ಸ್ಥಳೀಯ ಸುದ್ದಿಗಳು

ಶಿಕಾರಿ ‘ವೀರನ’ ಭೇಟಿಯ ಮುನ್ನಕ್ಕೂ ಜಿಲ್ಲಾ ಉಸ್ತುವಾರಿ ಸಚಿವರ ಭೇಟಿ

ಸುದ್ದಿಲೈವ್/ಶಿವಮೊಗ್ಗ

ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ಶಿವಮೊಗ್ಗದಲ್ಲಿ ರಾಜಕಾರಣ ರಂಗೇರುತ್ತಿದೆ. ಲೋಕಸಭಾ ಚುನಾವಣೆಗೆ ಇನ್ನು ಕೆಲ ತಿಂಗಳು ಬಾಕಿ ಉಳಿದಿದೆ. ಆದರೆ‌ ಇದೇ‌ ಜಿಲ್ಲೆಯ ಶಾಸಕರು ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದಾರೆ. ಆ ರಾಜ್ಯಾಧ್ಯಕ್ಷರು‌ ನಾಳೆ ಶಿವಮೊಗ್ಗ ಮತ್ತು ನಾಡಿದ್ದು ಶಿಕಾರಿಪುರಕ್ಕೆ ಭೇಟಿ ನೀಡುತ್ತಿದ್ದಾರೆ.

ನಾಳೆ ಮತ್ತು ನಾಡಿದ್ದು, ಶಿಕಾರಿ ವೀರರಾದ ಬಿ.ವೈ.ವಿಜೇಂದ್ರರ ಭೇಟಿ ಬೆನ್ನಲ್ಲೇ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪನವರ ಭೇಟಿ ಬಹಳ ಕುತೂಹಲ ಮೂಡಿಸಿದೆ. ನ.26 ಮತ್ತು 27 ರಂದು ಶಿವಮೊಗ್ಗದಲ್ಲಿಯೇ ಇದ್ದ ಸಚಿವರು ಮತ್ತೆ ನಾಳೆ ಜಿಲ್ಲೆಗೆ ಭೇಟಿ ಕೊಡುತ್ತಿದ್ದಾರೆ. ಅದರಲ್ಲೂ ಶಿಕಾರಿಪುರಕ್ಕೆ ಭೇಟಿ ನೀಡುತ್ತಿರುವುದು ಹಾಗೂ ಶಿಕಾರಿ ವೀರನ ಬಹಿರಂಗ ಸಭೆಯ ಮುಂಚೆ ಸಚಿವರ ಭೇಟಿಯಾಗುತ್ತಿರುವುದು ಕುತೂಹಲ ಮೂಡಿಸಿದೆ.

ಈಗಾಗಲೇ ಸುದ್ದಿಗೋಷ್ಠಿ ನಡೆಸಿದ್ದ ಸಚಿವರ ಬರ ನಿರ್ವಾಹಣೆಯ ಸಭೆಯನ್ನ ಭದ್ರಾವತಿ ಮತ್ತು ಶಿಕಾರಿಪುರದಲ್ಲಿ ನಡೆಸಿಲ್ಲ ಎಂದು ತಿಳಿಸಿದ್ದರು. ನಾಳೆ ಹಾವೇರಿ ಜಿಲ್ಲೆಯ ಬ್ಯಾಡಗಿಯ ಕದರಮಂಡಲಗಿಯಿಂದ ಶಿಕಾರಿಪುರಕ್ಕೆ ಸಚಿವ ಮಧು ಬಂಗಾರಪ್ಪ ಆಗಮಿಸಲಿದ್ದಾರೆ.

ಶಿಕಾರಿಪುರ ತಾಲೂಕಿನ ಬರಗಾಲ, ಕುಡಿಯುವ ನೀರಿನ ಸಮಸ್ಯೆ ಹಾಗೂ ಪ್ರಗತಿ ಪರಿಶೀಲನೆ ಸಭೆಯನ್ನ ಹಮ್ಮಿಕೊಂಡಿದ್ದಾರೆ. ನಾಳೆ ಸಂಜೆ 4-30 ಕ್ಕೆ ಸಭೆ ಆರಂಭವಾಗಲಿದೆ.

ಇದನ್ನೂ ಓದಿ-https://suddilive.in/archives/3868

Related Articles

Leave a Reply

Your email address will not be published. Required fields are marked *

Back to top button