ಎಣ್ಣೆ ಗಲಾಟೆ ತುಂಗ ನಗರ ಪೊಲೀಸ್ ಠಾಣೆಯಲ್ಲಿ ಒಂದೇ ದಿನ ಮೂರು ಪ್ರಕರಣ ದಾಖಲು

ಸುದ್ದಿಲೈವ್/ಶಿವಮೊಗ್ಗ

ಎರಡು ಪ್ರತ್ಯೇಕ ಎಣ್ಣೆ ಗಲಾಟೆಯಲ್ಲಿ ಮೂರು ಎಫ್ಐಆರ್ ದಾಖಲಾಗಿದೆ. ಒಂದು ಘಟನೆಯಲ್ಲಿ ದೂರು ಪ್ರತಿದೂರು ದಾಖಲಾದರೆ ಮತ್ತೊಂದು ಪ್ರಕರಣದಲ್ಲಿ ಯಾಕೆ ಗುರಾಯಿಸ್ತಿದ್ಯಾ ಎಂದು ಕೇಳಿದ್ದಕ್ಕೆ ಹಲ್ಲೆಗಳಾಗಿವೆ.
ಭರತ್ ನಾಯ್ಕ್ ಯಾನೆ ದರ್ಶನ್, ಕಾರ್ತಿಕ್, ಶರತ್ ಮತ್ತು ಇತರೆ ಮೂವರ ವಿರುದ್ಧ ಕಾರ್ತಿಕ್ ಮತ್ತು ದಿನೇಶ್ ದೂರು ದಾಖಲಿಸಿದ್ದಾರೆ. ಪ್ರತಿಯಾಗಿ ಭರತೇಶ್ ಯಾನೆ ದರ್ಶನ್ ಸಹ ಕಾರ್ತಿಕ್ ಮತ್ತು ದಿನೇಶ್ ವಿರುದ್ಧ ಪ್ರತಿ ದೂರು ನೀಡಿದ್ದಾರೆ.
ಕಾರ್ತಿಕ್ ಮತ್ತು ದಿನೇಶ್ ಮಲವಾಗೊಪ್ಪದ ಮದ್ಯದಂಗಡಿ ಯೊಂದರಲ್ಲಿ ಮದ್ಯ ಖರೀದಿಸಿ ಬರುತ್ತಿದ್ದವರಿಗೆ ದಿನೇಶ್ ಮತ್ತು ಯುವರಾಜ ಎಂಬುವರ ನಡುವೆ ಮಾತಿನ ಚಕಮಕಿ ನಡೆದಿದೆ. ಅಲ್ಲೇ ಇದ್ದ ದರ್ಶನ್ ಕರೆ ಮಾಡಿ ನಾಲ್ವರನ್ನ ಸ್ಥಳಕ್ಕೆ ಕರೆಸಿದ್ದಾನೆ. ಬೈಕ್ ನಲ್ಲಿಬಂದ ನಾಲ್ವರು ದಿನೇಶ್ ಮತ್ತು ಕಾರ್ತಿಕ್ ಜೊತೆ ಜಗಳ ಮಾಡಿ ಹಲ್ಲೆ ಮಾಡಿದ್ದಾರೆ.
ವೈನ್ ಶಾಪ್ ಮುಂದೆ ಬಿದ್ದಿದ್ದ ಖಾಲಿ ಬಿಯರ್ ಬಾಟಲಿಯಿಂದ ದರ್ಶನ್ ಹಲ್ಲೆ ನಡೆಸಿದ್ದಾನೆ. ಉಳಿದವರು ದೊಣ್ಣೆಯಿಂದ ಹಲ್ಲೆ ನಡೆಸಿರುವುದಾಗಿ ಕಾರ್ತಿಕ್ ತುಂಗ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಅದರಂತೆ ಭರತ್ ನಾಯ್ಕ್ ಯಾನೆ ದರ್ಶನ್ ಕಾರ್ತಿಕ್ ಮತ್ತು ದಿನೇಶ್ ಇಲ್ಲಸಲ್ಲದ ವಿಚಾರಕ್ಕೆ ಅಡ್ಡಕಟ್ಟಿ ಹಲ್ಲೆ ನಡೆಸಿರುವುದಾಗಿ ದೂರು ದಾಖಲಿಸಿದ್ದಾರೆ.
ಅದರಂತೆ ಗೋಪಾಳದಲ್ಲಿ ಹೊಸದಾಗಿ ಆರಂಭಗೊಂಡಿರುವ ಎಣ್ಣೆ ಅಂಗಡಿಯಲ್ಲಿ ಖರೀದಿ ಮಾಡಿದ್ದ ಗೌಸ್ ಪಾಶ ಮತ್ತು ನಿಹಾಲ್ ಎಂಬುವರಿಗೆ ಅಲ್ಲೇ ನಿಂತಿದ್ದವರು ಗುರಾಯಿಸಿದ್ದಾರೆ. ಯಾಕೆ ಗುರಾಯಿಸುತ್ತಿದ್ದೀರ ಎಂದು ನಿಹಾಲ್ ಕೇಳಿದ್ದಕ್ಕೆ ಆತನ ಮೇಲೆ ಬಿಯರ್ ಬಾಟಲಿನಿಂದ ಹಲ್ಲೆಯಾಗಿರುವುದಾಗಿ ದೂರು ದಾಖಲಾಗಿದೆ. ನಾಗರೀಕ ಸಮಾಜ ಎಣ್ಣೆಗುಂಗಿಗಾಗಿ ಎತ್ತ ಸಾಗುತ್ತಿದೆ ಎಂಬುದು ಯಕ್ಷ ಪ್ರಶ್ನೆಯಾಗಿದೆ.
ಇದನ್ನೂ ಓದಿ-https://suddilive.in/archives/955
