ರಾಜಕೀಯ ಸುದ್ದಿಗಳು

ಕಾಂಗ್ರೆಸ್ ಪಕ್ಷದ್ದು 6 ತಿಂಗಳಲ್ಲಿ 6 ಬಾಳಾಗಿದೆ-ಆರ್ ಅಶೋಕ್

ಸುದ್ದಿಲೈವ್/ಶಿವಮೊಗ್ಗ

ವಿಜೇಂದ್ರರನ್ನ ರಾಜ್ಯಾಧ್ಯಕ್ಷ ಮಾಡಿರುವುದು ರಾಜ್ಯಾದ್ಯಂತ ಚರ್ಚೆ ಆಗುತ್ತಿದೆ ಎಂದು ವಿಪಕ್ಷ ನಾಯಕ‌ ಆರ್ ಅಶೋಕ್ ತಿಳಿಸಿದರು.

ಅವರು ಶಿಕಾರಿಪುರದ ಹಳೇ ಸಂತೆ ಮೈದಾನದಲ್ಲಿ ನಡೆದ ಮತ್ತು ಅಭಿನಂದನಾ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.

ರಾಜ್ಯದಲ್ಲಿ ಜೋಡೆತ್ತುಗಳು ಬೇಕಿತ್ತು. ಹಾಗಾಗಿ ನನ್ನನ್ನ ಮತ್ತು ವಿಜೇಂದ್ರರನ್ನ ಆಯ್ಕೆ ಮಾಡಲಾಗಿದೆ. ಆ ಜೋಡೆತ್ತು ಅಲ್ಲ ಅದು ಕಳ್ಳೆತ್ತು ಎಂದು ಕಾಂಗ್ರೆಸ್ ನ ಡಿಕೆಶಿ ಮತ್ತು ಸಿಎಂ‌ ಸಿದ್ದರಾಮಯ್ಯನವರ ವಿರುದ್ಧ ಹೆಸರು  ಉಲ್ಲೇಖಿಸದೆ ಮಾತನಾಡಿದರು.

ಬಿ.ಆರ್ ಪಾಟೀಲ್ ರ ಪತ್ರ ಕಾಂಗ್ರೆಸ್  ಗೆ ಮುಜುಗರ ತಂದಿದೆ. ಇಡೀ ರಾಜ್ಯದಲ್ಲಿ ವಿಜೇಂದ್ರ ಮತ್ತು ನನ್ನ ಆಯ್ಕೆ ಮತ್ತೊಮ್ಮೆ ಪಕ್ಷವನ್ನ‌ಅಧಿಕಾರಕ್ಕೆ ತರಲಿದೆ ಎಂದು ಭವಿಷ್ಯ ನುಡಿದರು.

ವಿಜೇಂದ್ರ ಹಾಗೆ ಮೇಲಿಂದ ಕೆಳೆಗೆ ಇಳಿದು ಬಂದು ಬಿಜೆಪಿ ಅಧ್ಯಕ್ಷರಾಗಿಲ್ಲ. ಕಾರ್ಯಕರ್ತ, ಯುವ ಮೋರ್ಚಾದ ಅಧ್ಯಕ್ಷರಾಗಿ ನಂತರ  ಪಕ್ಷದ ರಾಜ್ಯ ಉಪಾಧ್ಯಕ್ಷರಾದರು.  ನಂತರ ಉಪಾಧ್ಯಕ್ಷರ ನಂತರ ಇರೋದೆ ರಾಜ್ಯಾಧ್ಯಕ್ಷ ಸ್ಥಾನ ಅದು ಅವರಿಗೆ ಈಗ ದಕ್ಕಿದೆ. ಕೆಲವರಿಗೆ ಹೊಟ್ಟೆ ಉರಿ ಹತ್ತಿದೆ ಎಂದು ಹೇಳಿದರು.

ನನ್ನ ವಿರುದ್ಧ ಕುತಂತ್ರವಾಗಿ ಮಾತನಾಡಿದ್ದರು. ನನಗೆ ಟಿಕೇಟ್ ತಪ್ಪಿಸಲು ಯತ್ನಿಸಲಾಗಿತ್ತು. 28% ಪೋಲಿಂಗ್ ಆಗಿದ್ದ ಉತ್ತರಹಳ್ಳಿಯಲ್ಲಿ 14 ಲಕ್ಷ ಮತದಾನರಿದ್ದಾರೆ. ಅಲ್ಲಿ 28% ಪೋಲಿಂಗ್ ಆಗಿದೆ. ಆಗ ಬಿಎಸ್ ವೈ ನನ್ನ ಬೆಂಬಲಿಸಿ ತಾಕತ್ತಿದ್ದರೆ ಸೋಲಿಸಿ ಎಂದು ಸವಾಲು ಎಸೆದಿದ್ದರು. ಇಂದು ಶಾಸಕರಾಗಿ ಗೆದ್ದು ಬಂದಿದ್ದೇನೆ. ಅದಕ್ಕೆ ಬಿಎಸ್ ವೈ ಕಾರಣ ಎಂದು ಹಾಡಿ ಹೊಗಳಿದರು.

ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ತ್ರಿವರ್ಣ ಧ್ವಜ ಹಾರಿಸಿರುವ ಬಗ್ಗೆ ನೆನಪಿಸಿಕೊಂಡ ಅಶೋಕ್ ಕಾರ್ಯಕರ್ತರನ್ನ ಹೇಗೆ ನಡೆಸಿಕೊಳ್ಳಬೇಕೆಂಬುದನ್ನ ಬಿಎಸ್ ವೈ ನಿಂದ ಕಲಿಯಬೇಕು. ನಗರಕ್ಕೆ ಸೀಮಿತವಾಗಿದ್ದ ಬಿಜೆಪಿಯನ್ನ ಹಳ್ಳಿ ಹಳ್ಳಿಗೆ  ತಲುಪಿದೆ ಎಂದರೆ ಯಡಿಯೂರಪ್ಪನವರ ಶ್ರಮ ಇದೆ ಎಂದು ಹೇಳಿದರು.

ಕಾಂಗ್ರೆಸ್ ಚುನಾವಣೆ ಪೂರ್ವ ಗ್ಯಾರೆಂಟಿಗಳು ಇಂದು ಶಾಲೆ ಕಟ್ಟಲು ಆಸ್ಪತ್ರೆ, ರಸ್ತೆ ನಿರ್ಮಾಣಕ್ಕೆ ಹಣ ಇಲ್ಲದಂತಾಗಿದೆ. ವಿದ್ಯುತ್ ಕಾಣೆಯಾಗಿದೆ. ಬರಗಾಲ ತಾಂಡವಾಡಿದೆ. ತೆನೆ ಒಡೆದಿಲ್ಲ ಕಾಳು ಕಟ್ಟುತ್ತಿಲ್ಲ. 245 ತಾಲೂಕಿನಲ್ಲಿ 236  ತಾಲೂಕು ಬರ ಎಂದು ಘೋಷಿಸಲಾಗಿದೆ. ಆದರೆ ಹಣ ಇಲ್ಲವೆಂದು ಕಾಂಗ್ರೆಸ್ ಕೇಂದ್ರದ ಮೇಲೆ ಗೂಬೆ ಕೂರಿಸಲಾಹುಗುತ್ತಿದೆ.

ಬಿಜೆಪಿಯ ಕಾಲದಲ್ಲಿ ಅತಿವೃಷ್ಠಿ ವೇಳೆ ಸಮಗ್ರ ಹಣವನ್ನ ಒಂದು ತಿಂಗಳು ಹಣ ಹಂಚಲಾಗಿತ್ತು.‌ಬರ ಎಂದು ಘೋಷಿಸಿ ಮೂರು ತಿಂಗಳು ಹಣ ಬಂದಿಲ್ಲ. 6 ತಿಂಗಳಲ್ಲಿ 6 ಬಾಳಾಗಿದೆ. ಹಲೋ ಅಪ್ಪಾ ಎಂಬ ಯತೀಂದ್ರ ಅವರ ವಿಡಿಯೋ ಬಗ್ಗೆ ಮಾತನಾಡಿದ ಅಶೋಕ್ ಅಭಿವೃದ್ಧಿಯ ಕಾರ್ಯ ಕುಂಠಿತವಾಗಿದೆ ಎಂದು ದೂರಿದರು.

ಟಿಸಿ ಬರ್ನ್ ಆದರೆ ಮೂರೇ ಮೂರು ಗಂಟೆಯಲ್ಲಿ ತಂದು ಹಾಕಲಾಗುತ್ತಿತ್ತು. ಆದರೆ  ಗುಲ್ಬರ್ಗದಲ್ಲಿ ಟಿಸಿ ಕೆಟ್ಟುಹೋದ ಕಡೆವೀಕ್ಷಣೆಗೆ ಹೋಗಿದ್ದೆ. ರೈತರು ಇದ್ದಲು, ಉಪ್ಪು, ಏಣಿ ಮತ್ತು ಟಿಸಿ ಸಾಗಾಣಿಕೆಗೆ ವಾಹನವನ್ನ ತಂದು ಕೊಡುವ ಪರಿಸ್ಥಿತಿ ಬಂದಿದೆ.  ಇದು ರಾಜ್ಯದ ರೈತರ ಪರಿಸ್ಥಿತಿಯಾಗಿದೆ ಎಂದು ಬಣ್ಣಿಸಿದರು.

ಬೆಳಗಾವಿ ಅಧಿವೇಶನದಲ್ಲಿ ನಾವು ಕಾಂಗ್ರೆಸ್ ಸರ್ಕಾರವನ್ನ ಟೇಬಲ್ ಕುಟ್ಟಿ ಮಾತನಾಡಲಿದ್ದೇವೆ ಎಂದರು.

ಇದನ್ನೂ ಓದಿ-https://suddilive.in/archives/4020

Related Articles

Leave a Reply

Your email address will not be published. Required fields are marked *

Back to top button

Notice: ob_end_flush(): Failed to send buffer of zlib output compression (0) in /home/twzwscfi/suddilive.in/wp-includes/functions.php on line 5373