ಸ್ಥಳೀಯ ಸುದ್ದಿಗಳು

ಕಾಳಗದಲ್ಲಿ ಡಿಚ್ಚಿಗಳು ಎಣೆಸುಂತೆ ಮಾಡಿವೆ ಟಗರುಗಳು

ಸುದ್ದಿಲೈವ್/ಶಿವಮೊಗ್ಗ

ಕೋಟೆ ಶ್ರೀ ಮಾರಿಕಾಂಬ ಗೆಳೆಯರ ಬಳಗದಿಂದ 7ನೇ ಬಾರಿಗೆ ರಾಜ್ಯಮಟ್ಟದ ಟಗರಿನ ಕಾಳಗ ಇಂದು  ಬೆಳಿಗ್ಗೆ 9 ಗಂಟೆಗೆ ನ್ಯಾಷನಲ್ ಕಾಲೇಜು (ಎನ್ ಇ ಎಸ್) ಆವರಣ ( ಕುವೆಂಪು ರಂಗಮಂದಿರ ಪಕ್ಕ) ಆರಂಭಗೊಂಡಿದೆ.‌

ಟಗರಿನ ಡಿಚ್ಚಿಗೆ ಪ್ರೇಕಕ್ಷಕ ಕೇಕೆ ಶಿಳ್ಳೆಗಳು ಮುಗಿಲು ಮುಟ್ಟಿವೆ. ರೋಮಾಂಚನದ ಈ ಕಾಳಗ ಮಾಲೀಕರಿಗೆ ಹೆಚ್ಚು ಸ್ಕೋಪ್ ತಂದುಕೊಟ್ಟರೆ ಪ್ರೇಕ್ಷಕನಿಗೆ ಮನರಂಜನೆ ತಂದುಕೊಡುತ್ತಿದೆ ಒಂದೊಂದು ಡಿಚ್ಚಿಗೆ ಟಗರುಗಳು ಗಟ್ಟಿಯಾಗಿ ನಿಂತು ಮತ್ತೊಂದು ಡಿಚ್ಚಿಗೆ ಸಿದ್ದವಾಗುವುದು ಮೈನವಿರೇಳುಸುತ್ತವೆ.

ಡಿಚ್ಚಿಗೆ ಎದುರಾಳಿ ಟಗರು ದಬ್ಬಾಕೊಂಡರೆ ಅಥವಾ ಓಡಿ ಹೋದರೆ ಡಿಚ್ಚಿ ಇಟ್ಟ ಟಗರು ಗೆದ್ದಂತೆ. ನಾಲ್ಕೈದು ರೌಂಡಿಗೆ ಒಂದೊಂದು ಟಗರುಗಳು ಕಾಳಗಕ್ಕೆ ಬೆನ್ನು ತೋರುತ್ತಿವೆ. ವಿಜಯಪುರ, ದಾವಣಗೆರೆ, ಬಾಗಲಕೋಟೆ, ಹಾವೇರಿ ಮೊದಲಾದ ಉತ್ತರ ಕನ್ನಡದ ಟಗರುಗಳು ಬಂದಿವೆ.

ಇದು ಶಿವಮೊಗ್ಗದ ಕೋಟೆ ಮಾರಿಕಾಂಬ ಜಾತ್ರೆಯ ಟಗರು ಕಾಳಗದ ಸ್ಪೆಷಲ್. ಈ ಕಾಳಗದಲ್ಲಿ ಈಗಾಗಲೇ 100 ಕ್ಕೂ ಅಧಿಕ ಟಗರುಗಳು ನೋಂದಣಿಯಾಗಿವೆ. ಕಾಳಗಗಕ್ಕೆ ಬಹುಮಾನವನ್ನ ಇರಿಸಲಾಗಿದೆ. ಈ ಟಗರಿನ ನೋಂದಣಿ ಸಂಜೆಯ ವೇಳೆಗೆ ಹೆಚ್ಚಾಗುವ ಸಂಭವವಿದೆ. 8 ಹಲ್ಲಿನ ಕುರಿಗೆ ಪ್ರಥಮ ಬಹುಮಾನ 1ಲಕ್ಷರೂ, ದ್ವಿತೀಯ ಬಹುಮಾನ 50 ಸಾವಿರರೂ, 3ನೇ ಬಹುಮಾನ ಬೆಳ್ಳಿ ಗಧೆ, 4ನೇ ಬಹುಮಾನ ಟ್ರೋಫಿ ಇರುತ್ತದೆ. ಪ್ರವೇಶ ದರ 800 ರೂ. ನಿಂದ 2500 ರೂ. ವರೆಗೆ ಇವೆ.
6 ಹಲ್ಲಿನ ಕುರಿಗೆ ಪ್ರಥಮ ಬಹುಮಾನ51 ಸಾವಿರರೂ, ದ್ವಿತೀಯ ಬಹುಮಾನ 25 ಸಾವಿರರೂ, ತೃತೀಯ ಬಹುಮಾನ ಬೆಳ್ಳಿಗಧೆ, 4ನೇ ಬಹುಮಾನ ಟ್ರೋಫಿ, ಪ್ರವೇಶ ದರ 2ಸಾವಿರರೂಗಳು. 4 ಹಲ್ಲಿನ ಕುರಿಗೆ ಪ್ರಥಮ ಬಹುಮಾನ 40ಸಾವಿರರೂ, ದ್ವಿತೀಯ 20 ಸಾವಿರರೂ, ತೃತೀಯ ಬೆಳ್ಳಿಗಧೆ, ೪ನೇ ಬಹುಮಾನ ಟ್ರೋಫಿ.ಪ್ರವೇಶದರ 1.500ರೂ. ಆಗಿದೆ.

2ಹಲ್ಲಿನ ಕುರಿಗೆ ಪ್ರಥಮ 30 ಸಾವಿರರೂ, ೨ನೇ ಬಹುಮಾನ 15 ಸಾವಿರರೂ, ೩ನೇ ಬಹುಮಾನ ಬೆಳ್ಳಿ ಗಧೆ, 4ನೇ ಬಹುಮಾನ ಟ್ರೋಫಿ, ಪ್ರವೇಶ ದರ 1ಸಾವಿರರೂಗಳು.ಮರಿ ಕುರಿಗೆ ಪ್ರಥಮ ಬಹುಮಾನ 15 ಸಾವಿರರೂ, ದ್ವಿತೀಯ 7.500ರೂ, ತೃತೀಯ ಬೆಳ್ಳಿಗಧೆ, 4ನೇ ಬಹುಮಾನ ಟ್ರೋಫಿ, ಪ್ರವೇಶ ದರ 800ರೂ ಆಗಿದೆ. ಈ ಕಾಳಗ ರಾತ್ರಿಯ ವರೆಗೆ ಜರಗುವ ಸಂಭವ ಹೆಚ್ಚಿದೆ.

ಇದನ್ನೂ‌ ಓದಿ-https://suddilive.in/archives/10441

Related Articles

Leave a Reply

Your email address will not be published. Required fields are marked *

Back to top button