ಸ್ಥಳೀಯ ಸುದ್ದಿಗಳು

ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು -ಈಶ್ವರಪ್ಪ

ಸುದ್ದಿಲೈವ್/ಶಿವಮೊಗ್ಗ

ಬರಗಾಲ ಬಂದಿರುವ ಈ ನಿಮಿಷಕ್ಕು ಒಬ್ವರಿಗು ಬೆಳೆ ಪರಿಹಾರ ಬಂದಿಲ್ಲ.10 ಸಾವಿರ ಕೋಟಿ‌ ಮುಸ್ಲಿಂರಿಗೆ ಕೊಡ್ತೀವಿ ಅಂತ ಸಿಎಂ ಹೇಳಿದ್ದಾರೆ. ಮಹಮ್ಮದ್ ಬಿನ್ ತೊಘಲಕ್ ಸರಕಾರವನ್ನು ರಾಜ್ಯದ ಜ‌ನ ತೆಗೆದು ಹಾಕ್ತಾರೆ ಎಂದು ದೂರಿದರು.

ಸುದ್ದಿಗಾರರೊಂದಿಗೆ ಮಾತನಾಡಿ, ಪಿಎಫ್ ಐ ಆಸೆ ಈಡೇರಿಸಲು ಕುತಂತ್ರ ರಾಜಕಾರಣಕ್ಕೆ ಸಿದ್ದರಾಮಯ್ಯ ಕೈ ಹಾಕಿದ್ದಾರೆ. ರಾಜ್ಯದಲ್ಲಿ ಶಾಲೆಯಲ್ಲಿ ಸಮವಸ್ತ್ರ ಇದೆ. ಹಿಜಬ್ ಹಾಕೊಂಡು‌ಬಂದ್ರೆ ಒಂದು ರೂಮಲ್ಲಿ‌ ಹೋಗಿ‌ ಬಿಚ್ಚಿಡೋರು. ಈ ಶಿಸ್ತಿಗೆ ಸಿದ್ದರಾಮಯ್ಯ, ಕಾಂಗ್ರೆಸ್ ಏಕೆ ಅಡ್ಡ ಬರುತ್ತಿದ್ದಾರೆ ಎಂದು ದೂರಿದರು.

ಕಾನೊನು ಸಚಿವರು‌ ಈಗಲಾದರೂ ನಾನು ಇದ್ದೀನಿ ಅಂತಾ ತೋರಿಸಬೇಕು. ಕಾನೊನು ಸಚಿವ ಕಾನೊನು ‌ಓದಿದ್ದರೆ ಇದನ್ನು‌ ಸಿದ್ದರಾಮಯ್ಯ ಅವರಿಗೆ ತಿಳಿಸಬೇಕು. ಈ ಆದೇಶ‌ ಜಾರಿಗೆ ತರಲು ಅವಕಾಶ ಕೊಡಬಾರದು. ಇದು ಒಂದು ವೇಳೆ ಜಾರಿಯಾದರೆ ಕಾನೊನು ಸಚಿವರಾಗಿ ಮುಂದುವರಿಯಬಾರದು ಎಂದರು.

ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕುಪಕ್ಷದ ವತಿಯಿಂದ ಕಾನೊನು ಹೋರಾಟ ಮಾಡ್ತೀವಿ.  ಯಾವುದೇ ಕಾರಣಕ್ಕು ಕಾನೊನು ಹೋರಾಟ ಬಿಡುವುದಿಲ್ಲ ಎಂದರು.

ಇದನ್ನೂ ಓದಿ-https://suddilive.in/archives/5311

Related Articles

Leave a Reply

Your email address will not be published. Required fields are marked *

Back to top button