ಕ್ರೈಂ ನ್ಯೂಸ್

ನಕ್ಸಲ್ ನಿಗ್ರಹದಳದ ಭೇಟಿ ಬಗ್ಗೆ ಎಸ್ಪಿ ಹೇಳಿದ್ದೇನು?

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗ ಜಿಲ್ಲೆಯಲ್ಲಿ ನಕ್ಸಲ್ ಚಟುವಟಿಕೆ ಸಂಪೂರ್ಣ ನಿಯಂತ್ರಣದಲ್ಲಿದೆ. ಈ ನಡುವೆ ಜಿಲ್ಲೆಯ ಸಾಗರ ತಾಲೂಕಿನ ಎಸ್.ಎಸ್.ಬೋಗ್ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕೆಲ ಗ್ರಾಮಗಳಲ್ಲಿ ನಕ್ಸಲ್ ಚಟುವಟಿಕೆಯ ಶಂಕೆ ವ್ಯಕ್ತವಾದ ಹಿನ್ನಲೆಯಲ್ಲಿ ನಕ್ಸಲ್ ನಿಗ್ರಹ ಪಡೆ ಭೇಟಿ ನೀಡಿರುವ ಬಗ್ಗೆ ಎಸ್ಪಿ ಮಿಥುನ್ ಕುಮಾರ್ ಜಿ.ಕೆ ಪ್ರತಿಕ್ರಿಯಿಸಿದ್ದಾರೆ.

ಸಾಗರ ತಾಲೂಕಿನ ಮರಾಠಿ ಕ್ಯಾಂಪ್ ಸುತ್ತಮುತ್ತ ನಕ್ಸಲ್ ನಿಗ್ರಹ ಪಡೆ ಸಿಬ್ಬಂದಿಗಳು ಭೇಟಿಯಾಗಿರುವ ಸುದ್ದಿಯನ್ನ ಎಸ್ಪಿ ನಿರಾಕರಿಸಿದ್ದಾರೆ.

ಸಾಗರ ತಾಲೂಕಿನ ಎಸ್.ಎಸ್.ಬೋಗ್ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮರಾಠಿ ಕ್ಯಾಂಪ್, ಮುರಳ್ಳಿ ಗ್ರಾಮಗಳಿಗೆ ಕಳೆದ ಶನಿವಾರ ನಕ್ಸಲ್ ನಿಗ್ರಹ ಪಡೆ ಭೇಟಿ ನೀಡಿ ಪರಿಶೀಲಿಸಿದೆ. ಈ ವೇಳೆ ಮೂವರು ಶಂಕಿತರನ್ನು ವಶಕ್ಕೆ ಪಡೆದು ಕರೆದೊಯ್ದಿದೆ ಎಂದು ಸುದ್ದಿಯಾಗಿತ್ತು. ಆದರೆ ಈ ಬಗ್ಗೆ ಎಸ್ಪಿ ಪ್ರತಿಕ್ರಿಯಿಸಿದ್ದು ಈ ಮಾಹಿತಿ ಸತ್ಯಕ್ಕೆ ದೂರವಾದದ್ದು ಎಂದು ಹೇಳಿದ್ದಾರೆ.

ಮರಾಠಿ ಹಾಗೂ ಮುರಳ್ಳಿ ಗ್ರಾಮಗಳು ಮೂಕಾಂಬಿಕ ಅಭಯಾರಣ್ಯಕ್ಕೆ ಹೊಂದಿಕೊಂಡಿರುವ ಗ್ರಾಮಗಳಾಗಿವೆ. ಇತ್ತೀಚೆಗೆ ಸದರಿ ಗ್ರಾಮಗಳಲ್ಲಿ ಅನುಮಾನಾಸ್ಪದ ವ್ಯಕ್ತಿಗಳು ಓಡಾಡುತ್ತಿದ್ದರು ಎಂಬ ಮಾಹಿತಿ ಆಧಾರದಮೆರೆಗೆ ಎನ್ ಎನ್ ಎಫ್ ಬಂದು ಭೇಟಿ ನೀಡಿರುವ ಬಗ್ಗೆ ಯಾವುದೇ ಖಚಿತವಾಗಿಲ್ಲ ಎಂದು ಎಸ್ಪಿ ಹೇಳಿದರು.

ಇದನ್ನೂ ಓದಿ-https://suddilive.in/archives/13395

Related Articles

Leave a Reply

Your email address will not be published. Required fields are marked *

Back to top button