ಕ್ರೈಂ ನ್ಯೂಸ್

ಎಫ್ಐಆರ್ ಗೆ ಸೂಲಿಬೆಲಿ ಗೇಲಿ

ಸುದ್ದಿಲೈವ್/ಶಿವಮೊಗ್ಗ

ನಿನ್ನೆ ವಾಗ್ಮಿ ಚಕ್ರವರ್ತಿ ಸೂಲಿಬೆಲಿ ವಿರುದ್ಧ ಶಿವಮೊಗ್ಗ ಜಿಲ್ಲಾ ಎನ್ ಎಸ್ ಯು ಐ ಸಂಘಟನೆ ಪರೀಕ್ಷೆ ವೇಳಾಪಟ್ಟಿಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಟೀಕಿಸಿರುವುದನ್ನ ಎಫ್ಐಆರ್ ದಾಖಲಿಸಿದ್ದನ್ನ ಸೂಲಿಬೆಲೆ ಗೇಲಿಮಾಡಿದ್ದಾರೆ.

ಎಫ್ಐಆರ್ ಕುರಿತು ಅವರ ಟೀಕೆ ಹೀಗಿದೆ. ಸೋಷಿಯಲ್ ಮೀಡಿಯಾದ ಫೇಸ್ ಬುಕ್ ಪೇಜ್ ನಲ್ಲಿ ಮತ್ತೊಂದು ಕೇಸ್?!! ದಾಖಲಿಸಿರುವ ಬಗ್ಗೆ  ಸೂಲಿಬೆಲೆ ಹೀಗೆ ಟೀಕಿಸಿದ್ದಾರೆ. “ಟ್ವಿಟರ್ ನಲ್ಲಿ ಪ್ರಶ್ನೆ ಮಾಡಿದ್ದಕ್ಕೆ ಕೇಸ್, ಭಾಷಣ ಮಾಡಿ ಸತ್ಯ ತಿಳಿಸಿದರೆ ಕೇಸ್, ಕೂತ್ರೆ ನಿಂತ್ರೆ ಕೇಸ್! ಟಾರ್ಗೆಟ್ ಅಂದ್ರೆ ಹೀಗೆ ಮಾಡಬೇಕು! ಶಹಭಾಷ್!!”

ಶ್ರೀ ಚಕ್ರವರ್ತಿ ಸೂಲಿಬೆಲೆ MLA ನೂ ಅಲ್ಲ, MP ನೂ ಅಲ್ಲ, ಗ್ರಾಮ ಪಂಚಾಯತಿ ಮೆಂಬರ್ ಕೂಡ ಅಲ್ಲ. ಆದ್ರೂ ಇಷ್ಟು ಟಾರ್ಗೆಟ್ ಮಾಡ್ತಿದ್ದೀರ ಅಂದ್ರೆ ಈ ವ್ಯಕ್ತಿಯಿಂದ ನಿಮಗಾಗಿರುವ ನಷ್ಟ ಬಹಳಷ್ಟಿದೆ.

ಅಯ್ಯೋ ಮೂರ್ಖಶಿಖಾಮಣಿಗಳೆ… ಜಾಸ್ತಿ ಎದುರು ಹಾಕಿಕೊಂಡಷ್ಟೂ ಈ ವ್ಯಕ್ತಿಯಿಂದ ನಿಮಗೆ ಮತ್ತಷ್ಟು ನಷ್ಟವೇ ಹೊರತು, ಲಾಭವಿಲ್ಲ! Because “He likes Challenges”! ಈತನ ಧ್ವನಿಯನ್ನು ಅಡಗಿಸಲು ಪ್ರಯತ್ನಿಸಿದಷ್ಟೂ, ಇನ್ನೂ ಹೆಚ್ಚಿನ ಉತ್ಸಾಹದಲ್ಲಿ ಪ್ರಖರವಾಗಿ ಅವರ ಆಲೋಚನೆ ಕರ್ನಾಟಕದ ಮನೆ ಮನ ಮುಟ್ಟಿಸುವ ಶಕ್ತಿ, ಯೋಜನೆ, ಯೋಚನೆ ಅವರಿಗೆ ಹಾಗೂ ಅವರ ಮಾರ್ಗದರ್ಶನದ ನಮ್ಮ ತಂಡಕ್ಕಿದೆ ಎಂದು ಪೋಸ್ಟ್ ನ್ನ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ-https://suddilive.in/archives/8728

Related Articles

Leave a Reply

Your email address will not be published. Required fields are marked *

Back to top button

Notice: ob_end_flush(): Failed to send buffer of zlib output compression (0) in /home/twzwscfi/suddilive.in/wp-includes/functions.php on line 5373