ಕ್ರೈಂ ನ್ಯೂಸ್

ಸಿಮೆಂಟ್ ಲಾರಿ ಪಲ್ಟಿ-ಓರ್ವ ಸಾವು-ಇಬ್ಬರು ಗಾಯ

ಸುದ್ದಿಲೈವ್/ಕಾರ್ಗಲ್

ಸಿಮೆಂಟ್ ಲಾರಿ ಪಲ್ಟಿಯಾಗಿದೆ. ಸ್ಥಳದಲ್ಲೇ ಓರ್ವ ಸಾವುಕಂಡಿದ್ದಾನೆ.  ಚಾಲಕ ಸೇರಿ ಇರ್ವರು ಗಾಯಗೊಂಡಿದ್ದು, ಅವರನ್ನ ಆಸ್ಪತ್ರೆಗೆದಾಖಲಿಸಿದ್ದಾನೆ.  ಕಾರ್ಗಲ್ ಪೊಲೀಸ್ ಠಾಣಾ ಸರಹದ್ದಿನಲ್ಲಿ ಅಪಘಾತ ನಡೆದಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದಾರೆ.

ಕಾರ್ಗಲ್  ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಕಾರ್ಗಲ್ ನಲ್ಲಿ ಇಂದು ಸಂಜೆ ಸುಮಾರು 04:30 ಗಂಟೆಯ ಹೊತ್ತಿನಲ್ಲಿ ಸಿಮೆಂಟ್ ಚೀಲಗಳನ್ನೂ ತುಂಬಿದ ಲಾರಿ ವಾಹನ ಸಂಖ್ಯೆಯ KA 15 A 1383 ಲಾರಿಯೂ ಆಕಸ್ಮಿಕವಾಗಿ ಇಡುವಾಣಿ ಸಮೀಪದ ಅಪಾಯಕಾರಿ ತಿರುವಿನಲ್ಲಿ ಪಲ್ಟಿ ಹೊಡೆದಿತ್ತು.

ಅಪಘಾತದಲ್ಲಿ ತಾಳಗುಪ್ಪ ಅಂಬೇಡ್ಕರ್ ಕಾಲೋನಿ ನಿವಾಸಿ ರಾಮು ಎಂಬಾತ ಲಾರಗೆ ಸಿಕ್ಕಿ ಮೃತ ಪಟ್ಟಿದ್ದಾನೆ.  ಚಾಲಕ ಸೇರಿ ಇನ್ನೂ ಉಳಿದವರು ಸ್ಥಳೀಯ ಆಸ್ಪತ್ರೆಗೆ ದಾಖಲಾಗಿರುವ ಮಾಹಿತಿ ಲಭ್ಯವಾಗದೆ, ಅಪಘಾತ ಸ್ಥಳದಲ್ಲಿ ಕಾರ್ಗಲ್ ಠಾಣಾ ಪೊಲೀಸರು ಹಾಜರಿದ್ದು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

ಇದನ್ನೂ ಓದಿ-https://suddilive.in/archives/7715

Related Articles

Leave a Reply

Your email address will not be published. Required fields are marked *

Back to top button