ಪತ್ರಕರ್ತ ರಫಿಗೆ ಗುರುಕುಲ ನಾಡರತ್ನ ಪ್ರಶಸ್ತಿ

ಸುದ್ದಿಲೈವ್/ರಿಪ್ಪನ್ ಪೇಟೆ

ವಿಜಯನಗರ ಜಿಲ್ಲೆಯ ಹಂಪಿಯ ಕೊಟ್ಟೂರುಸ್ವಾಮಿ ಮಹಾಸಂಸ್ಥಾನ ಮಠದಲ್ಲಿ “ಸುವರ್ಣ ಕರ್ನಾಟಕ” ಸಂಭ್ರಮದ ಸವಿ ನೆನಪಿಗಾಗಿ ಆಯೋಜಿಸಿದ್ದ ಅಖಿಲ ಭಾರತ 3ನೇ ಸಾಹಿತ್ಯ ಸಮ್ಮೇಳನದಲ್ಲಿ ನಾಡು ನುಡಿ ಸೇವೆಗಾಗಿ ರಿಪ್ಪನ್ ಪೇಟೆಯ ಯುವ ಸಾಹಿತಿ ಹಾಗೂ ಯುವ ಪತ್ರಕರ್ತ,ಸಮಾಜವಾದಿ ಚಿಂತಕ ರಫಿ ರಿಪ್ಪನ್ ಪೇಟೆ ಇವರಿಗೆ ರಾಜ್ಯಮಟ್ಟದ “ಗುರುಕುಲ ನಾಡರತ್ನ” ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಸಮ್ಮೇಳನ ದಿವ್ಯ ಸಾನಿಧ್ಯವನ್ನು ಮುಪ್ಪಿನ ಬಸವಲಿಂಗ ಮಹಾಸ್ವಾಮಿಗಳ ವಹಿಸಿಕೊಂಡಿದ್ದರು.
ಅಭೂತಪೂರ್ವ ಸಾಹಿತ್ಯ ಸಮ್ಮೇಳನದಲ್ಲಿ ಈಗಾಗಲೆ ರಾಜ್ಯ ಮಟ್ಟದ ಸಾಹಿತ್ಯ ಸಿರಿ, ಗುರುಕುಲ ಶಿರೋಮಣಿ, ಕಲಾ ಶಿರೋಮಣಿ ಎಂಬ ಮೂರು ಪ್ರಶಸ್ತಿಯನ್ನು ಪಡೆದಂತಹ ಅತ್ಯುತ್ತಮ ಬರಹಗಾರ ರಿಪ್ಪನ್ ಪೇಟೆಯ ರಫ಼ಿ ರಿಪ್ಪನ್ ಪೇಟೆ ರವರಿಗೆ ಹಂಪಿಯಲ್ಲಿ ನಡೆದ ಅಖಿಲ ಭಾರತ 3ನೇ ಸಾಹಿತ್ಯ ಸಮ್ಮೇಳನದಲ್ಲಿ ನಾಡು ನುಡಿ ಸೇವೆಗಾಗಿ ಇವರ ಅನುಪಮ ಸೇವೆಯನ್ನು ಗುರುತಿಸಿ “ಗುರುಕುಲ ನಾಡರತ್ನ” ಎಂಬ ಬಿರುದಿನೊಂದಿಗೆ ಆತ್ಮೀಯವಾಗಿ ಸನ್ಮಾನಿಸಲಾಯಿತು.
ಈ ಸಂಧರ್ಭದಲ್ಲಿ ಹರಪನಹಳ್ಳಿ ತಾಲೂಕಿನ ಶ್ರೀ ಬಾಲ ಲೀಲಾ ಮಹಾಂತೇಶ ಕರಸ್ಥಳ ಸಂಜಾತ ಶ್ರೀ ಮಾನಪ್ಪಜ್ಜನವರು ನಂಬಿಗಿ ಮಠ ಹಾಗೂ ಮಾತಂಗ ಪರ್ವತ ಹಂಪಿ ಪೂಜ್ಯರಾದ ಶ್ರೀ ಶ್ರೀ ಪೂರ್ಣಾನಂದ ಭಾರತಿ, ಶ್ರೀ ಕೃಷ್ನದೇವರಾಯ ವಿವಿ ಯ ಪ್ರಸರಾಂಗ ನಿರ್ದೇಶಕ ಡಾ. ಬಿ ಜಿ ಕನಕೇಶ್ ಮೂರ್ತಿ,ದಯಾನಂದ್ ಕಿನ್ನಾಳ್ , ರಾಜ್ಯಾಧ್ಯಕ್ಷ ಲಕ್ಷ್ಮಿನಾರಾಯಣ್ ,ಕಾರ್ಯಾಧ್ಯಕ್ಷ ಡಾ ಶಿವರಾಜ್ ಹಾಗೂ ಇನ್ನಿತರರಿದ್ದರು.
ಇದನ್ನೂ ಓದಿ-https://suddilive.in/archives/3423
