಲೇ ತೃಪ್ತಿಪಡಬೇಡಿ ದೇಶದ ಜನ ನಿಮ್ಮ ಜೊತೆ ಇದ್ದಾರೆ. ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಮಂತ್ರಿ ಆಗಬೇಕು ಎಂಬ ಸಂದೇಶವೇ ಮೂರು ರಾಜ್ಯದ ಫಲಿತಾಂಶವಾಗಿದೆ ಎಂದರು.

ರಾಜಸ್ಥಾನ, ಮಧ್ಯಪ್ರದೇಶ ಜೊತೆಗೆ ಛತ್ತೀಸ್ ಘಡವನ್ನು ಗಿಫ್ಟ್ ಆಗಿ ಕೊಟ್ಟಿದ್ದಾರೆ. ದೊಡ್ಡ ಆನಂದ ದೇಶದ ಜನತೆಗೆ ಆಗಿದೆ. ಕಾಂಗ್ರೆಸ್ ನವರು ಐದಕ್ಕೆ ಐದು ಗೆಲ್ಲುತ್ತೀವಿ ಅಂತಿದ್ದರು. ತೆಲಂಗಾಣ ಒಂದು ರಾಜ್ಯದಲ್ಲಿ ಮುಖ್ಯಮಂತ್ರಿ ಮೇಲಿದ್ದ ಬೇಸರದಿಂದ, ಕರ್ನಾಟಕ ರಾಜ್ಯದಲ್ಲಿ ಗ್ಯಾರಂಟಿ ಮೂಲಕ ಮೋಸ ಮಾಡಿದ ರೀತಿ ಜಾಂಗ್ರೆಸ್ ಗೆದ್ದಿದೆ ಎಂದರು.

ಮುಸ್ಲಿಂರನ್ನು ಒಂದುಗೂಡಿಸುವಲ್ಲಿ ಯಶಸ್ವಿಯಾದರೋ, ಅದೇ ರೀತಿ ಗೆದ್ದಿದ್ದಾರೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಗೆ  ತೆಲಂಗಾಣ ಗೆಲ್ಲಲ್ಲು ಆಗಲ್ಲ.ಈಗ ರಾಜಸ್ಥಾನ, ಮಧ್ಯಪ್ರದೇಶ, ಛತ್ತಿಸ್ ಘಡ ಗೆದ್ದಿದ್ದೇವೆ, ಮುಂದಿನ ಚುನಾವಣೆಯಲ್ಲಿ ದೇಶ ಗೆಲ್ಲುತ್ತೇವೆ. ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಮಂತ್ರಿ ಆಗ್ತಾರೆ ಎಂದು ಆರೋಪಿಸಿದರು.

ಕರ್ನಾಟಕ ಮಾದರಿಯಲ್ಲಿ ಗ್ಯಾರಂಟಿ ಕೊಟ್ಟುತ್ತೇವೆ ಅಂದ್ರು, ಕರ್ನಾಟಕದಲ್ಲಿ ಆರು ತಿಂಗಳಲ್ಲೇ ಗ್ಯಾರಂಟಿ ಭರವಸೆ ವಿಫಲವಾಗಿವೆ.ನರೇಂದ್ರ ಮೋದಿ‌ ಪ್ರಧಾನಮಂತ್ರಿ ಮಾಡುವ ದಿಕ್ಕಿನಲ್ಲಿ ಈ ಚುನಾವಣಾ ‌ಫಲಿತಾಂಶ ಸ್ಫೂರ್ತಿ ಆಗಿದೆ. ಗ್ಯಾರಂಟಿ ಯೋಜನೆ ಬಗ್ಗೆ ದೇಶದ ಜನರಿಗೆ ಭರವಸೆ ಇಲ್ಲ. ಗ್ಯಾರಂಟಿ ಯೋಜನೆ ಮೂಲಕ ಕಾಂಗ್ರೆಸ್ ಮತದಾರರಿಗೆ ಮೋಸ ಮಾಡಿದೆ ಎಂದರು.

ಇದನ್ನೂ ಓದಿ-https://suddilive.in/archives/4200

Related Articles

Leave a Reply

Your email address will not be published. Required fields are marked *

Back to top button

Notice: ob_end_flush(): Failed to send buffer of zlib output compression (0) in /home/twzwscfi/suddilive.in/wp-includes/functions.php on line 5373