ಕೊಲೆ ಆರೋಪಿಗಳಿಗೆ ಜೀವಾವಧಿ ಶಿಕ್ಷೆ

ಸುದ್ದಿಲೈವ್/ಶಿವಮೊಗ್ಗ

ಹುಣಸೆ ಮರದ ಕಸದ ವಿಚಾರದಲ್ಲಿ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯಗೊಂಡ ಪ್ರಕರಣದಲ್ಲಿ ಆರೋಪಿಗಳಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಶಿಕಾರಿಪು ಟೌನ್ ಚೌರಡೇರಕೇರಿಯ ವಾಸಿಗಳಾದ ಗೋಣಿ ಮೂರ್ತಪ್ಪ ಮತ್ತು ಪಕ್ಕದ ಮನೆಯರಾದ ಅವಿನಾಶ್, ಪ್ರಶಾಂತ್, ಗುತ್ಯಪ್ಪ ಮತ್ತು ಪ್ರದೀಪ್ ರವರುಗಳಿಗೆ ಹುಣಸೇ ಮರದ ಕಸದ ವಿಚಾರವಾಗಿ ಜಗಳ ಶುರುವಾಗಿ, ಇದೇ ದ್ವೇಶದ ಹಿನ್ನೆಲೆಯಲ್ಲಿ ಅವಿನಾಶ್, ಪ್ರಶಾಂತ್, ಗುತ್ಯಪ್ಪ ಮತ್ತು ಪ್ರದೀಪ್ ರವರುಗಳು ಸೇರಿಕೊಂಡು ಗೋಣಿ ಮೂರ್ತಪ್ಪ, (46) ಈತನ ಮೇಲೆ ಕಂದಲಿಯಿಂದ ಮಾರಣಾಂತಿಕ ಹಲ್ಲೆ ಮಾಡಿ ಕೊಲೆ ಮಾಡಿದ್ದರು.
ಈ ಕುರಿತು ಮೃತನ ಹೆಂಡತಿ ಶಿಕಾರಿಪು ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರನ್ನ ಠಾಣಾಧಿಕಾರಿಗಳು ಕಲಂ 143, 147, 148, 504, 323, 447, 506(2), 302, 307 ಸಹಿತ 149 ಐಪಿಸಿ ರೀತ್ಯಾ ಪ್ರಕರಣ ದಾಖಲಾಗಿತ್ತು.
ಪ್ರಕರಣದಲ್ಲಿ ಆಗಿನ ತನಿಖಾಧಿಕಾರಿಗಳಾದ ಶಿಕಾರಿಪುರದ ಸಿಪಿಐ ಹರೀಶ್ ಕೆ ಪಟೇಲ್, ತನಿಖೆ ಪೂರೈಸಿ ಆರೋಪಿತರ ವಿರುದ್ಧ ಘನ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರವನ್ನು ಸಲ್ಲಿಸಿದ್ದರು. ಸರ್ಕಾರಿ ಅಭಿಯೋಜಕರಾದ ಶ್ರೀಮತಿ ಹೇಮಂತ್ ಕುಮಾರ್, ಪ್ರಕರಣದ ವಾದ ಮಂಡಿಸಿದ್ದರು.
ಘನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶಿವಮೊಗ್ಗದಲ್ಲಿ ಪ್ರಕರಣದ ವಿಚಾರಣೆ ನಡೆಸಿದ್ದರು. ಮಾನ್ಯ ನ್ಯಾಯಧೀಶರಾದ ಶ್ರೀಮತಿ ಬಿ.ಆರ್ ಪಲ್ಲವಿ ರವರು ದಿನಾಂಕಃ 21-11-2023 ರಂದು ಆರೋಪಿತರ ವಿರುದ್ಧ ಕೊಲೆ ಆರೋಪ ದೃಡಪಟ್ಟ ಹಿನ್ನೆಲೆಯಲ್ಲಿ ಆರೋಪಿ 1)ಅವಿನಾಶ್ @ ಅವಿ, 25 ವರ್ಷ, ಚೌರಡೇರಕೇರಿ, ಶಿಕಾರಿಪು ಟೌನ್, 2) ಪ್ರಶಾಂತ @ ಗುಂಡ, 26 ವರ್ಷ, ಕುಂಬಾರಗುಂಡಿ ಶಿಕಾರಿಪುರ ಟೌನ್, 3) ಪ್ರದೀಪ್ ಆರ್, 28 ವರ್ಷ, ಚನ್ನಕೇಶವ ನಗರ, ಶಿಕಾರಿಪುರ ಟೌನ್* ರವರಿಗೆ ಜೀವಾವದಿ ಶಿಕ್ಷೆ ಮತ್ತು ತಲಾ ರೂ 90,000/- ದಂಡ, ದಂಡ ಕಟ್ಟಲು ವಿಫಲರಾದಲ್ಲಿ 2 ವರ್ಷ ಸಾಧಾ ಕಾರಾವಾಸ ಶಿಕ್ಷೆ ಹಾಗೂ
4) ಗುತ್ಯಪ್ಪ @ ಗೌತಮ್, 28 ವರ್ಷ, ಶಿಕಾರಿಪುರ ಟೌನ್ ಈತನಿಗೆ ಜೀವಾವದಿ ಶಿಕ್ಷೆ ಮತ್ತು ರೂ 80,000/- ದಂಡ, ದಂಡ ಕಟ್ಟಲು ವಿಫಲನಾದಲ್ಲಿ 2 ವರ್ಷ ಸಾಧಾ ಕಾರಾವಾಸ ಶಿಕ್ಷೆ ಹಾಗೂ 5) ಅಕ್ಷಯ್, 24 ವರ್ಷ, ಮಾಯಪ್ಪನಕೇರಿ ಶಿಕಾರಿಪುರ ಟೌನ್ ಈತನ ವಿರುದ್ಧ ಕಲಂ 201 ಐಪಿಸಿ ಅಡಿಯಲ್ಲಿ ಆರೋಪ ದೃಡಪಟ್ಟ ಹಿನ್ನೆಲೆಯಲ್ಲಿ 3 ವರ್ಷ ಕಾರಾವಾಸ ಶಿಕ್ಷೆ ಮತ್ತು ರೂ 10,000/- ದಂಡ, ದಂಡ ಕಟ್ಟಲು ವಿಫಲನಾದಲ್ಲಿ 03 ತಿಂಗಳು ಸಾಧಾ ಕಾರಾವಾಸ ಶಿಕ್ಷೆ ವಿಧಿಸಿ ಆದೇಶಿಸಿರುತ್ತಾರೆ.
ಇದನ್ನೂ ಓದಿ-https://suddilive.in/archives/3416
